ಮೈಸೂರು ದಸರಾದಲ್ಲೂ ಕೋಮು ದ್ವೇಷ; ದೀಪಾಲಂಕಾರಕ್ಕೂ ಬಿಜೆಪಿ ಅಪಸ್ವರ

Date:

ಮೈಸೂರು ದಸರಾ ಸಮಯದಲ್ಲಿ ಬಿಜೆಪಿ ನಿರಂತರವಾಗಿ ವಿವಾದ ಹುಟ್ಟುಹಾಕುತ್ತಲೇ ಇದೆ. ಈ ಹಿಂದೆ, ಮಹಿಷ ದಸರಾ ಅಡ್ಡಿಪಡಿಸಿ, ರಗಳೆ, ರಾದ್ದಾಂತ ಎಬ್ಬಿಸುತ್ತಿದ್ದ ಬಿಜೆಪಿ, ಇದೀಗ, ಮೈಸೂರು ದಸರಾದ ದೀಪಾಲಂಕಾರದಲ್ಲೂ ಕ್ಯಾತೆ ತೆಗೆದಿದೆ. ದಸರಾದಲ್ಲೂ ಕೋಮು ರಾಜಕಾರಣ, ಕೋಮು ದ್ವೇಷ ಬಿತ್ತಲು ಮುಂದಾಗಿದೆ.

- Advertisement -

ದಸರಾ ಪ್ರಯುಕ್ತ ಮೈಸೂರಿನಾದ್ಯಂತ ದೀಪಾಲಂಕಾರ ಮಾಡಲಾಗಿದೆ. ನಗರದ ಬಹುತೇಕ ಭಾಗಗಳು ದೀಪಗಳಿಂದ ಕಂಗೊಳಿಸುತ್ತಿವೆ. ನಾನಾ ಬಗೆಯಲ್ಲಿ ದೀಪಾಲಂಕಾರ ಮಾಡಿಲಾಗಿದೆ. ಅದೇ ರೀತಿ, ಪ್ರಮುಖ ರಸ್ತೆಯೊಂದರಲ್ಲಿ ಗುಂಬಜ್ ಮಾದರಿಯಲ್ಲೂ ದೀಪಾಲಂಕಾರ ಮಾಡಲಾಗಿದೆ. ಅದಕ್ಕೆ, ಬಿಜೆಪಿ ಅಪಸ್ವರ ಎತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

‘ಪಿತೃಪ್ರಭುತ್ವವನ್ನು ಧ್ವಂಸ ಮಾಡಿ’: ಮನುವಾದ ಮತ್ತು ಫ್ಯಾಸಿಸಂ ವಿರುದ್ಧ...

ಸ್ವತಂತ್ರ ಭಾರತ 80 ವರ್ಷಗಳನ್ನು ಪೂರೈಸುತ್ತಿರುವಾಗ, ನಾವು ಕೇಳಬೇಕಾಗಿದೆ, ಆ ಮನಸ್ಥಿತಿ ಹೋಗಿದೆಯೇ? ಇಲ್ಲ. ಪುಸ್ತಕವನ್ನು ಸುಡಲಾಗಿರಬಹುದು, ಆದರೆ ಮನುಸ್ಮೃತಿಯ ಮನಸ್ಥಿತಿ, ಮನುವಾದ, ಹೆಚ್ಚು ಅತ್ಯಾಧುನಿಕ ಮತ್ತು ಅದೃಶ್ಯ ರೂಪಗಳಲ್ಲಿ ಅಸ್ತಿತ್ವದಲ್ಲಿದೆ.  ಪುಣೆಯಲ್ಲಿ ನಡೆದ...

ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ಹಸಿರು ಚಪ್ಪರ ಹಾಕಿ, ಅದಕ್ಕೆ ದೀಪಾಲಂಕಾರ ಮಾಡಲಾಗಿದೆ. ಚಪ್ಪರವನ್ನು ಗುಂಬಜ್ ಮಾದರಿಯಲ್ಲಿ ನಿರ್ಮಿಸಲಾಗಿದೆ. ಅದಕ್ಕೂ ಬಿಜೆಪಿ ಕ್ಯಾತೆ ತೆಗೆದಿದೆ. ಮಾಜಿ ಸಂಸದ ಪ್ರತಾಪ್ ಸಿಂಹ, ಅದನ್ನು ಬದಲಾಯಿಸಬೇಕು ಎಂದಿದ್ದಾರೆ.

ಚಪ್ಪರದ ಚಿತ್ರವನ್ನು ‘ಎಕ್ಸ್‌‘ನಲ್ಲಿ ಹಂಚಿಕೊಂಡಿರುವ ಪ್ರತಾಪ್ ಸಿಂಹ, ‘ಇದನ್ನು ಬದಲಿಸಲು ಹೇಳಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ಪ್ರತಿ ವರ್ಷ ಸಯ್ಯಾಜಿರಾವ್ ರಸ್ತೆಯಲ್ಲಿ ಚಾಂಮುಂಡೇಶ್ವರಿ ವಿದ್ಯುತ್ ಪ್ರಕರಣ ನಿಗಮ ನಿಯಮಿತ (ಚೆಸ್ಕಾಂ)ನಿಂದ ಹಸಿರು ಚಪ್ಪರ ಅಳವಡಿಸಲಾಗುತ್ತದೆ. ಅದೇ ರೀತಿ ಈ ವರ್ಷವೂ ಹಸಿರು ಚಪ್ಪರ ಹಾಕಿದೆ. ವಿಭಿನ್ನ ಮತ್ತು ವಿಶಿಷ್ಟವಾಗಿ ಈ ಬಾರಿ, ಗುಂಬಜ್ ಮಾದರಿಯಲ್ಲಿ ಚಪ್ಪರ ನಿರ್ಮಿಸಿದೆ. ಸಚಿವ ಕೆ.ಜೆ ಜಾರ್ಜ್‌ ಅವರು ಶುಕ್ರವಾರ ಇದೇ ಚಪ್ಪರದ ಬಳಿಯಿಂದಲೇ ದೀಪಾಲಂಕಾರ ಉದ್ಘಾಟನೆ ಮಾಡಲಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಟ್ಕಳ | ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಿದ್ದ ಮಿನಿ ಬಸ್ ಕಳವು

ಭಟ್ಕಳ: ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದ ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಿದ್ದ ಮಿನಿ...

ಯಲ್ಲಾಪುರ | ಉಡ ಬೇಟೆ ಆರೋಪ: ತಂದೆ-ಮಗ ಬಂಧನ

ಅಕ್ರಮವಾಗಿ ವನ್ಯಪ್ರಾಣಿಗಳನ್ನು ಬೇಟೆಯಾಡಿ, ಅದರ ಮಾಂಸವನ್ನು ಮನೆಯಲ್ಲಿ ಇಟ್ಟುಕೊಂಡಿದ್ದ ಆರೋಪದ ಮೇಲೆ...

ಉಡುಪಿ | ಡಾ.ಮೆಹೆವಿಶ್ ಮುಶೀರ್ ಶೇಖ್‌ಗೆ ಪಿಎಚ್‌ಡಿ ಪದವಿ

ಡಾ. ಮಮತಾ ಬಾಲಚಂದ್ರ ಅವರ ಮಾರ್ಗದರ್ಶನದಲ್ಲಿ ಹಾಗೂ ಡಾ. ನರೇಂದ್ರ ವಿ.ಜಿ....