ಪರಿಶಿಷ್ಟ ಜಾತಿಗಳ ಸಾಮರಸ್ಯ ಐಕ್ಯತಾ ಒಕ್ಕೂಟ ವತಿಯಿಂದ ಸುಪ್ರೀಂ ಕೋರ್ಟ್ ತೀರ್ಪಿನಂತೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗಿಕರಣ ಜಾರಿಗೆ ಆಗ್ರಹಿಸಿ ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಿಂದ ತಹಶೀಲ್ದಾರ್ ಕಚೇರಿಯವರೆಗೆ ಬೃಹತ್ ಮೆರವಣಿಗೆ ನಡೆಸಲಾಯಿತು.
ಡಾ. ಬಾಬು ಜಗಜೀವನರಾಮ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ನಗರದ ವಿವಿಧ ಮಾರ್ಗಗಳಲ್ಲಿ ಸಂಚರಿಸಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಂತೆ ರಾಜ್ಯದಲ್ಲಿ ಒಳಮೀಸಲಾತಿ ವರ್ಗೀಕರಣ ಜಾರಿ ಮಾಡಬೇಕು ಮತ್ತು ಎಲ್ಲ ನೇಮಕಾತಿ ಮುಂಬಡ್ತಿಗಳನ್ನು ಒಳಮೀಸಲಾತಿ ಜಾರಿ ನಂತರ ಮುಂದುವರಿಸುವಂತೆ ಆಗ್ರಹಿಸಿದರು.

ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಒಳಮೀಸಲಾತಿ ಹೋರಾಟದಲ್ಲಿ ಹುತಾತ್ಮರಾದವರಿಗೆ 1 ನಿಮಿಷ ಮೌನಾಚರಣೆ ಮೂಲಕ ಪುಷ್ಪ ನಮನ ಸಲ್ಲಿಸಿ, ನಂತರ ತಹಸೀಲ್ದಾರ್ ಹುಬ್ಬಳ್ಳಿ ಅವರ ಮೂಲಕ ರಾಜ್ಯಪಾಲರು ಹಾಗೂಸಿಎಂ ಸಿದ್ಧರಾಮಯ್ಯನವರಿಗೆ ಹಕ್ಕೊತ್ತಾಯಗಳನ್ನು ಮಂಡಿಸಿದರು.
ಒಕ್ಕೂಟದ ಸಂಚಾಲಕ ಡಾ. ವಿಜಯ ಗುಂಟ್ರಾಳ, ಬಸಪ್ಪ ಮಾದರ, ವೀರಭದ್ರಪ್ಪ ಹಾಲಹರವಿ, ಸುರೇಶ ಕಣಮಕ್ಕಲ, ರವಿ ಕಲ್ಯಾಣಿ, ಸಹದೇವ ಮಾಳಗಿ, ಮಂಜುನಾಥ ಸಣ್ಣಕಿ, ಭೀಮು ಹಲಗಿ, ಶಂಕರ ಅಜಮನಿ, ಮೇಘರಾಜ್ ಹಿರೇಮನಿ, ಬಸವರಾಜ ನಾರಾಯಣಕಾರ, ಸಂತೋಷ ಚಲವಾದಿ, ರವೀಂದ್ರ ಇಟ್ಟಿಗಾರ, ಗೋವಿಂದ ಬೆಳದೋನಿ, ರಂಗನಾಯಕ ತಪೇಲಾ, ಗಂಗಾಧರ್ ಪೆರೂರ್, ಹನುಮಂತ ಚಲವಾದಿ, ಚಂದ್ರಕಾಂತ್ ಯಾದವ, ಇಂದೂಮತಿ ಶಿರಗಾವಿ ಮುಂತಾದವರು ಭಾಗವಹಿಸಿದ್ದರು.
