ಅಸ್ಪಷ್ಟ ಜನಾಂಗವನ್ನು ಹಿಂದೂ ಧರ್ಮದ ಶ್ರೇಣೀಕೃತ ಚಾತುರ್ವಣ್ರ ವ್ಯವಸ್ಥೆಯಲ್ಲಿ ಪಂಚಮರು, ಸ್ವಪಚರು, ಅಂತ್ಯಜರು ಅಂತಾ ಐದನೆಯ ವರ್ಣವನ್ನಾಗಿ ನಂತರದಲ್ಲಿ ವರ್ಗಿಕರಿಸಿ ಈ ಅಸ್ಪಷ್ಟ ಜನಾಂಗವನ್ನು ಮಾತ್ರ ಪಂಚಮರು ಎಂದು ಗುರುತಿಸಿ, ಅಸ್ಪೃಷ್ಯರಲ್ಲಿಯೇ ಅತೀ ಅಸ್ಪಷ್ಟರಾಗಿ ವಿಂಗಡಿಸಿ ಪ್ರಾಣಿಗಳಿಗಿಂತ ಕಡೆಯಾಗಿ ಈ ಸಮಾಜವನ್ನು ಶತಶಮಾನಗಳಿಂದ ಇತರೆ ಸಮಾಜಗಳು ಕಿತ್ತು ತಿಂದಿವೆ ಎಂದು ದಲಿತ ಮುಖಂಡ ಉಡಚಪ್ಪ ಮಾಳಗಿ ಹೇಳಿದರು.
ಹಾವೇರಿ ಜಿಲ್ಲೆಯ ರಾಣೇಬೆನ್ನೂರ್ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ಒಳ ಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ಬೃಹತ್ ಜಾಥಾ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಪರಿಶಿಷ್ಟ ಜಾತಿಯೊಳಗಿನ ಉಪಜಾತಿಗಳಲ್ಲಿ ಅತೀ ಹಿಂದುಳಿದ, ಅಸ್ಪಷ್ಟ, ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರಕಾರಕ್ಕೆ ಸಂವಿಧಾನಬದ್ಧ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟಿ ಐತಿಹಾಸಿಕ ತೀರ್ಪು ನೀಡಿದೆ. 2011 ರ ಜಾತಿಗಣತೆ ಲಭ್ಯವಿದ್ದು ವ್ಯಾಪಕ ದತ್ತಾಂಶಗಳನ್ನು ಹೊಂದಿರುತ್ತದೆ. ಸದಾಶಿವ ಆಯೋಗದ ವರದಿ ಲಭ್ಯವಿದ್ದು, ಸುಪ್ರೀಂ ಕೋರ್ಟಿನ ಆದೇಶದನ್ವಯ ಮೀಸಲಾತಿ ಜಾರಿಗೊಳಿಸಲು ರಾಜ್ಯ ಸರಕಾರಕ್ಕೆ ಅಧಿಕಾರ ಇರುತ್ತದೆ. ಇಷ್ಟೆಲ್ಲಾ ಮಾಹಿತಿಗಳು ಲಭ್ಯವಿದ್ದರೂ ಸಹಿತ ವಿಳಂಬ ನೀತಿ ಅನುಸರಿಸು ತ್ತಿರುವುದು ನಮಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಹೇಳಿದರು.
ದಲಿತ ಮುಖಂಡ ಪುಟ್ಟಪ್ಪ ಮರಿಯಮ್ಮನವರ ಮಾತನಾಡಿ, ಕಳೆದ ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಸದಾಶಿವ ಆಯೋಗದ ವರದಿ ಜಾರಿಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ವಾಗ್ದಾನ ಮಾಡಿದ್ದೀರಿ. ಮಾದಿಗ ಜನಾಂಗವು ಪರಿಶಿಷ್ಟ ಜಾತಿ ಸಮುದಾಯಗಳಲ್ಲಿ ಅತೀ ಹೆಚ್ಚು ತುಳಿತಕ್ಕೊಳಗಾಗಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಯಾವುದೇ ಪುನರ್ ಪರಿಶೀಲನೆ ಅಥವಾ ಹೊಸದಾಗಿ ದತ್ತಾಂಶ ಕಲೆಹಾಕಲು ಸಮೀಕ್ಷೆ ಆರಂಭಿಸಿದರೆ ಅದು ಹಲವು ವರ್ಷಗಳಾಗುತ್ತವೆ. ಈ ವಿಳಂಬ ನೀತಿಯು ನಮ್ಮ ಬೇಡಿಕೆಯ ತಿರಸ್ಕಾರಕ್ಕೆ ಕಾರಣವಾಗುತ್ತದೆ. ಕೂಡಲೇ ಸುಪ್ರೀಂ ಕೋರ್ಟ್ ಆದೇಶದನ್ವಯ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ ಗದಗ | ಬಾಗಿದ ವಿದ್ಯುತ್ ಕಂಬದಿಂದ ಅಪಾಯದ ಆತಂಕ; ತೆರವುಗೊಳಿಸದ ಅಧಿಕಾರಿಗಳು
ಪ್ರತಿಭಟನೆಯಲ್ಲಿ ಪ್ರಕಾಶ್ ಪೂಜಾರ್ ಉಡಚಪ್ಪ ಯಲ್ಲಪ್ಪ ಮಾಳಗಿ, ಮಂಜಪ್ಪ ನಾಗಪ್ಪ ಮರುಳ, ಜಗದೀಶ್ ನಾಗಪ್ಪ ಹರಿಜನ, ಮೈಲಪ್ಪ ದಾಸಪ್ಪನವರು, ಮೈಲಪ್ಪ ಗೋಣಿಬಸಪ್ಪನವರ್, ಸುರೇಶ್ ದೇವರಗುಡ್ಡ, ಮಾಲತೇಶ ಮೈಲಾರ, ಬಸವಣ್ಣಪ್ಪ ಹಾಲಳ್ಳಿ, ಮಹೇಶಪ್ಪ ಹರಿಜನ, ಹನುಮಂತಪ್ಪ ಹೌಸ್ಕಿ, ಹನುಮಂತಪ್ಪ ಸಹಕಾರ ಇದ್ದರು.