ಕಳೆದ ಹತ್ತು ವರ್ಷಗಳಿಂದ ವ್ಯಾಸಂಗ ಮಾಡಿ ಅನೇಕ ಕಾರಣಗಳಿಂದ ಮುಂದುವರಿಸಲಾಗದ ಎಲ್ಲ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಗುಲಬರ್ಗಾ ವಿಶ್ವವಿದ್ಯಾಲಯ ವಿಶೇಷ ಅವಕಾಶ ಕಲ್ಪಿಸಿಕೊಡಲು ನಿರ್ಧರಿಸಿದೆ.
ಗುಲ್ಬರ್ಗಾ ವಿವಿಯಲ್ಲಿ ಜೂನ್ನಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದೆ. 2016ನೇ ಸಾಲಿನಿಂದ ಪ್ರಸಕ್ತ ಸಾಲಿನವರೆಗೆ ವ್ಯಾಸಂಗ ಮಾಡಿ ಆರೋಗ್ಯ, ಆರ್ಥಿಕ ತೊಂದರೆ, ಕೌಟುಂಬಿಕ ಕಾರಣಗಳಿಂದ ವ್ಯಾಸಂಗ ಮುಂದುವರಿಸಲು ಆಗದಿರುವ ಯುಜಿ, ಪಿಜಿ ವಿದ್ಯಾರ್ಥಿಗಳಿಗೆ ಈ ಅವಕಾಶ ಕಲ್ಪಿಸಿದೆ.
ಈ ವಿಶೇಷ ಅವಕಾಶದಲ್ಲಿ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಜಾರಿಯಲ್ಲಿರುವ ಸೆಮಿಸ್ಟರ್ಗಳ ಸಿಬಿಸಿಎಸ್ ಪಠ್ಯ ಮತ್ತು ನಿಯಮಾವಳಿಯಂತೆ ಪರೀಕ್ಷೆ ಬರೆಯಬೇಕು. ಅಗತ್ಯ ಶುಲ್ಕ ಭರಿಸಬೇಕು ಎಂದು ನಿರ್ಣಯಿಸಿದೆ.
ಇದನ್ನೂ ಓದಿ : ಬೀದರ್ | ಮುಗಿಲು ಸೇರಿದ ಮಳೆ, ಒಣಗುತ್ತಿರುವ ಬೆಳೆ; ಬಯಲು ಸೀಮೆಯಲ್ಲಿ ಬರದ ಕಾರ್ಮೋಡ!
ಬಿಎ, ಬಿಕಾಂ ವಿದ್ಯಾರ್ಥಿಗಳಿಗೆ ₹5 ಸಾವಿರ ಬಿಎಸ್ಸಿ, ಬಿಬಿಎಂ, ಬಿಸಿಎ ವಿದ್ಯಾರ್ಥಿಗಳಿಗೆ ₹6 ಸಾವಿರ ಬಿಇಡಿ, ಬಿಪಿಇಡಿ 7 ಸಾವಿರ ರೂ., ಪಿಜಿ (ಆರ್ಟ್ಸ್, ಸೋಷಿಯಲ್ ಸೈನ್ಸ್, ಕಾಮರ್ಸ್) ವಿದ್ಯಾರ್ಥಿಗಳಿಗೆ ₹6 ಸಾವಿರ ಪಿಜಿ ವಿಜ್ಞಾನ ಮತ್ತು ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ₹7 ಸಾವಿರ, ಯುಜಿ ಎಲ್ಎಲ್ಬಿ ವಿದ್ಯಾರ್ಥಿಗಳಿಗೆ ₹6 ಸಾವಿರ, ಪಿಜಿ ಎಲ್ಎಲ್ಎಂ ವಿದ್ಯಾರ್ಥಿಗಳಿಗೆ ₹7 ಸಾವಿರ ಶುಲ್ಕ ನಿಗದಿ ಮಾಡಲಾಗಿದೆ.





