ಕಲಬುರಗಿ | ಬಾಂಗ್ಲಾ ಘಟನೆ ಖಂಡಿಸಿ ಸೇಡಂ ಬಂದ್

Date:

Advertisements

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ನಿರಂತರ ಕೊಲೆ, ದೌರ್ಜ್ಯನ್ಯ, ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಚಾರ ಹಾಗೂ ಸೇಡಂನಲ್ಲಿ ಹಿಂದೂ ಯುವಕರ ಮೇಲೆ ನಡೆದ ಗುಂಪು ಹಲ್ಲೆ ಖಂಡಿಸಿ ವಿವಿಧ ಹಿಂದೂಪರ ಸಂಘಟನೆ ಮುಖಂಡರು ಹಾಗೂ ಸ್ಥಳೀಯರು ನಡೆಸಿದ್ದ ಸೇಡಂ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.

ಕಲಬುರಗಿ ಜಿಲ್ಲೆಯ ಸೇಡಂ ಬಂದ್ ಕರೆಗೆ ವ್ಯಾಪಾರಸ್ಥರು ಸಂಪೂರ್ಣ ಬೆಂಬಲ ನೀಡಿದ್ದು ತಮ್ಮ ತಮ್ಮ ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚುವ ಮೂಲಕ ಬಂದ್‌ ಯಶಸ್ವಿಗೆ ಕಾರಣರಾಗಿದ್ದಾರೆ. ಇನ್ನೂ ಈ ಬಂದ್‌ಗೆ ಆಟೋ ಚಾಲಕರೂ ಕೂಡ ಬೆಂಬಲ‌ ನೀಡಿದ್ದು, ಕೇಲವ ತುರ್ತು ಅವಶ್ಯಕತೆ ಹಾಗೂ ರೋಗಿಗಳಿಗೆ ಮಾತ್ರ ಸಂಚಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕರುಣೇಶ್ವರ ಮಠದ ಆಂದೋಲಾ ಶ್ರೀಗಳು ಮಾತನಾಡಿ, “ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಲ್ಲೆ ನಡೆದಿದ್ದು, ಇಲ್ಲಿನ ಹಿಂದೂ ಬಾಂಧವರು ಸೇರಿಕೊಂಡು ಒಗ್ಗಟ್ಟಿನಿಂದ ಅಣ್ಣ ತಮ್ಮಂದಿರಂತೆ ಸೇಡಂ ಬಂದ್ ಮಾಡಿರುವುದು ಶ್ಲಾಘನೀಯವಾಗಿದೆ” ಎಂದರು.

Advertisements

“ವಿಶ್ವದಲ್ಲಿ ಹಿಂದೂಗಳ ಮೇಲೆ‌ ನಡೆಯುವ‌ ದೌರ್ಜನ್ಯ ಸಣ್ಣ ಸಮಸ್ಯೆಯಲ್ಲ. ಬಹಳ ದೊಡ್ಡ ಸಮಸ್ಯೆ, ಬೇರೆ ಬೇರೆ ದೇಶಗಳ‌ ಮೇಲೆ ಹಿಂದೂಗಳ ಪರಿಸ್ಥಿತಿ ಶೋಚನಿಯವಾಗಿದೆ. ಹೀಗಾಗಿ ನಾವೆಲ್ಲ ಹಿಂದೂಗಳು ಜಾತಿ-ಜಾತಿ‌ ಎನ್ನದೇ ಎಲ್ಲ ಹಿಂದೂಗಳೂ ಒಗ್ಗಟ್ಟಿನಿಂದ ಜೀವನ‌ ಸಾಗಿಸುವುದು ಅವಶ್ಯಕವಾಗಿದೆ. ಇಲ್ಲದಿದ್ದರೆ ಮುಂದೊಂದು ದಿನ ಜಿಹಾದಿ‌ ಮನಸ್ಥಿತಿ ಮತಾಂಧರಿಂದ ಅಪಾಯ ತಪ್ಪಿದ್ದಲ್ಲ” ಎಂದು ಕಿವಿಮಾತು ಹೇಳಿದರು.

“ಸೇಡಂನಲ್ಲಿ ಹಿಂದೂ ಯುವಕರ ಮೇಲೆ ಜಿಹಾದಿಗಳು ಹಲ್ಲೆ‌ ಮಾಡಿರುವುದು ಖಂಡನೀಯವಾಗಿದೆ. ಈವರೆಗೂ ಹಲ್ಲೆ ಮಾಡಿರುವ ಪ್ರಮುಖ ಆರೋಪಿಯನ್ನು ಬಂಧಿಸಿಲ್ಲ. ಸ್ಥಳೀಯ ಸಚಿವರು ಆರೋಪಿಗೆ ರಕ್ಷಣೆಗೆ ನಿಂತಂತೆ ಕಾಣುತ್ತಿದೆ. ಹಲ್ಲೆ ನಡೆಸಿರುವ ಆರೋಪಿಯನ್ನು ಕೂಡಲೇ ಬಂಧಿಸಬೇಕು” ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ವಿಜಯಪುರ | ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ: ಸಚಿವ ಎಂ ಬಿ ಪಾಟೀಲ್

ಈ ಪ್ರತಿಭಟನೆಯಲ್ಲಿ ಮಾಜಿ ಶಾಸಕ‌ ರಾಜಕುಮಾರ ಪಾಟೀಲ್, ವಿವಿಧ ಹಿಂದೂಪರ‌ ಸಂಘಟನೆಗಳ ಮುಖಂಡರಾದ ರಾಜು ನಿಲಂಗಿ, ಶಿವುಕುಮಾರ ಬೊಳಶೆಟ್ಟಿ, ಶಿವುಕುಮಾರ ಪಾಟೀಲ್ ತೆಲ್ಕೂರ್, ಶಿವಲಿಂಗರೆಡ್ಡಿ ಬೆನಕನಳ್ಳಿ, ಶಿವಾನಂದ ಸ್ವಾಮಿ, ಕಾಶಿನಾಥ ನಿಡುಗುಂದಾ, ಬಸವರಾಜ‌ ಕೊಸಗಿ, ಸಚಿನ್ ಮೀನಕೇರಿ, ಯಮುನಾ, ಶ್ರೀಮಂತ ಆವಂಟಿ ಸೇರಿದಂತೆ ಇತರರು ಇದ್ದರು.

ವರದಿ : ವಾಲೆಂಟಿಯರ್- ಸುನಿಲ್ ಕುಮಾರ್

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಕಾಡುಗೊಲ್ಲರು ಶ್ರೀ ಕೃಷ್ಣನ ಆರಾಧಕರಲ್ಲ : ಬಿ.ದೊಡ್ಡಯ್ಯ

ವಿಶಿಷ್ಟ ಆಚರಣೆ ಸಂಸ್ಕೃತಿಯಲ್ಲಿ ಬುಡಕಟ್ಟು ಎಂದು ಗುರುತಿಸಿಕೊಂಡ ಕಾಡು ಗೊಲ್ಲರು...

ತುಮಕೂರು | ನೂತನ ವಿದ್ಯಾರ್ಥಿನಿಲಯ ನಿರ್ಮಾಣ : ಸಚಿವರಿಂದ ಶಂಕುಸ್ಥಾಪನೆ

ತುಮಕೂರು ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಶ್ರೀ ಡಿ. ದೇವರಾಜ ಅರಸು...

ಗದಗ | ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ( ಕಭೀ) ಕಾರ್ಯಕ್ರಮದಡಿಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ...

ಉಡುಪಿ‌ | ಹುಡುಗಿಯ ವಿಚಾರಕ್ಕೆ ಜಗಳ, ಕೊಲೆಯಲ್ಲಿ ಅಂತ್ಯ, ಆರೋಪಿಯ ಬಂಧನ

ಉಡುಪಿ‌ ಜಿಲ್ಲೆಯ ಕಾರ್ಕಳದ ಕುಂಟಲ್ಪಾಡಿಯಲ್ಲಿ ಮದ್ಯರಾತ್ರಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ...

Download Eedina App Android / iOS

X