ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಜ. 24 ರಂದು ಬೃಹತ್ ಬೌದ್ಧ ಸಮಾವೇಶ ಸಮಾರಂಭ ನಡೆಯಲಿದ್ದು, ಜೇವರ್ಗಿ ಮತ್ತು ಯಡ್ರಾಂವಿ ತಾಲೂಕಿನ ಬೌದ್ಧ ಅನುಯಾಯಿಗಳು ಹೆಚ್ಚಿನ ಜನಸಂಖ್ಯೆಯಲ್ಲಿ ಪಾಲ್ಗೊಳ್ಳಿ ಎಂದು ಭಾರತೀಯ ಬೌದ್ಧ ಮಹಾಸಭಾ ತಾಲೂಕು ಸಮಿತಿ ಅಧ್ಯಕ್ಷ ಮಲ್ಲಣ್ಣ ಕೊಡಚಿ ಮನವಿ ಮಾಡಿದರು.
ಜೇವರ್ಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ʼಬಿಕ್ಕು ಮತ್ತು ಬಿಕ್ಕುಣಿ ಸಂಘದ ಬಂತೆ ಬೋಧಿದತ್ತ ಅವರು ನ. 15ರಿಂದ ಸನ್ನತಿಯಿಂದ ಪ್ರಾರಂಭವಾಗಿರುವ ಪಂಚಶೀಲ ಪಾದಯಾತ್ರೆಯು ಜ. 23 ರಂದು ಯಶವಂತಪುರ ಮಾರ್ಗವಾಗಿ ಬೆಂಗಳೂರಿಗೆ ತಲುಪಲಿದ್ದಾರೆ. ಜ. 24 ರಂದು ವಿವಿಧ ಬೇಡಿಕೆಗಳ ಈಡೇರಿಕಗಾಗಿ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದುʼ ಎಂದರು.
ಈ ಸುದ್ದಿ ಓದಿದ್ದೀರಾ?: ಕಲಬುರಗಿ | ಕಾರು-ಲಾರಿ ಮುಖಾಮುಖಿ ಡಿಕ್ಕಿ : ಸ್ಥಳದಲ್ಲೇ ಮೂವರ ಸಾವು
ಸುದ್ದಿಗೋಷ್ಠಿಯಲ್ಲಿ ಚಂದ್ರಶೇಖರ್ ಹರನಾಳ, ಭೀಮರಾಯ ನಗನೂರ್, ಶಾಂತಪ್ಪ ಯಲಗೋಡ, ಪುಂಡಲಿಕ ಗಾಯಕವಾಡ, ವಿಶ್ವರಾಧ್ಯ ಮಾಯೆ, ಪ್ರಭಾಕರ್ ಸಾಗರ್, ಶ್ರೀಹರಿ ಕರ್ಕಳ್ಳಿ, ಸಿದ್ದು ಕೆರೂರು, ಮಿಲಿಂದ ಸಾಗರ್, ರಾಜು ಹಾಲ್ಗಡ್ಲ, ಮುತ್ತಪ್ಪ ಜವಳಗಿ, ದೊಡ್ಡಪ್ಪ ಮಲ್ಲ, ಮೌನೇಶ್ ಆಂದೋಲ, ಭೀಮಾಶಂಕರ್ ಬಡಿಗೇರ್, ವಿಜಯ್ ಕುಮಾರ್ ಧರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.