ಹಾವೇರಿ ಜಿಲ್ಲೆಯ ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದ ಶಿಕ್ಷಕ ಸುರೇಶ ಕತ್ತೆಬೆನ್ನೂರ ಮತ್ತು ಡೈನಾ ದಂಪತಿಗಳ ಪುತ್ರಿ ಐರಾ ಕತ್ತೆಬೆನ್ನೂರ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಗೊಂಡಿದ್ದಾಳೆ.
ಐರಾ ಎರಡು ವರ್ಷ ಹತ್ತು ತಿಂಗಳ ಮಗುವಾಗಿದ್ದು, ಈ ವಯಸ್ಸಿನಲ್ಲಿ 16 ದೇಹದ ಭಾಗಗಳು (ಇಂಗ್ಲಿಷ್ -ಹಿಂದಿ), ಹದಿನೈದು ಪ್ರಾಣಿಗಳ ಹೆಸರು ( ಕನ್ನಡ -ಇಂಗ್ಲಿಷ್) ನಲ್ಲಿ , ಹತ್ತು ಕನ್ನಡ ಹಾಡುಗಳು, ಹತ್ತು ಸಾಮಾನ್ಯ ಜ್ಞಾನ ಪ್ರಶ್ನೆಗಳಿಗೆ ಉತ್ತರಗಳು, ಹತ್ತು ಅಂಕಿಗಳು (ಕನ್ನಡ ಇಂಗ್ಲಿಷ್ ಹಿಂದಿಯಲ್ಲಿ) , ಎಂಟು ಆಕ್ಸನ್ ಶಬ್ಧಗಳು, ಏಳು ವೃತ್ತಿಗಳು, ಏಳು ಫೇಮಸ್ ಪರ್ಸನಾಲಿಟಿ, ಇಪ್ಪತ್ತಾರು ಅಕ್ಷರಗಳು (ಇಂಗ್ಲಿಷ್ ಮತ್ತು ಕನ್ನಡ) ಶಬ್ದಗಳನ್ನು ಬಲ್ಲವಳಾಗಿದ್ದಾಳೆ.
ಇವಳ ಬುದ್ಧಿಶಕ್ತಿಯನ್ನು ಕಂಡು ಹಾವೇರಿ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ವಿಜಯ ಮಹಾಂತೇಶ ದಾನಮ್ಮನವರ ಸಂತಸ ವ್ಯಕ್ತಪಡಿಸಿ, ಬಹುಮಾನ ನೀಡಿ ಶುಭ ಹಾರೈಸಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ನಗರಾಭಿವೃದ್ಧಿ ಇಲಾಖೆಯ ಎಡವಟ್ಟು; 6 ತಿಂಗಳ ಹಿಂದೆ ಮೃತಪಟ್ಟಿರುವ ಇಂಜಿನಿಯರ್ ವರ್ಗಾವಣೆ!
ಮಗಳಿಗೆ ಉತ್ತಮ ತರಬೇತಿ ನೀಡಿದ ಸುರೇಶ ಕತ್ತೆಬೆನ್ನೂರ -ಡೈನಾ ದಂಪತಿಗಳಿಗೆ ಜಿಲ್ಲಾಧಿಕಾರಿಗಳಾದ ವಿಜಯ ಮಹಾಂತೇಶ ದಾನಮ್ಮನವರ, ಡಿಡಿಪಿಐ ಸುರೇಶ ಹುಗ್ಗಿ,ಬಿ ಇ ಓ ಮೌನೇಶ ಬಡಿಗೇರ , ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಮೃತಗೌಡ ಪಾಟೀಲ, ಸಿ ಜಿ ಬ್ಯಾಡಗಿ, ಮರಳಿಹಳ್ಳಿ ಸೇರಿದಂತೆ ಅನೇಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
