ರಾಜ್ಯ ಸರ್ಕಾರದ ಡಾ.ಬಿ.ಆರ್ ಅಂಬೇಡ್ಕರ್ ಪ್ರಶಸ್ತಿಗೆ ಭಾಜನರಾಗಿರುವ ಜಿಲ್ಲೆಯ ಹಿರಿಯ ದಲಿತ ಮುಖಂಡ ಹಾಗೂ ಪತ್ರಕರ್ತ ಸಿ.ಎಂ.ಮುನಿಯಪ್ಪ ಅವರಿಗೆ ಹುತ್ತೂರು ಹೋಬಳಿಯ ಸಮಾಜ ಸೇವಕ ಕಲ್ಲಂಡೂರು ರಾಜು ಶ್ರೀನಿವಾಸಪ್ಪ ನೇತೃತ್ವದಲ್ಲಿ ಮುಖಂಡರು ಸನ್ಮಾನಿಸಿದರು.
ನಗರದ ಸಿ.ಎಂ ಮುನಿಯಪ್ಪ ಅವರ ನಿವಾಸಕ್ಕೆ ಸೋಮವಾರ ತೆರಳಿದ ಮುಖಂಡರು ಬುದ್ದನ ಪೋಟೋ ನೀಡಿ ಅಭಿನಂದನೆ ಸಲ್ಲಿಸಿದರು ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಹೋರಾಟಗಾರರು ನಡೆಯುವಂತಾಗಲಿ ಈ ಪ್ರಶಸ್ತಿಯು ಜಿಲ್ಲೆಗೆ ಹಾಗೂ ದಲಿತ ಹೋರಾಟಕ್ಕೆ ಸಂದ ಗೌರವ ಎಂದು ಶ್ಲಾಘಿಸಿದರು.
ಇದನ್ನು ಓದಿದ್ದೀರಾ..? ಕೋಲಾರ | ನಸೀರ್ ಅಹಮದ್ ವಜಾ ಮಾಡಿದ್ದಕ್ಕೆ ಉಲಮಾಗಳ ಆಕ್ರೋಶ –
ಈ ಸಂದರ್ಭದಲ್ಲಿ ಹರಟಿ ಗ್ರಾಪಂ ಮಾಜಿ ಅಧ್ಯಕ್ಷರಾದ ಹರಳಕುಂಟೆ ವೆಂಕಟೇಶಪ್ಪ, ಮಲ್ಲಂಡಹಳ್ಳಿ ಬಾಬು, ಯುವ ಮುಖಂಡರಾದ ನಡುಪಳ್ಳಿ ಸಂತೋಷ್ ರೆಡ್ಡಿ ಯಾರಂಘಟ್ಟ ಮುನಿರಾಜು, ಬೆಟ್ಟಹೊಸಪುರ ರವಿ ಇದ್ದರು,





