ವಿಶ್ವದ ‘ಕುಖ್ಯಾತ ಮಾರುಕಟ್ಟೆ’ಗಳ ಪಟ್ಟಿಯಲ್ಲಿ ಬೆಂಗಳೂರಿನ ಎಸ್‌ಪಿ ರೋಡ್ ಉಲ್ಲೇಖ

Date:

ವಿಶ್ವದ ‘ಕುಖ್ಯಾತ ಮಾರುಕಟ್ಟೆ‘ಗಳ ವಾರ್ಷಿಕ ಪಟ್ಟಿಯಲ್ಲಿ ಬೆಂಗಳೂರಿನ ಸದರ್‌ ಪತ್ರಪ್ಪ ರಸ್ತೆ (ಎಸ್‌.ಪಿ ರಸ್ತೆ) ಮಾರುಕಟ್ಟೆಯ ಹೆಸರು ಉಲ್ಲೇಖವಾಗಿದೆ.

- Advertisement -

ಸರ್ಕಾರಿ ಸ್ವಾಮ್ಯದ ಅಮೆರಿಕದ ವ್ಯಾಪಾರ ಪ್ರತಿನಿಧಿಗಳ ಸಂಸ್ಥೆಯು (ಯುಎಸ್‌ಟಿಆರ್‌) ಮಂಗಳವಾರ ‘2023ರ ವಿಶ್ವದ ಕುಖ್ಯಾತ ಮಾರುಕಟ್ಟೆಗಳ ಪಟ್ಟಿ‘ಯನ್ನು ಬಿಡುಗಡೆಗೊಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

2023ರಲ್ಲಿನ ವಿಶ್ವದ ಕುಖ್ಯಾತ 39 ಆನ್‌ಲೈನ್‌ ಮಾರ್ಕೆಟ್‌ ಮತ್ತು 33 ಭೌತಿಕ ಮಾರುಕಟ್ಟೆಗಳ ಪಟ್ಟಿ ಪ್ರಕಟಿಸಿದ್ದು, ಈ ಮಾರುಕಟ್ಟೆಗಳು ನಕಲಿ ಟ್ರೇಡ್‌ಮಾರ್ಕ್ ಸೃಷ್ಟಿ ಅಥವಾ ಹಕ್ಕುಸ್ವಾಮ್ಯ ಚೌರ್ಯದಲ್ಲಿ ತೊಡಗಿವೆ ಎಂದು ಹೇಳಿದೆ.

ಮುಂಬೈನ ಹೀರಾ ಪನ್ನಾ ಮಾರುಕಟ್ಟೆ, ಕೋಲ್ಕತ್ತಾದ ಕಿಡ್ಡರ್‌ಪೋರ್‌ ಮಾರುಕಟ್ಟೆ, ನವದೆಹಲಿಯ ಪ್ರಸಿದ್ಧ ಕರೋಲ್ ಬಾಗ್ ಮಾರುಕಟ್ಟೆಗಳು ಈ ಪಟ್ಟಿಯಲ್ಲಿವೆ. ದೇಶದ ಜನಪ್ರಿಯ ಇ–ಕಾಮರ್ಸ್‌ ಉದ್ಯಮ ಇಂಡಿಯಾ ಮಾರ್ಟ್‌, ವೆಗಾಮೂವೀಸ್‌, ಡಬ್ಲ್ಯುಎಚ್‌ಎಂಸಿಎಸ್‌ ಸ್ಟಾಟರ್ಸ್‌ ಕೂಡ ವಿಶ್ವದ ಕುಖ್ಯಾತ ಮಾರುಕಟ್ಟೆಗಳ ಪಟ್ಟಿಯಲ್ಲಿವೆ.

ಕೋಲ್ಕತ್ತಾದ ಕಿಡ್ಡರ್‌ಪೋರ್‌ ಮಾರುಕಟ್ಟೆ, ಮುಂಬೈನ ಹೀರಾ ಪನ್ನಾ, ನವದೆಹಲಿಯ ಕರೋಲ್ ಬಾಗ್‌ನಲ್ಲಿರುವ ಟ್ಯಾಂಕ್ ರಸ್ತೆ ಹಾಗೂ ಬೆಂಗಳೂರಿನ ಸದರ್ ಪತ್ರಪ್ಪ ರಸ್ತೆ ಮಾರುಕಟ್ಟೆ ಪಟ್ಟಿಯಲ್ಲಿರುವ ಭಾರತೀಯ ಮಾರುಕಟ್ಟೆಗಳಾಗಿವೆ.

“ಈ ಮಾರುಕಟ್ಟೆಗಳಲ್ಲಿ ನಕಲಿ ವ್ಯಾಪಾರ ಹೆಚ್ಚಾಗಿ ನಡೆಯುತ್ತದೆ. ನಕಲಿ ಮತ್ತು ದರೋಡೆ ಸರಕುಗಳ ವ್ಯಾಪಾರವು ಕಾರ್ಮಿಕರು, ಗ್ರಾಹಕರು ಹಾಗೂ ಸಣ್ಣ ವ್ಯವಹಾರಗಳಿಗೆ ಹಾನಿ ಮಾಡುತ್ತದೆ. ಅಂತಿಮವಾಗಿ ಯುಎಸ್ ಆರ್ಥಿಕತೆಗೆ ಹಾನಿ ಮಾಡುತ್ತದೆ” ಎಂದು ಯುಎಸ್ ವ್ಯಾಪಾರ ಪ್ರತಿನಿಧಿ ಕ್ಯಾಥರೀನ್ ತೈ ಹೇಳಿದ್ದಾರೆ.

“ಈ ವರ್ಷದ ಕುಖ್ಯಾತ ಮಾರುಕಟ್ಟೆಗಳ ಪಟ್ಟಿಯು ಮಹತ್ವದ್ದಾಗಿದೆ. ಏಕೆಂದರೆ, ಇದು ನಕಲಿ ಸರಕುಗಳ ಸಂಭಾವ್ಯ ಅಪಾಯಗಳನ್ನು ಒತ್ತಿ ಹೇಳುತ್ತದೆ” ಎಂದು ಅವರು ಹೇಳಿದರು.

ಇದು ಚೀನಾ–ಆಧಾರಿತ ಇ–ಕಾಮರ್ಸ್ ಮತ್ತು ವಾಣಿಜ್ಯ ಮಾರುಕಟ್ಟೆಗಳಾದ ಟಾವೊಬಾವೊ, ವಿಚಾಟ್‌, ಡಿಎಚ್‌ಗೇಟ್, ಪಿಂಡೂಡುವೋ ಈ ಪಟ್ಟಿಯಲ್ಲಿವೆ. ಚೀನಾ ಕುಖ್ಯಾತ ಮಾರುಕಟ್ಟೆಗಳನ್ನು ಹೊಂದಿರುವ ದೇಶಗಳ ಪೈಕಿ ಮೊದಲ ಸ್ಥಾನದಲ್ಲಿದೆ.

ಇತರ ಪಟ್ಟಿ ಮಾಡಿದ ಮಾರುಕಟ್ಟೆಗಳಲ್ಲಿ ಚೀನಾದಲ್ಲಿ ಏಳು ಭೌತಿಕ ಮಾರುಕಟ್ಟೆಗಳು ಸೇರಿವೆ. ಇದು ನಕಲಿ ಸರಕುಗಳ ತಯಾರಿಕೆ, ವಿತರಣೆ ಮತ್ತು ಮಾರಾಟಕ್ಕೆ ಹೆಸರುವಾಸಿಯಾಗಿದೆ.

ಈ ಸುದ್ದಿ ಓದಿದ್ದೀರಾ? ಕಳ್ಳತನ ಮಾಡಲು ಹೊಸ ಕ್ರೇಟಾ ಕಾರ್‌ನಲ್ಲಿ ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಕಳ್ಳರ ಬಂಧನ

ಯುಎಸ್‌ಟಿಆರ್‌ 2006ರಲ್ಲಿ ಮೊದಲ ಬಾರಿಗೆ ವಿಶೇಷ 301 ವರದಿಯಲ್ಲಿ ಕುಖ್ಯಾತ ಮಾರುಕಟ್ಟೆಗಳನ್ನು ಗುರುತಿಸಿದೆ. ಫೆಬ್ರವರಿ 2011ರಿಂದ, ಯುಎಸ್‌ಟಿಆರ್‌ ಸಾರ್ವಜನಿಕ ಜಾಗೃತಿ ಹೆಚ್ಚಿಸಲು ಮತ್ತು ಮಾರುಕಟ್ಟೆ ನಿರ್ವಾಹಕರು ಮತ್ತು ಸರ್ಕಾರಗಳು ಯುಎಸ್‌ ಅನ್ನು ರಕ್ಷಿಸುವ ಬೌದ್ಧಿಕ ಆಸ್ತಿ ಜಾರಿ ಪ್ರಯತ್ನಗಳಿಗೆ ಆದ್ಯತೆ ನೀಡಲು, ಪ್ರತ್ಯೇಕವಾಗಿ ಕುಖ್ಯಾತ ಮಾರುಕಟ್ಟೆಗಳ ಪಟ್ಟಿಯನ್ನು ವಾರ್ಷಿಕವಾಗಿ ಪ್ರಕಟಿಸಿದೆ. ವಿಶ್ವದಲ್ಲೇ ನಕಲಿ ಉತ್ಪನ್ನಗಳ ಮೊದಲ ಮೂಲವಾಗಿ ಚೀನಾ ಮುಂದುವರಿದಿದೆ ಎಂದು ವರದಿ ಹೇಳುತ್ತದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಎನ್‌.ಎಸ್‌.ಎಸ್‌ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ದಾರಿ: ನಾಲತವಾಡ

ವಿದ್ಯಾರ್ಥಿಗಳಲ್ಲಿ ಕೇವಲ ಶೈಕ್ಷಣಿಕ ಜ್ಞಾನವಷ್ಟೇ ಅಲ್ಲದೆ, ಸಾಮಾಜಿಕ ಜವಾಬ್ದಾರಿ, ನಾಯಕತ್ವ ಗುಣ...

ವಿಜಯಪುರ | ಮತದಾರರ ಹಕ್ಕು ರಕ್ಷಣೆಗೆ SIR ಪರಿಶೋಧನಾ ಪ್ರವಾಸ; ನಟ ಪ್ರಕಾಶ್ ರಾಜ್ ಭಾಗಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಮತದಾರರ...

ಯುವ ಪೀಳಿಗೆ ಸತ್ಯ, ಸರಳತೆಯ ತತ್ವಗಳನ್ನು ಅಳವಡಿಸಿಕೊಳ್ಳಬೇಕು: ಪ್ರೊ. ವಿಜಯಾ ಕೋರಿಶೆಟ್ಟಿ

ಸತ್ಯ, ಅಹಿಂಸೆ, ಸರಳತೆ, ಕರ್ತವ್ಯನಿಷ್ಠೆ ಮತ್ತು ನೈತಿಕ ಮೌಲ್ಯಗಳು ಕೇವಲ ಇತಿಹಾಸದ...

ಅಹಿಂಸೆ-ಸತ್ಯಾಗ್ರಹದ ಸಂದೇಶದೊಂದಿಗೆ ಸಾಮರಸ್ಯ ನಡಿಗೆ

ಅಹಿಂಸೆ ಮತ್ತು ಸತ್ಯಾಗ್ರಹದ ಮೂಲಕ ಭಾರತವನ್ನು ಮುನ್ನಡೆಸಿ, ಜಗತ್ತಿಗೆ ಬೆಳಕಾದ ಮಹಾತ್ಮ...