ಗುಜರಾತ್ | ಶೋಭಾಯಾತ್ರೆ ಮೆರವಣಿಗೆಯಲ್ಲಿ ಎರಡು ಬಣಗಳ ನಡುವೆ ಸಂಘರ್ಷ

Date:

ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮ ಮಂದಿರ ಉದ್ಘಾಟನಾ ಸಮಾರಂಭದ ಅಂಗವಾಗಿ ನಡೆಯುತ್ತಿದ್ದ ಯಾತ್ರೆಯಲ್ಲಿ ಎರಡು ಬಣಗಳ ನಡುವೆ ಸಂಘರ್ಷ ನಡೆದಿರುವ ಘಟನೆ ಉತ್ತರ ಗುಜರಾತ್‌ ಮೆಸನಾ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

ಕೇರಾಲುವಿನ ಬೆಲಿಮ್‌ವಾಸ್‌ನಲ್ಲಿನ ಹತಾದಿಯಾ ಪ್ರದೇಶದಲ್ಲಿ ಡಿ.21 ರಂದು ಮೆರವಣಿಗೆ ಸಾಗುತ್ತಿದ್ದ ಸಂದರ್ಭದಲ್ಲಿ ಕಲ್ಲುಗಳನ್ನು ಎಸೆಯಲಾಗಿದೆ. ಮೆರವಣಿಗೆ ಸಂದರ್ಭದಲ್ಲಿ ಪಟಾಕಿ ಸಿಡಿತ ಹಾಗೂ ಅತಿಯಾದ ಶಬ್ದವಿದ್ದ ಸಂಗೀತ ಆಯೋಜಿಸಿದ್ದ ಕಾರಣ ಇನ್ನೊಂದು ಬಣ ಕಲ್ಲು ಎಸೆಯಲು ಕಾರಣ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಗ್ಗಿ ಬದುಕಿದವರು ಎದ್ದು ನಿಲ್ಲುವುದು ಯಾವಾಗ?

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಘಟನೆಯಿಂದ ಎರಡು ಬಣಗಳ ನಡುವೆ ಸಂಘರ್ಷ ಉಂಟಾಗಿದೆ. ಗಲಾಟೆ ಉಲ್ಬಣಿಸಿದಂತೆ ಎರಡು ಕಡೆಯ ಗುಂಪನ್ನು ಚದುರಿಸಲು ಪೊಲೀಸರು ಮೂರು ಸುತ್ತು ಅಶ್ರುವಾಯು ಸಿಡಿಸಿದರು. ಮನೆಯ ಛಾವಣಿಯಿಂದ ಕಲ್ಲು ಎಸೆಯುತ್ತಿರುವುದು ಹಾಗೂ ಮೆರವಣಿಗೆಯಲ್ಲಿ ಒಂದು ಗುಂಪು ಕತ್ತಿಗಳನ್ನು ತೋರಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

ಪೊಲೀಸ್ ಬೆಂಗಾವಲಿನೊಂದಿಗೆ ಮೆರವಣಿಗೆ ಸಾಗಿದ ಕಾರಣ ಪರಿಸ್ಥಿತಿ ನಿಯಂತ್ರಣದಲ್ಲಿದೆ. ನಾವು ಅಪರಾಧದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ” ಎಂದು ಸ್ಥಳಕ್ಕೆ ಧಾವಿಸಿದ ಗುಜರಾತ್‌ ಗಾಂಧಿ ನಗರ ವಿಭಾಗದ ಡಿಐಜಿ ವೀರೇಂದ್ರ ಯಾದವ್ ತಿಳಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೇಶದ ಶೇ.90 ರಷ್ಟಿರುವ ಬಡಜನತೆಗೆ ನ್ಯಾಯ ಒದಗಿಸುವುದೇ ನಮ್ಮ ಯೋಜನೆ: ರಾಹುಲ್ ಗಾಂಧಿ

ಬಡತನದ ಬೇಗೆಯಲ್ಲಿ ನಲುಗುತ್ತಿರುವ ದೇಶದ ಶೇ.90 ರಷ್ಟು ಬಡವರಿಗೆ ನ್ಯಾಯ ಒದಗಿಸುವ...

ಮೋದಿ ದ್ವೇಷ ಭಾಷಣ | ಪ್ರಧಾನಿಗೆ ಸಲಹೆ ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

ಕಳೆದ ಏಪ್ರಿಲ್ 21ರಂದು ರಾಜಸ್ಥಾನದಲ್ಲಿ ಬಿಜೆಪಿ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದಲ್ಲಿ ಮುಸಲ್ಮಾನರ...

ಪ್ರಧಾನಿ ಧರ್ಮ ರಾಜಕಾರಣ ಮಾಡುವ ಬಗ್ಗೆ ಎಂದಿಗೂ ಯೋಚಿಸಿಲ್ಲ ಎಂದ ರಾಜನಾಥ್ ಸಿಂಗ್!

ರಾಜಸ್ಥಾನದ ಬನ್ಸ್ವಾರಾದಲ್ಲಿ ಚುನಾವಣಾ ಪ್ರಚಾರ ಮಾಡುತ್ತಾ ಪ್ರಧಾನಿ ನರೇಂದ್ರ ಮೋದಿ ಅವರು...

ಲೋಕಸಭೆ ಚುನಾವಣೆ| ಮಣಿಪುರದಲ್ಲಿ 3 ಬಾರಿ ಸ್ಫೋಟ; ಸೇತುವೆಗೆ ಹಾನಿ

ಮಣಿಪುರದ ಕೆಲವು ತಿಂಗಳುಗಳ ಕಾಲ ಕೊಂಚ ಕಡಿಮೆಯಾಗಿದ್ದ ಹಿಂಸಾಚಾರವು ಲೋಕಸಭೆ ಚುನಾವಣೆ...