ಕೋಲಾರ | ಕಳಪೆ ಪಶು ಆಹಾರ ಪೂರೈಕೆ ಆರೋಪ: ಖಾಸಗಿ ಕಂಪನಿ ಪರವಾನಗಿ ರದ್ದತಿಗೆ ನಳಿನಿಗೌಡ ಆಗ್ರಹ

Date:

ಕಳಪೆ ಗುಣಮಟ್ಟದ ಪಶು ಆಹಾರ ಪೂರೈಸಿರುವ ಆರೋಪದ ಹಿನ್ನೆಲೆಯಲ್ಲಿ ಎಸ್.ಎಸ್. ಸೂಪರ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಪರವಾನಗಿ ರದ್ದುಪಡಿಸಬೇಕು. ಪಶು ಆಹಾರದ ಗುಣಮಟ್ಟ ಪರಿಶೀಲಿಸುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಕರ್ತವ್ಯ ಲೋಪ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲದೆ, ರೈತರಿಗೆ ಗುಣಮಟ್ಟದ ಪಶು ಆಹಾರವನ್ನು ಉಚಿತವಾಗಿ ವಿತರಿಸಬೇಕು ಎಂದು ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ. ನಳಿನಿಗೌಡ ಕೋಮಲ್ ಅಧ್ಯಕ್ಷ ಕೆ.ವೈ. ನಂಜೇಗೌಡ ಅವರನ್ನು ಒತ್ತಾಯಿಸಿದ್ದಾರೆ.

- Advertisement -

ಈ ಕುರಿತು ಮಾತನಾಡಿದ ಅವರು ಬರಗಾಲ, ಕೃಷಿ ಉತ್ಪನ್ನಗಳ ಬೆಲೆ ಕುಸಿತ, ನರೇಗಾ ಯೋಜನೆಯಡಿ ಸಮರ್ಪಕ ಕೆಲಸ ದೊರೆಯದಿರುವುದು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಮೀಣ ಪ್ರದೇಶದ ಮಹಿಳಾ ರೈತರು ಮತ್ತು ಕೂಲಿ ಕಾರ್ಮಿಕರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಇಂತಹ ಪರಿಸ್ಥಿತಿಯಲ್ಲಿ ಹೈನುಗಾರಿಕೆಯೇ ಅನೇಕ ಬಡ ಕುಟುಂಬಗಳಿಗೆ ಸ್ವಾಭಿಮಾನದಿಂದ ಬದುಕಲು ಆಧಾರವಾಗಿದೆ. ಆದರೆ, ಹಾಲು ಒಕ್ಕೂಟದ ಮೂಲಕ ಡೈರಿಗಳಿಗೆ ಪೂರೈಸುವ ಪಶು ಆಹಾರವೇ ಕಳಪೆಯಾಗಿದ್ದರೆ ರೈತರ ಬದುಕಿನ ಗತಿಯೇನು ಎಂದು ಪ್ರಶ್ನಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿವಮೊಗ್ಗ | ಜಿ.ಪಂ., ತಾ.ಪಂ. ಚುನಾವಣೆ: ಗ್ರಾಮೀಣ ರಾಜಕೀಯದಲ್ಲಿ...

ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜಿಲ್ಲಾ ಪಂಚಾಯತಿ (ಜಿ.ಪಂ.) ಹಾಗೂ ತಾಲೂಕು ಪಂಚಾಯತಿ (ತಾ.ಪಂ.) ಚುನಾವಣೆಗಳ ಕುರಿತು ರಾಜಕೀಯ ಚರ್ಚೆಗಳು ಮತ್ತು ನಿರೀಕ್ಷೆಗಳು ಹೆಚ್ಚುತ್ತಿವೆ. ದೀರ್ಘಕಾಲದಿಂದ ಚುನಾಯಿತ ಪ್ರತಿನಿಧಿಗಳಿಲ್ಲದೆ ಆಡಳಿತ ನಡೆಯುತ್ತಿರುವ ಹಿನ್ನೆಲೆಯಲ್ಲಿ,...

ಇಂಟರ್ನೆಟ್‌ನಿಂದ AIವರೆಗೆ.. ದಶಕಗಳ ಹಿಂದೆಯೇ ಜಗತ್ತಿನ ಭವಿಷ್ಯ ಕಂಡಿದ್ದ...

ತಂತ್ರಜ್ಞಾನ ನಮ್ಮ ಕೈಸೇರುವ, ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗುವ ದಶಕಗಳ ಹಿಂದೆಯೇ, ಅಂದಿನ ಕಾಲದ ಕಲಾವಿದರು ತಮ್ಮ ಗೀತೆಗಳ ಸಾಲುಗಳ ಮೂಲಕ ಮುಂದಿನ ಜಗತ್ತು ಹೀಗೇ ಇದ್ದೀತೆಂದು ಖಚಿತವಾಗಿ ಹೇಳಿದ್ದರು. ಮಾನವಕುಲವು ಮುಂದೆ...

ಕೊಪ್ಪಳ | ದಸರಾ ಪುರಾಣ ಪ್ರವಚನಕ್ಕೆ ಮುಸ್ಲಿಂ ಕಲಾವಿದನ...

ಧರ್ಮಗಳು ಬೇರೆ ಬೇರೆಯಾದರೂ ಕಲೆ, ಸಂಸ್ಕೃತಿ ಮತ್ತು ಮಾನವೀಯತೆಯ ಮುಂದೆ ಧರ್ಮದ ಗಡಿಗಳು ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮ ಸಾಕ್ಷಿ. ಇಲ್ಲಿನ ಕಂಪ್ಲಿ ಪ್ರದೇಶದ ಬನಶಂಕರಿ ದೇವಸ್ಥಾನದಲ್ಲಿ ನಡೆಯುವ ದಸರಾ...

ಪಶು ಆಹಾರದಲ್ಲಿ ಮರಳು ಮಿಶ್ರಣ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. 50 ಕೆ.ಜಿ. ತೂಕದ ಪಶು ಆಹಾರದ ಚೀಲದಲ್ಲಿ 4ರಿಂದ 5 ಕೆ.ಜಿ.ಯಷ್ಟು ಮರಳು ಸಿಗುತ್ತಿದೆ ಎಂದು ರೈತರು ಆರೋಪಿಸುತ್ತಿದ್ದಾರೆ. ಇಂತಹ ಆಹಾರ ಸೇವಿಸಿದ ಹಸುಗಳು ಅನಾರೋಗ್ಯಕ್ಕೀಡಾಗಿ ಬೇಧಿಯಿಂದ ಸಾವನ್ನಪ್ಪುತ್ತಿವೆ ಎಂಬ ದೂರುಗಳೂ ಬಂದಿವೆ. ಮೂಕ ಪ್ರಾಣಿಗಳ ಆಹಾರದಲ್ಲಿಯೂ ಗುಣಮಟ್ಟ ಕಾಪಾಡದಿರುವುದು ಖಂಡನೀಯ. ಪಶು ಆಹಾರದ ಗುಣಮಟ್ಟ ಪರಿಶೀಲಿಸಬೇಕಾದ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆಯೇ ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

Advertisements

ಕುಟುಂಬದ ನಿರ್ವಹಣೆಗೆ ಆಧಾರವಾಗಿದ್ದ ಹಸುಗಳು ಕಣ್ಣೆದುರೇ ಸಾವನ್ನಪ್ಪುತ್ತಿದ್ದರೂ ಏನೂ ಮಾಡಲಾಗದ ಸ್ಥಿತಿಯಲ್ಲಿ ರೈತರು ಕಣ್ಣೀರು ಹಾಕುತ್ತಿದ್ದಾರೆ. ಆದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದ ಹಾಲು ಒಕ್ಕೂಟದ ಅಧ್ಯಕ್ಷರು ಮತ್ತು ವ್ಯವಸ್ಥಾಪಕರ ನಿರ್ಲಕ್ಷ್ಯ ಖಂಡನೀಯ. ರೈತರ ಸಮಸ್ಯೆಗೆ ತಕ್ಷಣ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಒಕ್ಕೂಟದ ವಿರುದ್ಧ ಸಗಣಿ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತಿ ಹಸುವಿಗೆ ₹2 ಲಕ್ಷ ಪರಿಹಾರಕ್ಕೆ ಒತ್ತಾಯ
ಕಳಪೆ ಪಶು ಆಹಾರದಿಂದ ಹಸು ಕಳೆದುಕೊಂಡಿರುವ ರೈತ ಮಹಿಳೆ ಅನುಸೂಯಮ್ಮ ಮಾತನಾಡಿ, ಬರಗಾಲದ ನಡುವೆಯೂ ದುಬಾರಿ ಬೆಲೆ ತೆತ್ತು ಹಸಿರು ಮೇವು ಖರೀದಿಸಿ ಹಸುಗಳನ್ನು ಸಾಕುತ್ತಿದ್ದೇವೆ. ಹಸುಗಳಿಗೆ ಪಶು ಆಹಾರ ನೀಡಿದರೆ ಹಾಲಿನ ಪ್ರಮಾಣ ಮತ್ತು ಗುಣಮಟ್ಟ ಹೆಚ್ಚುತ್ತದೆ ಎಂದು ಹೇಳಿ ರೈತರನ್ನು ಪಶು ಆಹಾರ ಖರೀದಿಸಲು ಪ್ರೇರೇಪಿಸಲಾಗುತ್ತಿದೆ. ಆದರೆ, ಅದೇ ಆಹಾರ ಕಳಪೆಯಾಗಿದ್ದರೆ ಬಡ ರೈತರ ಬದುಕು ಬೀದಿಗೆ ಬೀಳುತ್ತದೆ ಎಂದು ಅಳಲು ತೋಡಿಕೊಂಡರು.

ಕಳಪೆ ಪಶು ಆಹಾರ ಪೂರೈಸಿರುವ ಕಂಪನಿಯ ಪರವಾನಗಿ ರದ್ದುಪಡಿಸಬೇಕು. ಗುಣಮಟ್ಟ ಪರಿಶೀಲನೆಯಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಅವರನ್ನು ಸೇವೆಯಿಂದ ವಜಾಗೊಳಿಸಬೇಕು. ಕಳಪೆ ಪಶು ಆಹಾರದಿಂದ ಹಸುಗಳನ್ನು ಕಳೆದುಕೊಂಡ ರೈತರಿಗೆ ಪ್ರತಿ ಹಸುವಿಗೆ ₹2 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.


ಇದನ್ನು ಓದಿದ್ದೀರಾ..?ಕೋಲಾರ | ಟಾಟಾ ಎಲೆಕ್ಟ್ರಾನಿಕ್ಸ್‌ನಲ್ಲಿ ಮಹಿಳಾ ಕಾರ್ಮಿಕರ ಸಾವು: ಸಮಗ್ರ ತನಿಖೆಗೆ ಸಿಐಟಿಯು ಒತ್ತಾಯ

ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ರೈತ ಆಂಜಿನಪ್ಪ, ಲಕ್ಷ್ಮಮ್ಮ, ಚೌಡಮ್ಮ, ಶೋಭಾ, ಗಿಡ್ಡಮ್ಮ, ರತ್ನಮ್ಮ, ರಾಧಮ್ಮ, ಮಂಜುಳಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

Previous article

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಶಹಾಪುರದ ಸಾರಿ ಪುತ್ರ ಬುದ್ಧ ವಿಹಾರದಲ್ಲಿ ವಿಜಯದಶಮಿ ಆಚರಣೆ

ಶಹಾಪುರ ತಾಲೂಕಿನ ಸಾರಿ ಪುತ್ರ ಬುದ್ಧ ವಿಹಾರದಲ್ಲಿ ವಿಜಯದಶಮಿ ಅಂಗವಾಗಿ ಪಂಚಶೀಲ...

ಗದಗ | ಅಲೆಮಾರಿ ಕುಟುಂಬಗಳ ಗುಡಿಸಲು ತೆರವುಗೊಳಿಸಲು ಮುಂದಾದ ಪುರಸಭೆ; ಖಂಡಿಸಿ ಜಿಲ್ಲಾಧಿಕಾರಿಗೆ ಮನವಿ

ಜಿಲ್ಲೆಯ ಲಕ್ಷ್ಮೀಶ್ವರ ನಗರದ ಎಂ.ಎ. ಕಾಲೇಜಿನ ಹಿಂಭಾಗದಲ್ಲಿರುವ ಗಡ್ಡದೇವರಮಠ ನಗರದಲ್ಲಿ ವಾಸವಿರುವ...

ಕೋಲಾರ | ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿ ಅವ್ಯವಸ್ಥೆ ಕುರಿತು ತನಿಖೆಗೆ ವಿಶೇಷ ತಂಡ ರಚಿಸಲು ಆಗ್ರಹ

ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿಯ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಕಾರ್ಮಿಕೆ ಶ್ರೀಮಂತಿನಿ ಮೃತಪಟ್ಟಿದ್ದಾರೆ...

ಚಿಂತಾಮಣಿ | ಸಿದ್ದರಾಮಯ್ಯ ವೈಯಕ್ತಿಕ ಚಾರಿತ್ರ್ಯವಧೆ ಮಾಡುವ ಸಣ್ಣತನ ನಮಗಿಲ್ಲ: ಪ್ರತಾಪ್ ಸಿಂಹ

ನಗರದ ಪಾಲಿಟೆಕ್ನಿಕ್ ಮೈದಾನದ ಮಾತಾ ಭಾರತಿ ಮಂಗಳ ಮಂಟಪದಲ್ಲಿ ಆಯೋಜಿಸಿದ್ದ ದಸರಾ...