ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ʼನಿಜಶರಣ ಅಂಬಿಗರ ಚೌಡಯ್ಯನವರ 904ನೇ ಜಯಂತೋತ್ಸವʼ ಕಾರ್ಯಕ್ರಮವನ್ನು ತಾಲೂಕ ಯುವ ಕೋಲಿ ಸಮಾಜ ಅದ್ದೂರಿಯಾಗಿ ಅಂಬಿಗರ ಚೌಡಯ್ಯನವರ ಭವ್ಯ ಪುತ್ಥಳಿಯ ಮೇರವಣಿಗೆ ಮಾಡಿದರು.
ಸಮಾಜದ ಹೆಣ್ಮು ಮಕ್ಕಳು ಕುಂಭ, ಕಳಸಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದರೆ, ಪುಟ್ಟ ಮಕ್ಕಳು ಅಂಬಿಗರ ಚೌಡಯ್ಯನವರ ಹಾಡಿಗೆ ಕೋಲಾಟ ಆಡುವುದರ ಮೂಲಕ ಗಮನ ಸೆಳೆದರು.
ಪಟ್ಟಣದ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಿಂದ ಪ್ರಾರಂಭವಾದ ಮೆರವಣಿಗೆಯು ಸ್ಟೇಷನ್ ರಸ್ತೆ, ನಾಗಾವಿ ವೃತ್ತ, ಜನತಾ ವೃತ್ತ, ಭುವನೇಶ್ವರಿ ವೃತ್ತ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತದ ಮೂಲಕ ಲಾಡ್ಡಿಂಗ್ ಕ್ರಾಸ್ ಹತ್ತಿರ ಇರುವ ಅಂಬಿಗರ ಚೌಡಯ್ಯ ನವರ ವೃತ್ತದಲ್ಲಿ ಕೊನೆಗೊಂಡಿತ್ತು. ಮೆರವಣಿಗೆಯುದ್ದಕ್ಕೂ ಡಿಜೆ ಸೌಂಡ್‌ಗೆ ಯುವಕರು ಕುಣಿದು ಕುಪ್ಪಳಿಸಿದರು.
ಅದ್ಧೂರಿಯಾಗಿ ನಡೆದ ಅಂಬಿಗರ ಚೌಡಯ್ಯನವರ ಭವ್ಯ ಮೆರವಣಿಗೆಯಲ್ಲಿ ಸಮಾಜದ ಶ್ರೀಗಳಾದ ಮಹಲರೋಜಾ ಮಲ್ಲಿಕಾರ್ಜುನ ಮುತ್ಯಾ, ಹುಬ್ಬಳ್ಳಿಯ ರಾಜಗುರು ಸ್ವಾಮೀಜಿ, ಅಲ್ಲೂರಿನ ಮೌನೇಶ್ವರ ಮಹಾರಾಜ್ ಅವರು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಯುವ ಕೋಲಿ ಸಮಾಜದ ತಾಲೂಕು ಗೌರವಾಧ್ಯಕ್ಷ ಶಿವಕುಮಾರ ಸುಣಗಾರ, ಸಮಾಜದ ಯುವ ಪೀಳಿಗೆಯು ದುಶ್ಚಟಗಳಿಗೆ ದಾಸನಾಗದೆ ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಾಮಾಜಿಕವಾಗಿ ಸಮಾಜದ ಏಳಿಗೆಗಾಗಿ ಸಂಘಟಿತರಾಗುವ ಉದ್ದೇಶದಿಂದ ಮಾಡಲಾದ ಭವ್ಯ ಮೆರವಣಿಗೆಯಲ್ಲಿ ತಾಲೂಕಿನ ಎಲ್ಲಾ ಕೋಲಿ ಸಮಾಜದ ಯುವಕರು ಭಾಗವಹಿಸಿರುವುದನ್ನು ನೋಡಿದರೆ ಮುಂದೊಂದು ದಿನ ನಮ್ಮ ಸಮಾಜ ಸರ್ವಾಂಗೀಣ ಅಭಿವೃದ್ಧಿಯಾಗುವುದರಲ್ಲಿ ಅನುಮಾನವೇ ಇಲ್ಲ ಎಂದರು.
ಯುವ ಕೋಲಿ ಸಮಾಜದ ತಾಲೂಕಾಧ್ಯಕ್ಷ ಗುಂಡು ಐನಾಪೂರ ಮಾತನಾಡಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಅಂಬಿಗರ ಚೌಡಯ್ಯನವರ ಪುತ್ಥಳಿಯ ಭವ್ಯ ಮೆರವಣಿಗೆಯಲ್ಲಿ ಸಮಾಜದ ಯುವಕರು ಶಾಂತಿಯುತವಾಗಿ ಮತ್ತು ಆಸಕ್ತಿಯಿಂದ ಭಾಗವಹಿಸದ್ದಾಗಿ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಸಲ್ಲಿಸುತ್ತೆನೆ ಎಂದರು.
ಈ ಸಂದರ್ಭದಲ್ಲಿ ನಗರಾಧ್ಯಕ್ಷ ರಾಜೇಶ್ ಹೋಳಿಕಟ್ಟಿ, ಶಿವಕುಮಾರ ಸುಣಗಾರ, ಮಲ್ಲಿಕಾರ್ಜುನ ಎಮ್ಮೆನೋರ, ಕಾಶಪ್ಪ ಡೋಣಗಾಂವ, ಮೌನೇಶ ಭಂಕಲಗಿ, ಶಂಕರ ಐನಾಪೂರ, ಮಹೇಶ ಸಾತನೂರ, ಶರಣು ಡೋಣಗಾಂವ, ಅರುಣ ಯಾಗಾಪೂರ, ದೇವರಾಜ ತಳವಾರ, ದೇವು ದಿಗ್ಗಾಂವ, ಬಸ್ಸು ಮೈನಾಳಕರ್, ಸೋಮು ಐನಾಪೂರ, ಭೀಮಾಶಂಕರ ಹೋಳಿಕಟ್ಟಿ, ಗೂಳಿ ಡಿಗ್ರಿ ಸಂಗಮೇಶ ಯರಗಲ್, ಮಲ್ಲಿಕಾರ್ಜುನ ಅಲ್ಲೂರಕರ್, ಕೃಷ್ಣಾರಾವೂರ, ಆನಂದ ಯರಗಲ್, ಸೇರಿದಂತೆ ಅನೇಕರು ಭಾಗವಹಿಸಿದ್ದರು.ಈ