ಗ್ರಾಮ ಪಂಚಾಯತ್ ಮಟ್ಟದ ತ್ಯಾಜ್ಯ ವಿಲೇವಾರಿ ಮಹಿಳಾ ವಾಹನ ಚಾಲಕಿಯರಿಗೆ ಸಹ ಸಿಬ್ಬಂದಿಗಳು ಮಾನಸಿಕ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ. ಹೀಗಾಗಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ ಚಂದ್ರಕಾಂತ್ ಎಸ್ ಕಾದ್ರೊಳ್ಳಿ ಬಣದ ಮುಖಂಡರು ಮನವಿ ಸಲ್ಲಿಸಿದರು.
ಹಾವೇರಿ ಜಿಲ್ಲಾ ಘಟಕದ ವತಿಯಿಂದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಗುಡ್ಡಪ್ಪನವರ್ ಅವರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಂತೋಷ್ ಗುಡ್ಡಪ್ಪನವರ್, “ತ್ಯಾಜ್ಯ ವಿಲೇವಾರಿ ಮಹಿಳಾ ವಾಹನ ಚಾಲಕಿಯರಿಗೆ ಸಹ ಸಿಬ್ಬಂದಿಗಳಿಂದ ಕಿರುಕುಳ ನೀಡುತ್ತಿರುವ ಬಗ್ಗೆ ನಮಗೆ ದೂರುಗಳು ಬಂದಿದೆ. ಸಂತ್ರಸ್ತರ ವಿವರಗಳನ್ನು ಕಲೆ ಹಾಕಿ, ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು” ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಹಾವೇರಿ ವ್ಯದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಗುತ್ತಿಗೆದಾರರಿಂದ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿರುವ ಕಾರಣ ಹಾವೇರಿ ಜಿಲ್ಲೆಯ ಸ್ಥಳೀಯ ಗ್ರಾಮೀಣ ಮತ್ತು ನಗರ ಭಾಗದ ನಿರುದ್ಯೋಗ ಯುವಕ ಯುವತಿಯರಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದು ಇದೇ ವೇಳೆ ಸಂಘಟನೆಯ ಮುಖಂಡರು ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ತುಮಕೂರು | ಕಾಲೇಜಿನಲ್ಲಿ ಸಂವಿಧಾನ ಬದಲಾವಣೆ ಕುರಿತ ಚರ್ಚಾ ಸ್ಪರ್ಧೆ ವಿವಾದ: ದಸಂಸ ಆಕ್ರೋಶ
ಈ ಸಂದರ್ಭದಲ್ಲಿ ಸಂಘಟನಯ ಜಿಲ್ಲಾಧ್ಯಕ್ಷ ಫಕ್ಕೀರೇಶ ಯ.ಪುರದ, ಪ್ರಧಾನ ಕಾರ್ಯದರ್ಶಿ ನಾಗರಾಜ್ ಬಣಕಾರ್, ತಾಲೂಕು ಅಧ್ಯಕ್ಷ ಮಾಲತೇಶ್ ನೀ ತಳಗೇರಿ, ಮಾರುತಿ ಹರಿಜನ್, ಮುತ್ತು ದೊಡ್ಡಮನಿ, ಕಿರಣ್ ಕುಮಾರ್ ತಳಗೇರಿ ಉಪಸ್ಥಿತರಿದ್ದರು.
