ಟ್ರ್ಯಾಕ್ಟರ್ ಪಲ್ಟಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಸಂಗೂರ ಕಬ್ಬಿನ ಪ್ಯಾಕ್ಟರಿ ಬಳಿ ನಡೆದಿದೆ.
ಹಾವೇರಿಯಿಂದ ಸ್ವಗ್ರಾಮ ಬಾಳಂಬೀಡ ಕಡೆಗೆ ಹೊರಟಿದ್ದ ಸಮಯದಲ್ಲಿ ಬ್ರೇಕ್ ಫೈಲ್ ಆಗಿ ಟ್ರ್ಯಾಕ್ಟರ್‌ನ ಆರೂ ಗಾಲಿಗಳು ಮೇಲ್ಮುಖವಾಗಿವೆ. ಈ ವೇಳೆ ಚಾಲಕ ಸಂಜೀವ ಯಲ್ಲಪ್ಪ ತೆಪ್ಪದ (30) ಟ್ರ್ಯಾಕ್ಟರ್ ಬುಡಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ತುಮಕೂರು | ಜಾತ್ರಾ ಮಹೋತ್ಸವದಲ್ಲಿ ಕೆಂಡ ಹಾಯುವ ವೇಳೆ ಭಕ್ತರ ಕಾಲುಗಳಿಗೆ ಗಾಯ
ಮಣ್ಣು ತುಂಬುವ ಕೆಲಸ ಮಾಡುತ್ತಿದ್ದ ಸಂಜೀವ ಎಂದಿನಂತೆ ಹಾವೇರಿಯಲ್ಲಿ ಮಣ್ಣು ಸುರಿದು ಬರುವಾಗ ಅಚಾನಕ್ಕಾಗಿ ಘಟನೆ ಸಂಭವಿಸಿದೆ.