ಕಲಬುರಗಿ | ಚಳಿಗಾಲದ ಅಂತ್ಯ – ವಸಂತಕಾಲದ ಆಗಮನ ಸೂಚಿಸುವ ಹೋಳಿ ಹಬ್ಬ

Date:

Advertisements

ಹೋಳಿಯು ದೇಶದಾದ್ಯಂತ ಹೆಚ್ಚು ಉತ್ಸಾಹ ಮತ್ತು ಸಡಗರ ಸಂಭ್ರಮದಿಂದ ಆಚರಿಸಲಾಗುವ ಬಣ್ಣಗಳ ಹಬ್ಬ ಹೋಳಿಯನ್ನು ಸಾಂಪ್ರದಾಯಿಕವಾಗಿ ಫೆಬ್ರವರಿ ಕೊನೆಯಲ್ಲಿ ಅಥವಾ ಮಾರ್ಚ್ ಆರಂಭದಲ್ಲಿ ಆಚರಿಸಲಾಗುತ್ತದೆ. ಹೋಳಿಯು ವಸಂತಕಾಲದ ಆಗಮನ ಮತ್ತು ಚಳಿಗಾಲದ ಅಂತ್ಯವನ್ನು ಸೂಚಿಸುತ್ತದೆ.

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿ ಹೋಳಿಹಬ್ಬ ಆಚರಣೆ ದುಲಂಡಿ ಅಂದರೆ, ಬಣ್ಣ ಆಡುವ ಹಿಂದಿನ ದಿನ ಸಂಜೆ ಎಲ್ಲರ ಮನೆಯಿಂದ ಕಟ್ಟಿಗೆ ಸಂಗ್ರಹಣೆ ಮಾಡಿ ಬಯಲು ಪ್ರದೇಶದಲ್ಲಿ ಕುಳ್ಳಿನ ಬಣಮೆ ಮಾಡಿ ಅದಕ್ಕೆ ಪೂಜೆಮಾಡಿ ನೈವೇದ್ಯ ಸಲ್ಲಿಸಿ, ಸಂಗ್ರಹಣೆ ಮಾಡಿರುವ ಕಟ್ಟಿಗೆ ಬಣಮೆ ಸುತ್ತಲೂ ಜೋಡಿಸಿ ಬೆಂಕಿ ಹಚ್ಚಿ ಬಣಮೆ ಸುತ್ತ, ಊರಿನ ಹಿರಿಯರು ಕಿರಿಯರು ಮಹಿಳೆಯರು ಸೇರಿಕೊಂಡು ಕಾಮಣ್ಣ ಸತ್ತರೆ ಭೀಮಣ್ಣ ಅಳತ್ತಾನೆ, ಭೀಮಣ್ಣ ಸತ್ತರೆ ಕಾಮಣ ಅಳುತ್ತಾನೆ ಎಂದು ಹಾಡು ಹಾಡುತ್ತಾ ಕಾಮಣ್ಣನನ್ನು ಸುಡುತ್ತಾರೆ.

ಹಳೆಯ ಬಟ್ಟೆ ಧರಿಸಿ ಬಣ್ಣ ಖರೀದಿಸಿ ತಂದು ಬಕೆಟ್, ಜಗ್ಗಳಲ್ಲಿ‌ ಬಣ್ಣ ಕಲಿಸಿ, ಸಣ್ಣ ಮಕ್ಕಳು ಬಾಟಲ್, ಪಿಚಕಾರಿಗಳಲ್ಲಿ ಬಣ್ಣದ ನೀರು ತುಂಬಿಕೊಂಡು ಎಲ್ಲರಿಗೂ ಬೆಣ್ಣ ಎರಚಿ ಹಬ್ಬ ಆಚರಿಸುತ್ತಾರೆ.

Advertisements

ನಂತರ ಯುವಕರೆಲ್ಲ ಸೇರಿಕೊಂಡು ಹುಡುಗರು ಸೀರೆ ಧರಿಸಿ, ಅವರಲ್ಲಿ ಒಬ್ಬನನ್ನು ಹೆಣ್ಣದ ಹಾಗೆ ಅಲಂಕಾರ ಮಾಡಿ ಅವರನ್ನು ಹೊತ್ತುಕೊಂಡು ಹಲಿಗೆ ಬಾರಿಸುತ್ತಾ ಮನೆ ಮನೆಗೆ  ಕಾಮಣ್ಣ ಸತ್ತಾನೋ ಎಂದು ಮೆರವಣಿಗೆ ಮಾಡುತ್ತಾ, ಒಬ್ಬರಿಗೊಬ್ಬರು ಬಣ್ಣ ಹಚ್ಚುತ್ತಾ ಹಬ್ಬ ಆಚರಿಸುತ್ತಾರೆ.

ಮಸರು ತುಂಬಿದ ಮಡಿಕೆಯೊಡೆಯುವ ಆಟ ಸಹ ಆಡುತ್ತಾರೆ. ಸಂಬಂಧಿಕರ ಮನೆಯಲ್ಲಿ, ನೆರೆಯ ಹೊರೆಯವರ ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಅವರಿಗೆ ಸಕ್ಕರೆ ಹಾರ ಹಾಕುತ್ತಾರೆ. ಊರಲ್ಲಿರುವ ಮಕ್ಕಳಿಗೂ ಈ ಸರಕಳುಹಿಸಿಕೊಟ್ಟು ಸಂಭ್ರಮಾಚರಣೆ ಮಾಡುತ್ತಾರೆ.

ಬಣ್ಣಆಡಿ ಸಂಭ್ರಮಿಸಿದ ಬಳಿಕ ಮನೆಗೆ ಬೃುವವರಿಗೆ ಮನೆಯಲ್ಲಿ ಊಟಕ್ಕೆ ಕಡುಬು, ಪುಂಡಿಪಲ್ಯ, ಉಳ್ಳಾಗಡ್ಡಿ ಚಟ್ನ,ಕಡ್ಲಿ ಪಲ್ಯ ಮಾಡುತ್ತಿದರು ನಂತರ ಸಂಜೆ ಮಾಂಸದ ಅಡುಗೆ ಊಟ ಸವಿಯುವುದು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಗೀತಾ ಹೊಸಮನಿ
ಗೀತಾ ಹೊಸಮನಿ
ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ದೇಶಕ್ಕೆ ಬರಹಗಾರರ ಕೊಡುಗೆ ಅನನ್ಯ

ದೇಶದ ಸ್ವಾತಂತ್ರ್ಯಕ್ಕೆ ಸಾಹಿತಿ, ಬರಹಗಾರರ ಕೊಡುಗೆ ಅನನ್ಯವಾಗಿದೆ. ಲೇಖನಿ ಖಡ್ಗಕ್ಕಿಂತ ಹರಿತವಾದದ್ದು,...

ಮೈಸೂರು | ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ; ಮೀಲಾದ್ ಘೋಷಣಾ ಜಾಥಾ

ಮೈಸೂರು ನಗರದ ಅಶೋಕ ರಸ್ತೆಯಲ್ಲಿರುವ ಮೀಲಾದ್ ಪಾರ್ಕ್ ವೃತ್ತದಲ್ಲಿ 'ಸುನ್ನಿ ಯುವಜನ...

ಮೈಸೂರು | ಗಣೇಶನ ವೇಷಧರಿಸಿ ರಕ್ತದಾನದ ಜಾಗೃತಿ

ಮೈಸೂರು ಜೀವಧಾರ ರಕ್ತ ನಿಧಿ ಕೇಂದ್ರದ ವತಿಯಿಂದ ರಾಮಸ್ವಾಮಿ ವೃತದಲ್ಲಿ ವಾಹನ...

ಸಾಕ್ಷಿ ದೂರುದಾರನಿಗೆ ಆಶ್ರಯ: ಮಹೇಶ್ ಶೆಟ್ಟಿ ತಿಮರೋಡಿ ನಿವಾಸದಲ್ಲಿ ಎಸ್‌ಐಟಿ ಶೋಧ

ಸಾಕ್ಷಿ ದೂರುದಾರ ತಾನು ಉಜಿರೆಯಲ್ಲಿರುವ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ...

Download Eedina App Android / iOS

X