ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಕುಟನೂರ ಗ್ರಾಮದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮುದಾಯ ಭವನದ ದುರಸ್ತಿ ಕಾಮಗಾರಿ ಕಳಪೆ ಮಟ್ಟದಿಂದ ನಡೆದಿದೆ ಎಂದು ಅಂಬೇಡ್ಕರ್ ಸೇನೆ ತಾಲೂಕು ಅಧ್ಯಕ್ಷ ಸಾಗರ ಆರೋಪಿಸಿದ್ದಾರೆ.
ʼಗ್ರಾಮ ಪಂಚಾಯಿತಿಯ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಈ ಅಂಬೇಡ್ಕರ್ ಭವನ ದುರಸ್ತಿ ಕಾರ್ಯ ನಡೆಸಲಾಗಿದೆ. ಆದರೆ ಸರಿಯಾಗಿ ಕಾಮಗಾರಿ ನಡೆಸದೆ ಮನಬಂದಂತೆ ದುರಸ್ತಿಗೊಳಿಸಿ ಸುಳ್ಳು ಬಿಲ್ ಸೃಷ್ಟಿಸಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದುʼ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಲಗಮಣ್ಣ ಕೂಟನೂರ, ಸಂತೋಷ ಕೂಟನೂರ, ಕುಮಾರ ಕೂಟನೂರ, ಭಾಗಣ್ಣ ಕೂಟನೂರ, ಕ್ರಷ್ಣ ಕೂಟನೂರ ಮತ್ತು ಗ್ರಾಮದ ಹಿರಿಯರು ಇದ್ದರು.