ಕೋಲ್ಕತ್ತಾದಲ್ಲಿ ವೈದ್ಯೆಯ ಅತ್ಯಾಚಾರ-ಕೊಲೆ ಖಂಡಿಸಿ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ವಿರೋಧಿಸಿ ಕಲಬುರಗಿ ನಗರದ ಸರ್ದಾರ್ ವಲ್ಲಭ ಬಾಯಿ ಪಟೇಲ್ ವೃತ್ತದಲ್ಲಿ ವಿಶ್ವ ಹಿಂದೂ ಪರಿಷದ್ ಕಲಬುರಗಿ ಮಹಾನಗರ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯ ಬಳಿಕ ಕಲಬುರಗಿ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷೆ ಸುಮಂಗಲಾ ಚಕ್ರವರ್ತಿ, ಇತ್ತೀಚಿಗಷ್ಟೆ ಕೋಲ್ಕತ್ತಾದಲ್ಲಿ ಟ್ರೈನಿ ವೈದ್ಯ ಮೇಲೆ ನಡೆದಂತಹ ಬಲಾತ್ಕಾರ ಮತ್ತು ಕೊಲೆಯಂತಹ ಪೈಶಾಚಿಕ ಕೃತ್ಯ. ಇಡೀ ಮಾನವಕುಲಕ್ಕೆ ಕಪ್ಪುಮಸಿ ಬಳೆದಿದೆ. ಹೇಸಿಗೆ ಆಗುವಂತಹ ಈ ಕೃತ್ಯ ನಡೆದಿದೆ” ಎಂದರು.
ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿಗಳು ಮಹಿಳೆಯಾಗಿದ್ದರೂ ಅಲ್ಲಿಯ ಮಹಿಳೆಯರ ಮೇಲೆ ಈ ರೀತಿಯ ಆಮಾನವೀಯ ಘಟನೆಗಳು ನಡೆಯುತ್ತವೆ. ಸಿಎಂ ಮಮತಾ ಬ್ಯಾನರ್ಜಿ ಅವರು ಮೌನವಾಗಿರುವುದು ಅವರ ಆಡಳಿತದ ಮೇಲೆ ಅವರ ಹಿಡಿತವಿಲ್ಲವೆಂದು ತೋರಿಸುತ್ತದೆ. ಚುರುಕಾಗಿ ತೀವ್ರಗತಿಯಿಂದ ವಿಚಾರಣೆ ನಡೆಸಿ ತಪ್ಪಿತಸ್ಥತರಿಗೆ ಶಿಕ್ಷೆ ವಿಧಿಸುವುದು ಬಿಟ್ಟು ಮೆರವಣಿಗೆ. ಪ್ರತಿಭಟನೆಯಂತಹ ಡಾಂಬಿಕ ಆಚರಣೆ ಮಾಡುತ್ತಿದ್ದಾರೆ ಎಂದು ದೂರಿದರು.

ರಾಷ್ಟ್ರಪತಿಗಳು ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದುರ್ಗಾವಾಹಿನಿಯ ಮೃಣಾಲ ಜಾಹಗಿರದಾರ, ಅಶ್ವಿನ್ ಕುಮಾರ್ ಡಿ, ರಾಜು ನವಲದಿ ಇನ್ನಿತರರು ಉಪಸ್ಥಿತರಿದ್ದರು.
