ಬೆಂಗಳೂರಿನಲ್ಲಿ ನಡೆದ ‘ವಲ್ಡ್ ಫಿಟ್ನೆಸ್ ಫೆಡರೇಷನ್ ರಾಯಲ್ ಕ್ಲಾಸಿಕ್ -2023’ ದೇಹದಾಡ್ಯ ಸ್ಪರ್ಧೆಯ 55 ಕೆ.ಜಿ ವಿಭಾಗದಲ್ಲಿ ಮಡಿಕೇರಿಯ ಗಣೇಶ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕೊಡಗು ಜಿಲ್ಲೆಗೆ ಹಿರಿಮೆ ತಂದಿದ್ದಾರೆ.
ಮಡಿಕೇರಿಯ ರೆಸ್ಟೋರೆಂಟ್‌ವೊಂದರಲ್ಲಿ ಗಣೇಶ್ ಸಿಬ್ಬಂದಿಯಾಗಿದ್ದಾರೆ. ಕೆಲಸದ ಜೊತೆಗೆ ಬಿಡುವಿನ ಸಮಯದಲ್ಲಿ ದೇಹದಾಡ್ಯತೆ ಅಭ್ಯಾಸ ಮಾಡುತ್ತಿದ್ದ ಅವರು, ಇದೀಗ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಗಣೇಶ್ ಅವರು ಚೆನ್ನೈ ನಡೆದಿದ್ದ ರಾಷ್ಟ್ರ ಮಟ್ಟದ ದೇಹದಾಡ್ಯ ಸ್ಪರ್ಧೆ ‘ಐಕಾನ್ ಇಂಡಿಯಾ’ ಸ್ಪರ್ಧೆಯಲ್ಲಿ ನ್ಯಾಚುರಲ್ ದೇಹದಾಡ್ಯ ಸ್ಪರ್ಧೆಯ ಮುಕ್ತ ವಿಭಾಗದಲ್ಲಿ ಒಂದು ಚಿನ್ನ, ಒಂದು ಕಂಚಿನ ಪದಕವನ್ನೂ ಗಳಿಸಿದ್ದಾರೆ. ಅಲ್ಲದೆ, ಮಿಸ್ಟರ್ ಕನಾ೯ಟಕ ಬಿರುದಿಗೂ ಪಾತ್ರರಾಗಿದ್ದಾರೆ.