ಕುಟುಂಬ ಆರ್ಥಿಕವಾಗಿ ಸುಧಾರಣೆ ಆಗಬೇಕಾದರೆ ಮಹಿಳೆಯರ ಪಾತ್ರ ಬಹುಮುಖ್ಯವಾಗಿದೆ. ವ್ಯವಹಾರಗಳನ್ನು ನಿಭಾಯಿಸುವ ಜವಾಬ್ದಾರಿ ಅವರ ಮೇಲಿರುತ್ತದೆ. ಆದ್ದರಿಂದ ಜೀವನ ನಿರ್ವಹಣೆಗೆ ಸ್ವಉದ್ಯೋಗ ಅವಶ್ಯವಾಗಿ ಬೇಕಾಗುತ್ತದೆ. ಕಚ್ಚಾ ವಸ್ತುಗಳನ್ನು ಬಳಕೆ ಮಾಡಿಕೊಂಡು ಸಿದ್ದ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರುಕಟ್ಟೆಗೆ ತರಬೇಕು. ಅವುಗಳ ವೈವಿದ್ಯತೆಗಳನ್ನು ನೋಡಿ ಜನರು ತೆಗೆದುಕೊಳ್ಳುತ್ತಾರೆ ಎಂದು ರೋಶನಿ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಅನಿತಾ ಡಿಸೋಜಾ ಹೇಳಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ರೋಷನಿ ಸಮಾಜ ಸೇವಾ ಸಂಸ್ಥೆ ಆಯೋಜಿಸಿದ್ದ ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಆದರ್ಶ ತಾಲೂಕು ಮಹಿಳಾ ಒಕ್ಕೂಟದ ಕಾರ್ಯದರ್ಶಿ ಚಂಪಾ ಕರ್ಜಗಿ ಮಾತನಾಡಿ, “ಮಹಿಳೆಯರು ಪ್ರತಿನಿತ್ಯ ತಮ್ಮ ದೈನಂದಿನ ಹೆಚ್ಚು ಸಮಯ ಮೊಬೈಲ್ ಬಳಕೆ ಮಾಡುವ ಮೂಲಕ ದಾರಾವಾಹಿಗಳನ್ನು ನೋಡುತ್ತ ದಿನ ಕಳೆಯುವುದುದೇ ಹೆಚ್ಚಾಗಿದೆ. ಇದ್ದರಿಂದ ಕಾಲಹರಣ ಆಗುತ್ತದೆಯೇ ಹೊರತು, ನಮ್ಮ ವೈಯಕ್ತಿಕ ಜೀವನಕ್ಕೆ ಯಾವುದೇ ಲಾಭ ಇರುವುದಿಲ್ಲ. ಆದ್ದರಿಂದ ಮಹಿಳೆಯರು ಮನೆಯಲ್ಲಿಯೇ ಕುಳಿತು ಸ್ವಉದ್ಯೋಗ ಮಾಡಲು ಮುಂದಾಗಬೇಕಾಗಿದೆ” ಎಂದು ಹೇಳಿದರು.
ತರಬೇತಿಯ ಸಂಪನ್ಮೂಲ ವ್ಯಕ್ತಿಯಾಗಿದ್ದ ಸುಸ್ಥಿರ ಅಭಿವೃದ್ಧಿ ಸಂಸ್ಥೆಯ ಸಂಸ್ಥಾಪಕಿ ಫೀಯೋನಾ ಅಲ್ನೋಡಾ ಮಾತನಾಡಿ, “ಮನುಷ್ಯರಾದ ನಾವು ಯಾವುದೇ ಕೆಲಸ ಮಾಡಬೇಕೆಂದರೂ ಮೊದಲು ನಾವು ಆರೋಗ್ಯವಾಗಿರಬೇಕು. ಆಗ ಮಾತ್ರ ವ್ಯವಸ್ಥಿತವಾಗಿ ಅಚ್ಚುಕಟ್ಟಾಗಿ ಕೆಲಸ ಮಾಡಲು ಸಾದ್ಯವಾತ್ತದೆ. ಇಲ್ಲವಾದರೆ, ಆರೋಗ್ಯದಲ್ಲಿ ಏರುಪೇರು ಆದಂತೆ ಕೆಲಸದಲ್ಲೂ ಏರುಪೇರು ಆಗುತ್ತದೆ. ಆದ್ದರಿಂದ ಮಹಿಳೆಯರು ವೈಯಕ್ತಿಕ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು” ಎಂದರು.
ಕಾರ್ಯಕ್ರಮದಲ್ಲಿ ಸಿಸ್ಟ ಅಮಿತಾ, ಮಸ್ಕರನೇಸ, ಮಹಿಳಾ ಸಬಲೀಕರಣದ ಸಂಯೋಜಕ ಡಿಗ್ಗಪ್ಪ ಲಮಾಣಿ, ಶೀಲಾ ಮ್ಯಾಗಳಮನಿ, ಗೌರಮ್ಮ ಸಿ ಮತ್ತು ಯುವತಿಯರು ಭಾಗವಹಿಸಿದ್ದರು.