ಪ್ರಜ್ಞಾವಂತಿಕೆ ಬೆಳೆದಂತೆ ಪರಂಪರೆಯ ಮೇಲಿನ ಪ್ರೀತಿಯೂ ಬೆಳೆಯಬೇಕು. ನಮ್ಮ ಸುತ್ತಮುತ್ತಲಿರುವ ಪ್ರಾಚೀನ ಸ್ಮಾರಕಗಳ ರಕ್ಷಣೆ, ಅದರ ಕುರಿತಾದ ತಿಳಿವಳಿಕೆ ಹೆಚ್ಚಾಗಬೇಕು. ನಮ್ಮ ದೇಶ ತಂತ್ರಜ್ಞಾನ, ವಿಜ್ಞಾನ, ಆಧ್ಯಾತ್ಮ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿದೆ. ನಮ್ಮ ಪೂರ್ವಜರು ಕೊಡುಗೆಯಾಗಿ ನೀಡಿದ ಸ್ಮಾರಕಗಳ ಸಂರಕ್ಷಣೆ ನಮ್ಮ ಹೊಣೆಯಗಬೇಕು ಎಂದು ಕೆ.ಎಲ್.ಇ ಸಂಸ್ಥೆಯ ಸುದ್ದೆಪ್ಪ ಹಳ್ಳಿಕೇರಿ ಪದವಿ ಕಾಲೇಜಿನ ಉಪನ್ಯಾಸಕ ಡಾ. ಎಸ್.ಆರ್. ಕೋರಿಶೆಟ್ಟರ್ ಅಭಿಪ್ರಯಾಪಟ್ಟಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕಲಕೇರಿ ಗ್ರಾಮದ ಕೆರೆ ಸೋಮೇಶ್ವರ ದೇವಾಲಯದ ಬಳಿ ಗುದ್ದೆಪ್ಪ ಹಳ್ಳಿಕೇರಿ ಪದವಿ ಕಾಲೇಜಿ ವಿದ್ಯಾರ್ಥಿಗಳಿಗಾಗಿ ನಡೆದ ಇತಿಹಾಸ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಪರಂಪರೆ ಎಂದರೆ ಕೇವಲ ಸ್ಮಾರಕಗಳೊಂದೇ ಅಲ್ಲ. ಅದರ ವ್ಯಾಪ್ತಿ ತುಂಬಾ ವಿಸ್ತಾರವಾದದ್ದು. ಹಳೆಯ ಶ್ರೇಷ್ಠತೆಗಳೆಲ್ಲವನ್ನೂ ಅಳೆಯಲು ಬಿಡದೆ ಉಳಿಸಿಕೊಂಡು ಹೊಳೆಯುವಂತೆ ಮಾಡೋಣ. ಪರಂಪರೆಯನ್ನ ಪ್ರೀತಿಸೋಣ ಮತ್ತು ಸಂರಕ್ಷಿಸೋಣ, ಸ್ಮಾರಕಗಳು ನಮ್ಮ ನಾಡಿನ ಸಾಂಸ್ಕೃತಿಕ ಪ್ರತಿಬಿಂಬಗಳಾಗಿದ್ದು, ನಮ್ಮ ಪ್ರಾಚೀನ ಕಲೆ, ವಾಸ್ತುಶಿಲ್ಪ ಮತ್ತು ಸಂಸ್ಕೃತಿಯನ್ನು ಅರಿಯಲು ಸಹಾಯಕವಾಗಿವೆ” ಎಂದು ಹೇಳಿದರು.
ಕಾರ್ಯಕ್ರಮಲ್ಲಿ ಪ್ರಾಧ್ಯಾಪಕ ಡಾ. ಶರಣಪ್ಪ ಜಗ್ಗಲ, ಹೇರೂರು ಗ್ರಾಮ ಪಂಚಾಯತಿಯ ಪಿ.ಡಿ.ಓ ಅಧಿಕಾರಿಗಳಾದ ಶ್ರೀಮತಿ, ಎಸ್.ಪಿ, ಮರಾಠಿ, ಅಧ್ಯಕ್ಷರಾದ ಶ್ರೀ. ಗುಂಡನಗೌಡ ಪಾಟೀಲ್, ಕಲಕೇರಿ ಗ್ರಾಮದ ಸದಸ್ಯರಾದ ಶ್ರೀ. ರಾಜು ಕಮ್ಮಾರ, ಶ್ರೀ. ಗೂಳಪ್ಪ ಹುಳ್ಳಾಳ, ಶ್ರೀಮತಿ, ಮಂಜಮ್ಮ ಕಿರವಾಡಿ ಹಾಗೂ ಗ್ರಾಮಸ್ಥರಾದ ಪ್ರಕಾಶ ಬಣಕಾರ, ಶಿವನಾಗಪ್ಪ, ಗ್ರಾಮದ ಮಾಜಿ ಸೈನಿಕರಾದ ಶ್ರೀ. ನವೀನಕುಮಾರ ಮೆಳಳ ಮತ್ತು ಇತಿಹಾಸ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.