SIR ಪರಿಷ್ಕೃತ ವೇಳಾಪಟ್ಟಿ: ರಾಜ್ಯದಲ್ಲಿ ಶೇ.95.69ರಷ್ಟು ಎಣಿಕೆ ನಮೂನೆ ವಿತರಣೆ; ಜಿಲ್ಲಾವಾರು ಪ್ರಗತಿ ಹೇಗಿದೆ?

Date:

ಭಾರತ ಚುನಾವಣಾ ಆಯೋಗದ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಕಾರ್ಯ ರಾಜ್ಯಾದ್ಯಂತ ಚುರುಕುಗೊಂಡಿದೆ. ಜುಲೈ 15ರಂದು ಸಂಜೆ 4 ಗಂಟೆಯವರೆಗಿನ ಅಧಿಕೃತ ಮಾಹಿತಿಯಂತೆ, ರಾಜ್ಯದಲ್ಲಿ ಒಟ್ಟು 5,54,32,314 ಮತದಾರರು ಇದ್ದು, ಅವರಲ್ಲಿ 5,30,42,667 (ಶೇ.95.69) ಎಣಿಕೆ ನಮೂನೆಗಳನ್ನು ಬಿಎಲ್‌ಒಗಳ ಮೂಲಕ ವಿತರಿಸಲಾಗಿದೆ. ರಾಜ್ಯದ 44,798 ಮತಗಟ್ಟೆಗಳಲ್ಲಿ (ಶೇ.75.86) ಶೇ.100ರಷ್ಟು ನಮೂನೆ ವಿತರಣೆ ಪೂರ್ಣಗೊಂಡಿದ್ದು, 6,932 ಮತಗಟ್ಟೆಗಳು (ಶೇ.11.74) ಶೇ.90ಕ್ಕಿಂತ ಹೆಚ್ಚಿನ ಪ್ರಗತಿ ಸಾಧಿಸಿವೆ. ಡಿಜಿಟಲೀಕರಣದಲ್ಲಿಯೂ 2,25,60,605 (ಶೇ.40.70) ನಮೂನೆಗಳು ಅಪ್‌ಲೋಡ್ ಆಗಿವೆ.

- Advertisement -

ಮತದಾರರ ಪಟ್ಟಿಯನ್ನು ಹೆಚ್ಚು ನಿಖರ, ಪಾರದರ್ಶಕ ಹಾಗೂ ನವೀಕೃತವಾಗಿಡುವ ಉದ್ದೇಶದಿಂದ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ ಮನೆಗೆ ತೆರಳಿ ಎಣಿಕೆ ನಮೂನೆಗಳನ್ನು ವಿತರಿಸುತ್ತಿದ್ದು, ಮತದಾರರಿಂದ ಭರ್ತಿ ಮಾಡಿದ ನಮೂನೆಗಳನ್ನು ಸಂಗ್ರಹಿಸುವ ಕಾರ್ಯವೂ ಸಮಾನಾಂತರವಾಗಿ ನಡೆಯುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ರಾಜ್ಯದ ಒಟ್ಟು 44,798 ಮತಗಟ್ಟೆಗಳಲ್ಲಿ ಶೇ.75.86ರಷ್ಟು ಮತಗಟ್ಟೆಗಳು ಶೇ.100ರಷ್ಟು ನಮೂನೆ ವಿತರಣೆ ಪೂರ್ಣಗೊಳಿಸಿವೆ. ಇದು ಕ್ಷೇತ್ರಮಟ್ಟದಲ್ಲಿ ಕಾರ್ಯ ವೇಗವಾಗಿ ಸಾಗುತ್ತಿರುವುದಕ್ಕೆ ಸೂಚಕವಾಗಿದೆ. ಇದಲ್ಲದೆ 6,932 ಮತಗಟ್ಟೆಗಳು (ಶೇ.11.74) ಶೇ.90ಕ್ಕಿಂತ ಹೆಚ್ಚಿನ ಪ್ರಗತಿಯನ್ನು ದಾಖಲಿಸಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಸಂಪೂರ್ಣ ವಿತರಣೆಯ ಗುರಿ ತಲುಪುವ ನಿರೀಕ್ಷೆಯಿದೆ.

ಡಿಜಿಟಲ್ ಪ್ರಕ್ರಿಯೆಯಲ್ಲಿಯೂ ಗಮನಾರ್ಹ ಪ್ರಗತಿ ಕಂಡುಬಂದಿದೆ. ಇದುವರೆಗೆ 2,25,60,605 ಎಣಿಕೆ ನಮೂನೆಗಳು (ಶೇ.40.70) ಚುನಾವಣಾ ಆಯೋಗದ ಆನ್‌ಲೈನ್ ವ್ಯವಸ್ಥೆಗೆ ಅಪ್‌ಲೋಡ್ ಆಗಿದ್ದು, ಭರ್ತಿ ಮಾಡಿದ ಅರ್ಜಿಗಳ ಡಿಜಿಟಲೀಕರಣ ಕಾರ್ಯವನ್ನು ಜಿಲ್ಲಾವಾರು ತಂಡಗಳು ನಿರಂತರವಾಗಿ ಮುಂದುವರಿಸಿವೆ. ಡಿಜಿಟಲ್ ದಾಖಲೀಕರಣದಿಂದ ಪರಿಶೀಲನೆ, ದೋಷ ತಿದ್ದುಪಡಿ ಹಾಗೂ ಅಂತಿಮ ಮತದಾರರ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆ ಮತ್ತಷ್ಟು ವೇಗ ಮತ್ತು ಪಾರದರ್ಶಕತೆಯನ್ನು ಪಡೆಯಲಿದೆ.

ಚುನಾವಣಾ ಆಯೋಗವು ಮತದಾರರಿಗೆ ಬಿಎಲ್‌ಒಗಳಿಗೆ ಅಗತ್ಯ ದಾಖಲೆಗಳೊಂದಿಗೆ ಸಹಕರಿಸಿ, ಭರ್ತಿ ಮಾಡಿದ ಎಣಿಕೆ ನಮೂನೆಗಳನ್ನು ನಿಗದಿತ ಅವಧಿಯೊಳಗೆ ಸಲ್ಲಿಸುವಂತೆ ಮನವಿ ಮಾಡಿದೆ. ಈ ಪ್ರಕ್ರಿಯೆಯಲ್ಲಿ ಹೊಸ ಮತದಾರರ ಸೇರ್ಪಡೆ, ವಿಳಾಸ ಬದಲಾವಣೆ, ಹೆಸರು ತಿದ್ದುಪಡಿ ಹಾಗೂ ಅನರ್ಹ ಹೆಸರುಗಳ ಗುರುತಿಸುವಿಕೆ ಸೇರಿದಂತೆ ಮತದಾರರ ಪಟ್ಟಿಯನ್ನು ಸಮಗ್ರವಾಗಿ ಪರಿಷ್ಕರಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ.

ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಪ್ರತಿದಿನ ಪ್ರಗತಿಯನ್ನು ಪರಿಶೀಲಿಸುತ್ತಿದ್ದು, ಕಡಿಮೆ ಪ್ರಗತಿ ಸಾಧಿಸಿರುವ ಮತಗಟ್ಟೆಗಳಲ್ಲಿ ವಿಶೇಷ ತಂಡಗಳನ್ನು ನಿಯೋಜಿಸಿ ಕಾರ್ಯವನ್ನು ತ್ವರಿತಗೊಳಿಸಲು ಸೂಚನೆ ನೀಡಿದ್ದಾರೆ. ಚುನಾವಣೆಗೆ ಮುನ್ನ ಶೇ.100ರಷ್ಟು ಎಣಿಕೆ ನಮೂನೆ ವಿತರಣೆ ಮತ್ತು ಡಿಜಿಟಲೀಕರಣ ಪೂರ್ಣಗೊಳಿಸುವ ಗುರಿಯೊಂದಿಗೆ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಜಿಲ್ಲಾವಾರು ಪ್ರಗತಿ

ಬೆಳಗಾವಿ ಜಿಲ್ಲೆ ರಾಜ್ಯದಲ್ಲೇ ಅತಿ ಹೆಚ್ಚು 41.07 ಲಕ್ಷ ಮತದಾರರನ್ನು ಹೊಂದಿದ್ದು, 40.84 ಲಕ್ಷ ಎಣಿಕೆ ನಮೂನೆಗಳನ್ನು ವಿತರಿಸಲಾಗಿದೆ. ಇದರಲ್ಲಿ 20.42 ಲಕ್ಷ ನಮೂನೆಗಳು ಈಗಾಗಲೇ ಡಿಜಿಟಲೀಕರಣಗೊಂಡಿವೆ.

ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 16.31 ಲಕ್ಷ ಮತದಾರರಿದ್ದು, 16.11 ಲಕ್ಷ ನಮೂನೆಗಳ ವಿತರಣೆ ಪೂರ್ಣಗೊಂಡಿದೆ. ಈ ಪೈಕಿ 7.10 ಲಕ್ಷ ನಮೂನೆಗಳು ಡಿಜಿಟಲ್ ದಾಖಲಾಗಿವೆ.

ವಿಜಯಪುರ ಜಿಲ್ಲೆಯಲ್ಲಿ 19.82 ಲಕ್ಷ ಮತದಾರರಿಗೆ 19.32 ಲಕ್ಷ ನಮೂನೆಗಳು ತಲುಪಿದ್ದು, 8.88 ಲಕ್ಷ ನಮೂನೆಗಳ ಡಿಜಿಟಲೀಕರಣ ಪೂರ್ಣಗೊಂಡಿದೆ.

ಕಲಬುರಗಿ ಜಿಲ್ಲೆಯಲ್ಲಿ 23.71 ಲಕ್ಷ ಮತದಾರರ ಪೈಕಿ 23.53 ಲಕ್ಷ ನಮೂನೆಗಳು ವಿತರಣೆಗೊಂಡಿದ್ದು, 8.11 ಲಕ್ಷ ನಮೂನೆಗಳು ಡಿಜಿಟಲೀಕರಣಗೊಂಡಿವೆ.

ಯಾದಗಿರಿ ಜಿಲ್ಲೆ ಶೇ.100ರಷ್ಟು ನಮೂನೆ ವಿತರಣೆ ಸಾಧಿಸಿದ್ದು, 10.53 ಲಕ್ಷ ಮತದಾರರ ಪೈಕಿ ಎಲ್ಲರಿಗೂ ನಮೂನೆ ತಲುಪಿದೆ. ಇದರಲ್ಲಿ 3.90 ಲಕ್ಷ ನಮೂನೆಗಳು ಡಿಜಿಟಲೀಕರಣಗೊಂಡಿವೆ.

ಬೀದರ್ ಜಿಲ್ಲೆಯಲ್ಲಿ 14.61 ಲಕ್ಷ ಮತದಾರರಿಗೆ 14.58 ಲಕ್ಷ ನಮೂನೆಗಳು ವಿತರಿಸಲಾಗಿದ್ದು, 5.87 ಲಕ್ಷ ನಮೂನೆಗಳು ಡಿಜಿಟಲೀಕರಣಗೊಂಡಿವೆ.

ರಾಯಚೂರು ಜಿಲ್ಲೆ ಕೂಡ ಶೇ.100ರಷ್ಟು ವಿತರಣೆ ಸಾಧಿಸಿದ್ದು, 17.14 ಲಕ್ಷ ಮತದಾರರಲ್ಲಿ 9.38 ಲಕ್ಷ ನಮೂನೆಗಳು ಡಿಜಿಟಲೀಕರಣಗೊಂಡಿವೆ.

ಕೊಪ್ಪಳ ಜಿಲ್ಲೆಯಲ್ಲಿ 11.90 ಲಕ್ಷ ಮತದಾರರಿಗೆ ಸಂಪೂರ್ಣ ನಮೂನೆ ವಿತರಣೆ ಪೂರ್ಣಗೊಂಡಿದ್ದು, 6.98 ಲಕ್ಷ ನಮೂನೆಗಳು ಡಿಜಿಟಲ್ ಆಗಿವೆ.

ಗದಗ ಜಿಲ್ಲೆಯಲ್ಲಿ 9.02 ಲಕ್ಷ ಮತದಾರರ ಪೈಕಿ 9.02 ಲಕ್ಷಕ್ಕೂ ಹೆಚ್ಚು ನಮೂನೆಗಳು ವಿತರಣೆಗೊಂಡಿದ್ದು, 4.28 ಲಕ್ಷ ನಮೂನೆಗಳು ಡಿಜಿಟಲೀಕರಣಗೊಂಡಿವೆ.

ಧಾರವಾಡ ಜಿಲ್ಲೆಯಲ್ಲಿ 16.21 ಲಕ್ಷ ಮತದಾರರಲ್ಲಿ 15.50 ಲಕ್ಷ ಮಂದಿಗೆ ನಮೂನೆ ವಿತರಣೆ ಪೂರ್ಣಗೊಂಡಿದ್ದು, 5.32 ಲಕ್ಷ ನಮೂನೆಗಳು ಡಿಜಿಟಲೀಕರಣಗೊಂಡಿವೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ 12.30 ಲಕ್ಷ ಮತದಾರರಿಗೆ ಬಹುತೇಕ ಸಂಪೂರ್ಣ ವಿತರಣೆ ಪೂರ್ಣಗೊಂಡಿದ್ದು, 6.33 ಲಕ್ಷ ನಮೂನೆಗಳು ಡಿಜಿಟಲೀಕರಣಗೊಂಡಿವೆ.

ಹಾವೇರಿ, ವಿಜಯನಗರ, ದಾವಣಗೆರೆ, ಮಂಡ್ಯ, ಹಾಸನ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳು ಶೇ.100ರಷ್ಟು ಎಣಿಕೆ ನಮೂನೆ ವಿತರಣೆಯಲ್ಲಿ ಮುಂಚೂಣಿಯಲ್ಲಿದ್ದು, ಡಿಜಿಟಲೀಕರಣ ಕಾರ್ಯವೂ ವೇಗವಾಗಿ ನಡೆಯುತ್ತಿದೆ.

ಬಳ್ಳಾರಿ ಜಿಲ್ಲೆಯಲ್ಲಿ 12.25 ಲಕ್ಷ, ಚಿತ್ರದುರ್ಗದಲ್ಲಿ 14.38 ಲಕ್ಷ, ಶಿವಮೊಗ್ಗದಲ್ಲಿ 14.91 ಲಕ್ಷ, ಉಡುಪಿಯಲ್ಲಿ 10.63 ಲಕ್ಷ, ಚಿಕ್ಕಮಗಳೂರಿನಲ್ಲಿ 9.43 ಲಕ್ಷ, ತುಮಕೂರಿನಲ್ಲಿ 22.77 ಲಕ್ಷ ನಮೂನೆಗಳನ್ನು ವಿತರಿಸಲಾಗಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ 40.21 ಲಕ್ಷ ಮತದಾರರ ಪೈಕಿ 30.40 ಲಕ್ಷ ನಮೂನೆಗಳು ವಿತರಣೆಗೊಂಡಿದ್ದು, 3.68 ಲಕ್ಷ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಬಿಬಿಎಂಪಿ ಉತ್ತರ, ಕೇಂದ್ರ ಹಾಗೂ ದಕ್ಷಿಣ ವಲಯಗಳಲ್ಲಿ ವಿತರಣೆ ಮತ್ತು ಡಿಜಿಟಲೀಕರಣ ಕಾರ್ಯ ಇತರ ಜಿಲ್ಲೆಗಳಿಗಿಂತ ನಿಧಾನಗತಿಯಲ್ಲಿ ಸಾಗುತ್ತಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 9.10 ಲಕ್ಷ, ರಾಮನಗರದಲ್ಲಿ 9.35 ಲಕ್ಷ, ದಕ್ಷಿಣ ಕನ್ನಡದಲ್ಲಿ 17.90 ಲಕ್ಷ ನಮೂನೆಗಳು ವಿತರಣೆಗೊಂಡಿವೆ.

ಕೊಡಗು ಜಿಲ್ಲೆಯಲ್ಲಿ 4.68 ಲಕ್ಷ ಮತದಾರರಿಗೆ ಶೇ.100ರಷ್ಟು ಎಣಿಕೆ ನಮೂನೆ ವಿತರಣೆ ಪೂರ್ಣಗೊಂಡಿದ್ದು, 1.81 ಲಕ್ಷ ನಮೂನೆಗಳು ಡಿಜಿಟಲೀಕರಣಗೊಂಡಿವೆ.

ಮೈಸೂರು ಜಿಲ್ಲೆಯಲ್ಲಿ 27.99 ಲಕ್ಷ ಮತದಾರರ ಪೈಕಿ 27.89 ಲಕ್ಷ ನಮೂನೆಗಳು ವಿತರಣೆಗೊಂಡಿದ್ದು, 7.12 ಲಕ್ಷ ನಮೂನೆಗಳು ಡಿಜಿಟಲೀಕರಣಗೊಂಡಿವೆ.

ಚಾಮರಾಜನಗರ ಜಿಲ್ಲೆ ರಾಜ್ಯದಲ್ಲೇ ಉತ್ತಮ ಪ್ರಗತಿ ದಾಖಲಿಸಿರುವ ಜಿಲ್ಲೆಗಳಲ್ಲಿ ಒಂದಾಗಿದ್ದು, 8.80 ಲಕ್ಷ ಮತದಾರರಿಗೆ ಶೇ.100ರಷ್ಟು ಎಣಿಕೆ ನಮೂನೆ ವಿತರಣೆ ಪೂರ್ಣಗೊಂಡಿದೆ. ಜಿಲ್ಲೆಯ 4.97 ಲಕ್ಷ ನಮೂನೆಗಳು ಈಗಾಗಲೇ ಡಿಜಿಟಲೀಕರಣಗೊಂಡಿದ್ದು, ಮುಂದಿನ ಹಂತದ ಕಾರ್ಯಗಳು ನಿಗದಿತ ವೇಳಾಪಟ್ಟಿಯಂತೆ ಸಾಗುತ್ತಿವೆ.

ಚುನಾವಣಾ ಆಯೋಗದ ಪರಿಷ್ಕೃತ ವೇಳಾಪಟ್ಟಿಯಂತೆ ಆಗಸ್ಟ್ 8ರವರೆಗೆ ಮನೆ-ಮನೆ ಸಮೀಕ್ಷೆ, ಆಗಸ್ಟ್ 17ರಂದು ಕರಡು ಮತದಾರರ ಪಟ್ಟಿ ಪ್ರಕಟಣೆ, ಸೆಪ್ಟೆಂಬರ್ 16ರವರೆಗೆ ದಾವೆ-ಆಕ್ಷೇಪಣೆ ಸಲ್ಲಿಕೆ ಹಾಗೂ ಅಕ್ಟೋಬರ್ 19ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಣೆ ನಡೆಯಲಿದೆ.

ಪ್ರಗತಿ ಸಾಧನೆ ಹಿಂದಿನ ಸಂಶಯಗಳೇನು?

ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಶೇ.100ರಷ್ಟು ಎನ್ಯುಮರೇಷನ್ ಫಾರ್ಮ್ ವಿತರಣೆ ಹಾಗೂ ಸಂಗ್ರಹಣೆ ಪೂರ್ಣಗೊಂಡಿದೆ ಎಂಬ ಅಧಿಕೃತ ಹೇಳಿಕೆ ಹೊರಬಿದ್ದಿದ್ದರೂ, ನೆಲಮಟ್ಟದಲ್ಲಿ ಕಂಡುಬರುವ ವಾಸ್ತವ ಚಿತ್ರ ಮಾತ್ರ ಇದಕ್ಕೆ ವಿರುದ್ಧವಾಗಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಜಿಲ್ಲೆಯ ಹಲವು ಗ್ರಾಮಗಳು, ಆದಿವಾಸಿ ಹಾಡಿಗಳಿಗೆ ಹಾಗೂ ಲೈನ್ ಮನೆಗಳಿಗೆ ಎನ್ಯುಮರೇಷನ್ ಫಾರ್ಮ್ ಇನ್ನೂ ತಲುಪಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಶೇ.100ರಷ್ಟು ಸಾಧನೆ ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ಸಹಜವಾಗಿಯೇ ಮೂಡಿದೆ. ಬಿಎಲ್ಓಗಳು ಫಾರ್ಮ್ ವಿತರಿಸಿದ್ದಾರೆ ಎನ್ನುವುದಾದರೆ ಅವು ಯಾರಿಗೆ ತಲುಪಿವೆ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ.

ನಗರ ಪ್ರದೇಶಗಳಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ ಎನ್ನಲಾಗಿದೆ. ಉದ್ಯೋಗ ನಿಮಿತ್ತ ಹೊರ ಜಿಲ್ಲೆ ಅಥವಾ ರಾಜ್ಯಗಳಲ್ಲಿ ವಾಸಿಸುವವರು, ಬಾಡಿಗೆ ಮನೆಗಳಲ್ಲಿ ಇರುವ ಕುಟುಂಬಗಳು, ಹಕ್ಕಿಪಿಕ್ಕಿ ಹಾಗೂ ಅಲೆಮಾರಿ ಸಮುದಾಯಗಳಂತಹ ಹಲವು ವರ್ಗಗಳ ಜನರನ್ನು ಸಂಪರ್ಕಿಸುವ ಪ್ರಯತ್ನ ಸಮರ್ಪಕವಾಗಿ ನಡೆದಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಇವರಲ್ಲಿ ಅನೇಕರು ಇನ್ನೂ ಎಣಿಕೆ ಪ್ರಕ್ರಿಯೆಯಿಂದ ಹೊರಗೇ ಉಳಿದಿದ್ದಾರೆ ಎನ್ನಲಾಗುತ್ತಿದೆ.

ಸಾಕಷ್ಟು ಜನರಿಗೆ ಓದಲು ಮತ್ತು ಬರೆಯಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಅವರ ಪರವಾಗಿ ಎನ್ಯುಮರೇಷನ್ ಫಾರ್ಮ್‌ಗಳನ್ನು ಹೇಗೆ ಭರ್ತಿ ಮಾಡಲಾಗಿದೆ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಕೆಲವರ ಬಳಿ ಅಗತ್ಯ ದಾಖಲೆಗಳ ಕೊರತೆಯಿದ್ದರೆ, ಇನ್ನೂ ಕೆಲವರ ಫಾರ್ಮ್‌ಗಳಲ್ಲಿ ವೈಯಕ್ತಿಕ ಮಾಹಿತಿಗಳನ್ನು ತಪ್ಪಾಗಿ ದಾಖಲಿಸಿರುವ ಪ್ರಕರಣಗಳೂ ಬೆಳಕಿಗೆ ಬಂದಿವೆ.

ಕೆಲವು ಪ್ರದೇಶಗಳಲ್ಲಿ ಖಾಲಿ ಎನ್ಯುಮರೇಷನ್ ಫಾರ್ಮ್‌ಗಳನ್ನು ಮಾತ್ರ ನಾಗರಿಕರಿಗೆ ನೀಡಿ, ಮತ್ತೊಂದು ಫಾರ್ಮ್ ಅನ್ನು ಬಿಎಲ್ಓಗಳೇ ಭರ್ತಿ ಮಾಡಿಕೊಂಡು ಹೋಗಿದ್ದಾರೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಇಂತಹ ನಿದರ್ಶನಗಳು ಹಲವೆಡೆ ಕಂಡುಬಂದಿವೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

ಇದರ ಜೊತೆಗೆ ಹಲವು ವರ್ಷಗಳಿಂದ ಮತದಾನ ಮಾಡುತ್ತಿರುವ ಕುಟುಂಬಗಳ ಹೆಸರೇ 2002ರ ಮತದಾರರ ಪಟ್ಟಿಯಲ್ಲಿ ಕಾಣಿಸುತ್ತಿಲ್ಲ ಎಂಬ ಅಸಮಾಧಾನವೂ ವ್ಯಕ್ತವಾಗಿದೆ. ಕೆಲವರಿಗೆ ಭಾಗ ಸಂಖ್ಯೆ (Part Number) ದೊರೆಯುತ್ತಿಲ್ಲ. ಇನ್ನೂ ಕೆಲವರಿಗೆ ಕ್ರಮ ಸಂಖ್ಯೆ (Serial Number) ಪತ್ತೆಯಾಗುತ್ತಿಲ್ಲ. ಇಂತಹ ತಾಂತ್ರಿಕ ಹಾಗೂ ಆಡಳಿತಾತ್ಮಕ ಗೊಂದಲಗಳಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಒಂದೆಡೆ ಫಾರ್ಮ್ ತಲುಪದಿರುವುದು, ಮತ್ತೊಂದೆಡೆ ತಪ್ಪು ಮಾಹಿತಿ ದಾಖಲಾತಿ, ದಾಖಲೆಗಳ ಕೊರತೆ, ಮತದಾರರ ಪಟ್ಟಿಯಲ್ಲಿ ಹೆಸರು ಮತ್ತು ಭಾಗ ಸಂಖ್ಯೆ ಪತ್ತೆಯಾಗದಿರುವಂತಹ ನೂರಾರು ಸಮಸ್ಯೆಗಳು ಎದುರಾಗುತ್ತಿರುವಾಗ, ಜಿಲ್ಲೆಯಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಲಾಗಿದೆ ಎಂಬ ಅಧಿಕೃತ ಹೇಳಿಕೆ ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಈ ಎಲ್ಲ ಆರೋಪಗಳ ಸತ್ಯಾಸತ್ಯತೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟಪಡಿಸುವ ಅಗತ್ಯವಿದೆ. ನೆಲಮಟ್ಟದ ವಾಸ್ತವ ಸ್ಥಿತಿ ಮತ್ತು ಅಧಿಕೃತ ಅಂಕಿ-ಅಂಶಗಳ ನಡುವಿನ ವ್ಯತ್ಯಾಸದ ಕುರಿತು ಸಮಗ್ರ ಪರಿಶೀಲನೆಯೂ ಅಗತ್ಯವಾಗಿದೆ.

ಮುಂದಿನ ಸಂಚಿಕೆಗಳಲ್ಲಿ ಎನ್ಯುಮರೇಷನ್ ಫಾರ್ಮ್ ತಲುಪದ ಪ್ರದೇಶಗಳು, ಫಾರ್ಮ್ ಭರ್ತಿ ಪ್ರಕ್ರಿಯೆಯಲ್ಲಿನ ಗೊಂದಲಗಳು, ಸಾರ್ವಜನಿಕರ ಅನುಭವಗಳು ಹಾಗೂ ದಾಖಲೆಗಳ ಆಧಾರದ ವಿಶೇಷ ವರದಿಗಳನ್ನು ಈದಿನ.ಕಾಮ್ ಪ್ರಕಟಿಸಲಿದೆ.

ಈ ವಿಶೇಷ ಸುದ್ದಿ ಓದಿದ್ದೀರಾ?ರಾಜ್ಯದ ಟಾಪ್-5 ಗುರಿಯತ್ತ ಚಾಮರಾಜನಗರ: ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಣ ಇಲಾಖೆಯ ಮಹತ್ವದ ಯೋಜನೆ

WhatsApp Image 2025 02 05 at 18.09.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ...

‘ಸ್ಟಿಂಗ್ ಆಪರೇಷನ್’ ವಿವಾದ- ನನ್ನಿಂದಲೇ ತನಿಖೆ ಆರಂಭಿಸಿ: ಎಚ್.ಡಿ. ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ವೀಡಿಯೊ ಬಿಡುಗಡೆ ಮಾಡಲು ಯತ್ನಿಸಲಾಗಿದೆ...

ಬಳ್ಳಾರಿ | ವರದಕ್ಷಿಣೆ ಕಿರುಕುಳಕ್ಕೆ ಮೂವರು ಬಲಿ

ಬಳ್ಳಾರಿಯಲ್ಲಿ ವರದಕ್ಷಿಣೆ ಕಿರುಕುಳ ತಾಳಲಾರದೆ ತಾಯಿಯೊಬ್ಬರು ತನ್ನ ಇಬ್ಬರು ಮಕ್ಕಳನ್ನು ತುಂಗಭದ್ರಾ...

ಶೃಂಗೇರಿ ಮತ ಎಣಿಕೆ ವಿಡಿಯೋ ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ

2023ರ ಚುನಾವಣೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಯ ವೀಡಿಯೋ...