ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕು ಘಟಕದ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಗುರುದೇವ ಡಿ ಪೂಜಾರಿ ಅವರ ನೇತೃತ್ವದಲ್ಲಿ ಕನ್ನಡದ ಅಭಿಮಾನಿಗಳು ಕನ್ನಡ ಬಾವುಟ ಹಿಡಿದು ಬೈಕ್ ರ್‍ಯಾಲಿ ಮುಖಾಂತರ ಅಫಜಲಪುರ ಪಟ್ಟಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿದರು.
ರ್‍ಯಾಲಿಯಲ್ಲಿ ಕನ್ನಡ ಅಭಿಮಾನದ ಗೋಷ ವಾಕ್ಯಗಳು ಹೇಳುವ ಮುಖಾಂತರ ವಿಜೃಂಭಣೆಯಿಂದ ಆಚರಿಸಲಾಯಿತು. ಬೈಕ್ ರ್‍ಯಾಲಿ ಬಸವೇಶ್ವರ ವೃತ್ತದಿಂದ ಪ್ರಾರಂಭವಾದ ರ್‍ಯಾಲಿ ಅಂಬೇಡ್ಕರ್ ವೃತ್ತ, ಕೇಂದ್ರ ಬಸ್ ನಿಲ್ದಾಣ, ವಿಜಯಲಕ್ಷ್ಮಿ ದೇವಸ್ಥಾನದಿಂದ ಹೋರಾಟ ರ್‍ಯಾಲಿ ಅಫಜಲಪೂರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮುಕ್ತಾಯ ಮಾಡಲಾಯಿತು.
ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಪ್ರಭು ಗಾಡಿವಡ್ಡರ, ಚೇತನ್ ಪಾಟೀಲ್, ಸಿದ್ದು ಸುಲ್ತಾನಪೂರ, ದತ್ತು ಭಂಕಲಗಿ, ಬೈಲಪ್ಪ ಗೌರ, ಲತೀಫ್ ಕಲಬುರಗಿ, ಲಕ್ಷ್ಮಿಪುತ್ರ ಜಮಾದಾರ, ಶಿವು ಹೊ ಹೊಟ್ಕರ್, ಕರವೇ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.


