ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ನಿರಂತರ ಕೊಲೆ, ದೌರ್ಜ್ಯನ್ಯ, ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಚಾರ ಹಾಗೂ ಸೇಡಂನಲ್ಲಿ ಹಿಂದೂ ಯುವಕರ ಮೇಲೆ ನಡೆದ ಗುಂಪು ಹಲ್ಲೆ ಖಂಡಿಸಿ ವಿವಿಧ ಹಿಂದೂಪರ ಸಂಘಟನೆ ಮುಖಂಡರು ಹಾಗೂ ಸ್ಥಳೀಯರು ನಡೆಸಿದ್ದ ಸೇಡಂ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ಕಲಬುರಗಿ ಜಿಲ್ಲೆಯ ಸೇಡಂ ಬಂದ್ ಕರೆಗೆ ವ್ಯಾಪಾರಸ್ಥರು ಸಂಪೂರ್ಣ ಬೆಂಬಲ ನೀಡಿದ್ದು ತಮ್ಮ ತಮ್ಮ ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚುವ ಮೂಲಕ ಬಂದ್ ಯಶಸ್ವಿಗೆ ಕಾರಣರಾಗಿದ್ದಾರೆ. ಇನ್ನೂ ಈ ಬಂದ್‌ಗೆ ಆಟೋ ಚಾಲಕರೂ ಕೂಡ ಬೆಂಬಲ ನೀಡಿದ್ದು, ಕೇಲವ ತುರ್ತು ಅವಶ್ಯಕತೆ ಹಾಗೂ ರೋಗಿಗಳಿಗೆ ಮಾತ್ರ ಸಂಚಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಕರುಣೇಶ್ವರ ಮಠದ ಆಂದೋಲಾ ಶ್ರೀಗಳು ಮಾತನಾಡಿ, “ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಲ್ಲೆ ನಡೆದಿದ್ದು, ಇಲ್ಲಿನ ಹಿಂದೂ ಬಾಂಧವರು ಸೇರಿಕೊಂಡು ಒಗ್ಗಟ್ಟಿನಿಂದ ಅಣ್ಣ ತಮ್ಮಂದಿರಂತೆ ಸೇಡಂ ಬಂದ್ ಮಾಡಿರುವುದು ಶ್ಲಾಘನೀಯವಾಗಿದೆ” ಎಂದರು.
“ವಿಶ್ವದಲ್ಲಿ ಹಿಂದೂಗಳ ಮೇಲೆ ನಡೆಯುವ ದೌರ್ಜನ್ಯ ಸಣ್ಣ ಸಮಸ್ಯೆಯಲ್ಲ. ಬಹಳ ದೊಡ್ಡ ಸಮಸ್ಯೆ, ಬೇರೆ ಬೇರೆ ದೇಶಗಳ ಮೇಲೆ ಹಿಂದೂಗಳ ಪರಿಸ್ಥಿತಿ ಶೋಚನಿಯವಾಗಿದೆ. ಹೀಗಾಗಿ ನಾವೆಲ್ಲ ಹಿಂದೂಗಳು ಜಾತಿ-ಜಾತಿ ಎನ್ನದೇ ಎಲ್ಲ ಹಿಂದೂಗಳೂ ಒಗ್ಗಟ್ಟಿನಿಂದ ಜೀವನ ಸಾಗಿಸುವುದು ಅವಶ್ಯಕವಾಗಿದೆ. ಇಲ್ಲದಿದ್ದರೆ ಮುಂದೊಂದು ದಿನ ಜಿಹಾದಿ ಮನಸ್ಥಿತಿ ಮತಾಂಧರಿಂದ ಅಪಾಯ ತಪ್ಪಿದ್ದಲ್ಲ” ಎಂದು ಕಿವಿಮಾತು ಹೇಳಿದರು.
“ಸೇಡಂನಲ್ಲಿ ಹಿಂದೂ ಯುವಕರ ಮೇಲೆ ಜಿಹಾದಿಗಳು ಹಲ್ಲೆ ಮಾಡಿರುವುದು ಖಂಡನೀಯವಾಗಿದೆ. ಈವರೆಗೂ ಹಲ್ಲೆ ಮಾಡಿರುವ ಪ್ರಮುಖ ಆರೋಪಿಯನ್ನು ಬಂಧಿಸಿಲ್ಲ. ಸ್ಥಳೀಯ ಸಚಿವರು ಆರೋಪಿಗೆ ರಕ್ಷಣೆಗೆ ನಿಂತಂತೆ ಕಾಣುತ್ತಿದೆ. ಹಲ್ಲೆ ನಡೆಸಿರುವ ಆರೋಪಿಯನ್ನು ಕೂಡಲೇ ಬಂಧಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ: ಸಚಿವ ಎಂ ಬಿ ಪಾಟೀಲ್
ಈ ಪ್ರತಿಭಟನೆಯಲ್ಲಿ ಮಾಜಿ ಶಾಸಕ ರಾಜಕುಮಾರ ಪಾಟೀಲ್, ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರಾದ ರಾಜು ನಿಲಂಗಿ, ಶಿವುಕುಮಾರ ಬೊಳಶೆಟ್ಟಿ, ಶಿವುಕುಮಾರ ಪಾಟೀಲ್ ತೆಲ್ಕೂರ್, ಶಿವಲಿಂಗರೆಡ್ಡಿ ಬೆನಕನಳ್ಳಿ, ಶಿವಾನಂದ ಸ್ವಾಮಿ, ಕಾಶಿನಾಥ ನಿಡುಗುಂದಾ, ಬಸವರಾಜ ಕೊಸಗಿ, ಸಚಿನ್ ಮೀನಕೇರಿ, ಯಮುನಾ, ಶ್ರೀಮಂತ ಆವಂಟಿ ಸೇರಿದಂತೆ ಇತರರು ಇದ್ದರು.
ವರದಿ : ವಾಲೆಂಟಿಯರ್- ಸುನಿಲ್ ಕುಮಾರ್