ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಡೆಯಲಿರುವ ಹಿನ್ನೆಲೆಯಲ್ಲಿ ಕೊಪ್ಪಳದ ಭಾಗ್ಯನಗರದ ಮುಸ್ಲಿಂ ಸಮುದಾಯದವರು ಭಾವೈಕ್ಯ ಮೆರೆದಿದ್ದಾರೆ.
ನಗರದ ರಾಮಮಂದಿರ ಹಾಗೂ ಆಂಜನೇಯ ದೇವಾಲಯದಲ್ಲಿ ಮುಸ್ಲಿಂ ಸಮುದಾಯದ ಪಂಚಕಮಿಟಿ ಸದಸ್ಯರು ಸೋಮವಾರ ಪೂಜೆ ಸಲ್ಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಹಳೆಯ ವೈಷಮ್ಯ ಹಿನ್ನೆಲೆ; ಗುಂಡಿನ ದಾಳಿ ಗಂಭೀರ ಗಾಯ
ಪಂಚಕಮಿಟಿ ಸದಸ್ಯರು ಒಂದೂವರೆ ಸಾವಿರ ಹಿಂದೂ ಭಕ್ತಾದಿಗಳಿಗೆ ಅನ್ನ, ಸಾರು, ಬದನೇಕಾಯಿ ಪಲ್ಯ, ಗೋಧಿ ಹುಗ್ಗಿ ಊಟದ ವ್ಯವಸ್ಥೆ ಮಾಡಿದ್ದಾರೆ. ದೇವಸ್ಥಾನಗಳಲ್ಲಿ ಹಿಂದೂ ಹಾಗೂ ಮುಸ್ಲಿಂ ಭಕ್ತರು ಜೊತೆಯಾಗಿ ಪೂಜೆ ಸಲ್ಲಿಸಿದರು. ಮುಸ್ಲಿಮರು ಹಿಂದೂ ಜನರಿಗೆ ಶುಭಾಶಯ ಕೋರಿದರು.