ಗದಗ | ಬಾಗಿದ ವಿದ್ಯುತ್ ಕಂಬದಿಂದ ಅಪಾಯದ ಆತಂಕ; ತೆರವುಗೊಳಿಸದ ಅಧಿಕಾರಿಗಳು

Date:

ರಸ್ತೆ ಮಧ್ಯದಲ್ಲಿರುವ ವಿದ್ಯುತ್‌ ಕಂಬ ಅರ್ಧಕ್ಕೆ ಮುರಿದು ಬಾಗಿದ್ದು, ಹತ್ತು ಹದಿನೈದು ದಿನಗಳಾದರೂ ಈವರೆಗೆ ಅಧಿಕಾರಿಗಳು ತೆರವುಗೊಳಿಸದೆ ಇರುವುದು ಅಪಾಯಕ್ಕೆ ಎಡೆಮಾಡಿದೆ.

- Advertisement -

ಗದಗ ಜಿಲ್ಲೆಯ ರೋಣ ಪಟ್ಟಣದ ಮಿನಿ ವಿಧಾನಸೌಧದ ಎದುರಿಗೆ ಇರುವ ಮುಖ್ಯ ರಸ್ತೆಯ ಡಿವೈಡರ್ ಮಧ್ಯೆಯಿರುವ ಬೀದಿದೀಪದ(ವಿದ್ಯುತ್ ಕಂಬ) ಕಂಬಕ್ಕೆ ಹದಿನೈದು ದಿನಗಳ ಹಿಂದೆ ಲಾರಿ ಡಿಕ್ಕಿ ಹೊಡೆದು, ರಸ್ತೆಗೆ ಬಾಗಿದೆ. ಅಪಾಯಕ್ಕೆ ಎಡೆ ಮಾಡಿಕೊತ್ತಿದ್ದರೂ ಕೂಡಾ ಇಲ್ಲಿಯ ಅಧಿಕಾರಿಗಳು ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ಇರುವುದು ದುರಂತ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

ಈ ಮುಖ್ಯ ರಸ್ತೆಯಲ್ಲಿ ಬಸ್‌, ಲಾರಿ ಸೇರಿದಂತೆ ದ್ವಿಚಕ್ರ ವಾಹನಗಳು ಅತಿಹೆಚ್ಚು ಓಡಾಡುತ್ತವೆ. ಹುಬ್ಬಳ್ಳಿ, ನರಗುಂದ, ಗದಗ ಬಸ್‌ಗಳೂ ಕೂಡಾ ಇದೇ ರಸ್ತೆಯಲ್ಲಿ ಹೆಚ್ಚು ಸಂಚರಿಸುತ್ತವೆ. ಈ ರಸ್ತೆಯ ಪಕ್ಕದಲ್ಲಿಯೇ ಪೆಟ್ರೋಲ್‌ ಬಂಕ್‌ ಹೋಟೆಲ್‌ಗಳು, ಜೆರಾಕ್ಸ್ ಅಂಗಡಿಗಳೂ ಕೂಡ ಇವೆ. ಈ ರಸ್ತೆ ಪಕ್ಕದಲ್ಲಿಯೇ ತಹಶೀಲ್ದಾರ್ ಕಚೇರಿ ಮಿನಿ ವಿಧಾನಸೌಧ ಕೂಡ ಇದೆ. ಜನದಟ್ಟಣೆ ಇರುವ ರಸ್ತೆಯು ಆಗಿದೆ. ಸಂಚರಿಸುವ ಬಸ್‌ ಮತ್ತು ಲಾರಿಗಳು ಅಪಾಯ ಒಡ್ಡಿದ ಬೀದಿದೀಪದ ಕಂಬಕ್ಕೆ ತಾಗಿದರೆ ದೊಡ್ಡ ಅಪಘಾತ ಸಾವು ನೋವುಗಳಾಗುವ ಸಂಭವ ಹೆಚ್ಚಾಗಿದೆ.

ಸಮಸ್ಯೆ ಏನು?

ರೋಣ ಪಟ್ಟಣದ ಮುಲ್ಲಾನಾ ಭಾವಿ ಕ್ರಾಸ್‌ನಿಂದ ತಹಶೀಲ್ದಾರ್ ಕಚೇರಿವರೆಗೂ ಒಂದೇ ರಸ್ತೆಯಿದೆ. ತಹಶೀಲ್ದಾರ್ ಕಚೇರಿ ಹತ್ತಿರ ಬರುತ್ತಿದ್ದಂತೆಯೇ ರಸ್ತೆಯ ಮಧ್ಯದಿಂದ ಡಿವೈಡರ್ ರಸ್ತೆಗಳು ಆಗಿದ್ದು, ವೇಗವಾಗಿ ಬರುವ ಬಸ್ಸು ಮತ್ತು ಲಾರಿಗಳು, ಒಮ್ಮಿಂದೊಮ್ಮೆಲೆ ಮಗ್ಗಲು ರಸ್ತೆಗೆ ತೆಗೆದುಕೊಳ್ಳಲು ಆಗದೆ ಇರುವುದರಿಂದ ಕಂಬಕ್ಕೆ ಡಿಕ್ಕಿ ಹೊಡೆಯುವ ಸಂಭವ ಜಾಸ್ತಿ ಕಂಡುಬರುತ್ತದೆ. ರಾತ್ರಿ ವೇಳೆ ಲಾರಿ ಮತ್ತು ಬಸ್‌ ಚಾಲಾಯಿಸುವುದು ಸಾರ್ವಜನಿಕರಿಗೆ ಸವಾಲಾಗಿದೆ.‌

ವಿದ್ಯುತ್‌ ಕಂಬ 1

ಅಷ್ಟೇ ಅಲ್ಲದೇ ಈ ರಸ್ತೆ ಪಕ್ಕದಲ್ಲಿ ಹೋಟೆಲ್‌ಗಳಿಗೆ ಹೋಗುವವರು ದ್ವಿಚಕ್ರ ವಾಹನಗಳ ಬಳಸುವುದರಿಂದ ಬಸ್‌ಗಳು ಸರಾಗವಾಗಿ ಓಡಾಡಲು ಆಗುತ್ತಿಲ್ಲ. ಇದರಿಂದ ಈ ರೀತಿಯ ಅಪಾಯಗಳಾಗುವ ಸಂಭವ ಹೆಚ್ಚು.

ಮಾದಿಗ ದಂಡೋರ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಬುರಡಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಈ ಬೀದಿದೀಪದ ಕಂಬಕ್ಕೆ ಬಸ್ಸೋ ಲಾರಿಯೋ ಡಿಕ್ಕಿ ಹೊಡೆದಿದ್ದು, ಸುಮಾರು ಹದಿನೈದು ದಿನಗಳಿಂದ ಈ ಕಂಬ ಬೀಳುವ ಹಂತದಲ್ಲಿದೆ. ನಿತ್ಯ ನೂರಾರು ಬಸ್‌ಗಳು, ದ್ವಿಚಕ್ರ ವಾಹನಗಳು, ಓಡಾಡುತ್ತವೆ. ಬಸ್‌ಗಳಿಗೆ ತಾಗಿ ದೊಡ್ಡ ಅನಾಹುತವಾಗುವ ಸಂಭವ ಹೆಚ್ಚು. ಹಾಗಾಗಿ ಕೂಡಲೇ ಕಂಬವನ್ನು ತೆರವುಗೊಳಿಸಿ, ಅಪಾಯ ತಪ್ಪಿಸಬೇಕು. ತಹಶೀಲ್ದಾರ್ ಇದೇ ರಸ್ತೆಯಲ್ಲಿಯೇ ನಿತ್ಯ ಓಡಾಡುತ್ತಾರೆ. ಆದರೂ ಗಮನ ಹರಿಸದೇ ಇರುವುದು ದುರಂತ” ಎಂದು ಆರೋಪಿಸಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಸರ್ಕಾರಿ ಶಾಲೆ ನಿರ್ಮಾಣ ಜಾಗದಲ್ಲಿ ಅಕ್ರಮ ಶೆಡ್: ತೆರವುಗೊಳಿಸಲು ಜಿಲ್ಲಾಧಿಕಾರಿಗೆ ಮನವಿ

ಈ ಕುರಿತು ಮಾಹಿತಿ ಪಡೆಯಲು ಈ ದಿನ.ಕಾಮ್ ಪುರಸಭೆ ಮುಖ್ಯ ಅಧಿಕಾರಿಗೆ ಸಂಪರ್ಕಿಸಿದ್ದು, ಅವರು ಕರೆಗೆ ಲಭ್ಯವಾಗಿಲ್ಲ.

“ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಬಾಗಿದ ವಿದ್ಯುತ್ ಕಂಬವನ್ನು ತೆರವುಗೊಳಿಸಿ, ಅಪಾಯ ಹಾಗೂ ಅಪಘಾತ ಆಗುವುದನ್ನು ತಪ್ಪಿಸಬೇಕು” ಎಂದು ಸಾರ್ವಜನಿಕರು ಒತ್ತಾಯಿಸಿದರು.

SHARANAPPA H SANGANALA
ಶರಣಪ್ಪ ಎಚ್ ಸಂಗನಾಳ
+ posts

ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಶರಣಪ್ಪ ಎಚ್ ಸಂಗನಾಳ
ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಲಾರಿ ಡಿಕ್ಕಿಗೆ ಬೈಕ್ ಸವಾರ ಗಂಭೀರ ಗಾಯ

ಲಾರಿ ಹಾಗೂ ಬೈಕ್‌ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್‌ ಸವಾರ...

ಶಿರಸಿ | ಆಗಸ್ಟ್ 23ನ್ನು ‘ಕರ್ನಾಟಕ ಕಾಫಿ ಡೇ’ ಎಂದು ಘೋಷಿಸಲು ಪವನ್ ನಾಯ್ಕ್ ಆಗ್ರಹ

ಶಿರಸಿ: ಕಾಫಿ ಡೇ ಸಂಸ್ಥಾಪಕ ದಿವಂಗತ ವಿ.ಜಿ. ಸಿದ್ಧಾರ್ಥ ಹೆಗ್ಡೆ ಅವರ...

ಭದ್ರಾವತಿಯ VISL ಎಜಿಎಂ ಗೋವಿಂದರಾಜು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, VISL ಸಂಸ್ಥೆಯಲ್ಲಿ ಎಜಿಎಂ...

ಗದಗ | ಕರ್ನಾಟಕ ಏಕೀಕರಣಕ್ಕಾಗಿ ನಾರಾಯಣರಾವ್ ಕೋಡುಗೆ ಅಪಾರ: ಹನುಮಂತಪ್ಪ ಅಬ್ಬಿಗೇರಿ

"ಕರ್ನಾಟಕ ಏಕೀಕರಣಕ್ಕಾಗಿ ಗದಗ ಜಿಲ್ಲೆಯ ಹುಯಿಲಗೋಳ ನಾರಾಯಣರಾವ್ ಅವರ ಕೊಡುಗೆ ಅಪಾರವಾಗಿದೆ....