ಗಾಂಜಾ ವಿಚಾರಕ್ಕೆ ಯುವಕರಿಬ್ಬರು ನಡುವೆ ಜಗಳವಾಗಿದ್ದು, ಪುಂಡರ ದಂಡು ಕಟ್ಟಿಕೊಂಡು ಬಂದ ರೌಡಿ ಗ್ಯಾಂಗ್‌ಒಂದು ಪೊಲೀಸರ ಎದುರೇ ತಲ್ವಾರ್ ಹಿಡಿದು ಯುವಕನ ಮೇಲೆ ದಾಳಿ ನಡೆಸಲು ಬಂದ ಘಟನೆ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಿದ್ಧು ಹಾಗೂ ಲಾಲ್ ಎಂಬಿಬ್ಬರ ನಡುವೆ ಗಾಂಜಾ ವಿಚಾರಕ್ಕೆ ಜಗಳವಾಗಿದ್ದು, ವಿಕೋಪಕ್ಕೆ ತಿರುಗಿದ ಜಗಳ ಎರಡೂ ಗುಂಪುಗಳಿಂದ ಹೊಡೆದಾಟ ಶುರುವಾಗಿದೆ. ಈ ಸಂದರ್ಬದಲ್ಲಿ ಸ್ಥಳೀಯರು ಪೊಲೀಸ್ ತುರ್ತು ಸಹಾಯವಾಣಿ 112 ನಂಬರಿಗೆ ಕರೆ ಮಾಡಿದ್ದಾರೆ. ಆ ಕೂಡಲೇ ಧಾವಿಸಿದ ಎಎಸ್ಐ ಅಧಿಕಾರಿಯೊಬ್ಬರು ಪುಡಿ ರೌಡಿಗಳಿಗೆ ಗನ್ ತೋರಿಸಿ ಬೆದರಿಸದ ತಕ್ಷಣ ಪುಡಾರಿಗಳು ಕಾಲ್ಕಿತ್ತು ತಲೆಮರೆಸಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಧಾರವಾಡ | ಜಾಗದ ವಿಚಾರದಲ್ಲಿ ಜಗಳ; ಓರ್ವನ ಸಾವು
ಈಗಾಗಲೇ ಘಟನೆಯಲ್ಲಿ ಭಾಗಿಯಾದವರ ಪೈಕಿ ಮೂವರ ಬಂಧನವಾಗಿದ್ದು, ಬೆಂಡಿಗೇರಿ ಠಾಣೆಯ ಇನ್ಸ್ಪೆಕ್ಟರ್ ಎಸ್.ಆರ್.ನಾಯ್ಕ್ ಸ್ಥಳಕ್ಕೆ ಭೇಡಿ ನೀಡಿದ್ದಾರೆ. ಘಟನೆಯಲ್ಲಿ ಪಾಲ್ಗೊಂಡಿದ್ದ ಇನ್ನು ಕೆಲವು ರೌಡಿಗಳ ಹುಡುಕಾಟದಲ್ಲಿದ್ದಾರೆ.