ಉಡುಪಿ | ಮಲ್ಪೆ ಮೀನುಗಾರಿಕೆ ಬಂದರು ಆಧುನೀಕರಣ, ಜಿಲ್ಲೆಯ ಆರ್ಥಿಕ ಪುನರುಜ್ಜೀವನಕ್ಕೆ ಹೊಸ ರೂಪ

Date:

ಕರ್ನಾಟಕದ ಕರಾವಳಿ ಪ್ರದೇಶವು ಒಟ್ಟು 328.54 ಕಿಲೋಮೀಟರ್‌ ವಿಸ್ತಾರ ಹೊಂದಿದ್ದು, ಅದರಲ್ಲಿ ಉಡುಪಿ ಜಿಲ್ಲೆ ಮಾತ್ರವೇ 98 ಕಿಲೋಮೀಟರ್‌ ಕರಾವಳಿ ತೀರವನ್ನು ವ್ಯಾಪಿಸಿಕೊಂಡಿದೆ. ಈ ಕರಾವಳಿ ಪ್ರದೇಶ ರಾಜ್ಯದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಅದರ ಹೃದಯವೆಂದರೆ ಮಲ್ಪೆ ಮೀನುಗಾರಿಕೆ ಬಂದರು.

- Advertisement -
WhatsApp Image 2025 10 08 at 8.38.32 AM 2 1

ಉಡುಪಿ ತಾಲ್ಲೂಕಿನ ಮಲ್ಪೆಯಲ್ಲಿ, ಉದ್ಯಾವರ ನದಿಯಿಂದ ರೂಪುಗೊಂಡ ಅರಬ್ಬೀ ಸಮುದ್ರದ ತೀರದಲ್ಲಿರುವ ಮಲ್ಪೆ ಬಂದರು, ಉಡುಪಿಯಿಂದ ಕೇವಲ 5 ಕಿಲೋಮೀಟರ್‌ ದೂರದಲ್ಲಿದೆ. 1976ರಲ್ಲಿ ಬಂದರಿನ ನಿರ್ಮಾಣ ಕಾರ್ಯ ಪ್ರಾರಂಭವಾಗಿ 1986ರಲ್ಲಿ ಪೂರ್ಣಗೊಂಡಿತು. ಪ್ರಾರಂಭಿಕ ಹಂತದಲ್ಲಿ 279 ಮೀನುಗಾರಿಕೆ ದೋಣಿಗಳಿಗೆ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಯಿತು. 1996ರಲ್ಲಿ ಎರಡನೇ ಹಂತದ ವಿಸ್ತರಣೆ ಪೂರ್ಣಗೊಂಡ ನಂತರ ಬಂದರಿನ ವ್ಯಾಪಾರ ಚಟುವಟಿಕೆಗಳು ವೇಗ ಪಡೆದವು. ಇಂದಿಗೆ ಮಲ್ಪೆ ಬಂದರು ಉಡುಪಿ ಜಿಲ್ಲೆಯಲ್ಲಿನ ಅತಿದೊಡ್ಡ ಮೀನುಗಾರಿಕೆ ಕೇಂದ್ರವಾಗಿದ್ದು, ವರ್ಷಪೂರ್ತಿ ಮೀನುಗಾರಿಕೆ ವಹಿವಾಟು ನಡೆಯುವ ಸರ್ವ ಋತು ಬಂದರಾಗಿ ಖ್ಯಾತಿ ಗಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...
WhatsApp Image 2025 10 08 at 8.38.32 AM 1

ಮಲ್ಪೆ ಮೀನುಗಾರಿಕೆ ಬಂದರು ಇದೀಗ ಹೊಸ ರೂಪ ಪಡೆಯುತ್ತಿದೆ. ಬಂದರಿನ ಆಧುನೀಕರಣ ಕಾರ್ಯಗಳು ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ (PMMSY) ಅಡಿಯಲ್ಲಿ ಜಾರಿಯಾಗುತ್ತಿದ್ದು, ಆಧುನಿಕ ಸೌಲಭ್ಯಗಳೊಂದಿಗೆ ಮೀನುಗಾರರ ಜೀವನೋಪಾಯವನ್ನು ಸುಧಾರಿಸುವ ಗುರಿಯಿದೆ. ಈ ಯೋಜನೆಯಡಿ ಮಲ್ಪೆ ಬಂದರಿನಲ್ಲಿ ಹಳೆಯ ಮೂಲಸೌಕರ್ಯವನ್ನು ನವೀಕರಿಸಿ, ಬಂದರಿನ ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ವಿವಿಧ ಹೊಸ ಸೌಲಭ್ಯಗಳನ್ನು ನಿರ್ಮಿಸಲಾಗುತ್ತಿದೆ.

WhatsApp Image 2025 10 08 at 8.38.32 AM

ಇದರಡಿ 60,000 ಲೀಟರ್ ಸಾಮರ್ಥ್ಯದ ಸಂಪ್ ಟ್ಯಾಂಕ್, 1,25,000 ಲೀಟರ್ ಸಾಮರ್ಥ್ಯದ ಓವರ್‌ಹೆಡ್ ಟ್ಯಾಂಕ್, ಭದ್ರತಾ ಗಾರ್ಡ್ ಹೌಸ್, ಶೀತೀಕರಣ ಘಟಕಗಳು, ಬಯೋಮೆಡಿಕಲ್ ತ್ಯಾಜ್ಯ ನಿರ್ವಹಣಾ ಘಟಕ, ಪಾರ್ಕಿಂಗ್ ಪ್ರದೇಶ, ಡ್ರೆನೇಜ್ ವ್ಯವಸ್ಥೆ, ಸೌರ ಬೆಳಕುಗಳು, ಮತ್ತು ಹೈಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ನಡೆಯುತ್ತಿರುವ ಆಧುನೀಕರಣ ಕಾರ್ಯಗಳು ಬಂದರಿನ ಸಾಮರ್ಥ್ಯವನ್ನು ವೃದ್ಧಿಸಿ, ಮೀನುಗಾರರ ಜೀವನೋಪಾಯದಲ್ಲಿ ಹೊಸ ಚೈತನ್ಯ ತುಂಬಲಿವೆ. ಆಧುನಿಕ ಸೌಲಭ್ಯಗಳು, ಶುದ್ಧತೆ, ತಂತ್ರಜ್ಞಾನ ಹಾಗೂ ಸುರಕ್ಷತೆಗಳ ಸಂಯೋಜನೆಯಿಂದ ಮಲ್ಪೆ ಬಂದರು ರಾಜ್ಯದ ಇತರೆ ಬಂದರುಗಳಿಗೆ ಮಾದರಿಯಾಗುವ ಸಾಧ್ಯತೆ ಇದೆ. ಈ ಯೋಜನೆಯಿಂದ ಉಡುಪಿ ಜಿಲ್ಲೆಯ ಮೀನುಗಾರಿಕೆ ಕ್ಷೇತ್ರವು ಆರ್ಥಿಕವಾಗಿ ಮತ್ತಷ್ಟು ಬಲ ಪಡೆದು, ಕರಾವಳಿ ಅಭಿವೃದ್ಧಿಯ ಹೊಸ ಅಧ್ಯಾಯವನ್ನು ಆರಂಭಿಸಲಿದೆ ಎಂಬುದು ಮೀನುಗಾರರ ಆಶೆಯಾಗಿದೆ.ಜೀನ್ ಮೀನು ಸಂಸ್ಕರಣಾ ಕೇಂದ್ರಗಳು ನಿರ್ಮಾಣ ಹಂತದಲ್ಲಿವೆ.

WhatsApp Image 2025 10 08 at 9.05.06 AM

ಮೀನುಗಾರರ ಸುರಕ್ಷತೆ, ಮೀನು ಸಂಗ್ರಹಣೆಯ ಗುಣಮಟ್ಟ ಮತ್ತು ವ್ಯಾಪಾರ ಚಟುವಟಿಕೆಗಳಿಗೆ ಸೂಕ್ತ ವಾತಾವರಣ ಕಲ್ಪಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಆಧುನಿಕ ತಂತ್ರಜ್ಞಾನ ಬಳಕೆ, ಸ್ಮಾರ್ಟ್ ಮೀನುಗಾರಿಕೆ ವ್ಯವಸ್ಥೆ, ಮತ್ತು ಶುದ್ಧತೆಯ ಮೇಲೆ ಒತ್ತು ನೀಡುವ ಮೂಲಕ ಬಂದರಿನ ಸಾಮರ್ಥ್ಯವನ್ನು ಹೆಚ್ಚಿಸುವ ಕಾರ್ಯ ನಡೆಯುತ್ತಿದೆ. ಈ ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಯುಕ್ತ ಯೋಜನೆ ಆಗಿದ್ದು, ಇದರಡಿ 60% ಅನುದಾನವನ್ನು ಕೇಂದ್ರ ಸರ್ಕಾರ ಮತ್ತು 40% ಅನುದಾನವನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಉಡುಪಿ ಜಿಲ್ಲೆಯ ಮೀನುಗಾರಿಕೆ ಕ್ಷೇತ್ರಕ್ಕೆ ಇದು ಮಹತ್ವದ ಪ್ರೋತ್ಸಾಹ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

WhatsApp Image 2025 10 08 at 8.38.33 AM

ಮೀನುಗಾರಿಕೆ ಇಲಾಖೆ ವತಿಯಿಂದ ಮಲ್ಪೆಯ ಮೀನುಗಾರಿಕಾ ಬಂದರು ಆವರಣದಲ್ಲಿ ಮೀನುಗಾರಿಕಾ ಬಂದರಿನ ಆಧುನೀಕರಣ ಕಾಮಗಾರಿಯ ಶಂಕುಸ್ಥಾಪನೆಯನ್ನು ಕರ್ನಾಟಕ ಸರ್ಕಾರದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಾಂಕಾಳ ವೈದ್ಯ ನೆರವೇರಿಸಿ ಮಾತನಾಡಿ, ಮೀನುಗಾರರು ಮೀನುಗಾರಿಕಾ ಚಟುವಟಿಕೆಗಳನ್ನು ಉತ್ತಮ ರೀತಿಯಲ್ಲಿ ಕೈಗೊಳ್ಳಲು ಅಗತ್ಯವಿರುವ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಬದ್ದವಾಗಿದೆ. ಅದಕ್ಕೆ ಅಗತ್ಯವಿರುವ ಎಲ್ಲ ರೀತಿಯ ಅನುದಾನವನ್ನು ಸರ್ಕಾರವು ಕಲ್ಪಿಸಲಿದೆ. ಜಿಲ್ಲೆಯಲ್ಲಿ 50 ಸಾವಿರಕ್ಕೂ ಹೆಚ್ಚು ಜನ ಮೀನುಗಾರಿಕೆ ಸೇರಿದಂತೆ ಅದಕ್ಕೆ ಪೂರಕವಾಗಿರುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನನ್ನ ಕ್ಷೇತ್ರದ 20 ಸಾವಿರಕ್ಕೂ ಹೆಚ್ಚು ಜನ ಇಲ್ಲಿನ ಮೀನುಗಾರಿಕಾ ಚಟುವಟಿಕೆಗಳನ್ನು ಅವಲಂಬಿಸಿದ್ದಾರೆ. ಮಲ್ಪೆಯು ದೇಶದಲ್ಲಿಯೇ ಅತಿ ಹೆಚ್ಚು ಮೀನುಗಾರಿಕಾ ಉತ್ಪನ್ನಗಳನ್ನು ಮಾಡುವ ಬಂದರಾಗಿದ್ದು ಇಲ್ಲಿನ ಅಗತ್ಯ ಮೂಲಭೂತ ಸೌಕರ್ಯಗಳನ್ನು ಮೀನುಗಾರಿಕಾ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಗುವ ರೀತಿಯಲ್ಲಿ ನಿರ್ಮಿಸಲು ನಮ್ಮ ಸರ್ಕಾರ ಬದ್ದವಾಗಿದೆ.

WhatsApp Image 2025 10 08 at 8.51.13 AM 1

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನವನ್ನು ಬಳಕೆ ಮಾಡುವುದರೊಂದಿಗೆ ಇಲ್ಲಿನ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಒಂದೊಮ್ಮೆ ಕೇಂದ್ರ ಸರ್ಕಾರ ಅನುದಾನ ನೀಡದಿದ್ದಲ್ಲಿ ನಮ್ಮ ಸರ್ಕಾರವೇ ಅನುದಾನ ಭರಿಸುವುದರೊಂದಿಗೆ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವುದು. ಕಳೆದ ಸಾಲುಗಳಲ್ಲಿ ಬಂದರುಗಳ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲು ಬಂದಿರುವ ಅನುದಾನವು ಸಿ.ಆರ್.ಜೆಡ್ ನ ಕೆಲವು ನಿಯಮಾವಳಿಗಳಿಂದಾಗಿ ಬಳಕೆ ಮಾಡಿಕೊಳ್ಳಲು ಕಷ್ಟಸಾಧ್ಯವಾಗಿ ವಾಪಾಸು ಹೋಗಿದೆ. ರಾಜ್ಯ ಸರ್ಕಾರವು ಸಿ.ಆರ್.ಜೆಡ್.ನ ನಿಯಮಾವಳಿಗಳನ್ನು ನೆರೆಯ ರಾಜ್ಯಗಳಾದ ಗೋವಾ ಮತ್ತು ಕೇರಳದಲ್ಲಿ ಇರುವ ಹಾಗೆ ಮಾಡಿಕೊಟ್ಟಲ್ಲಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ. ದೇಶದಲ್ಲಿ ಎಲ್ಲಾ ರಾಜ್ಯಗಳಲ್ಲಿ ಒಂದೇ ಥರದ ನಿಯಮಾವಳಿಗಳು ಇರುವುದು ಒಳಿತು. ರಾಜ್ಯ ಸರ್ಕಾರವು ರಾಜ್ಯದಲ್ಲಿರುವ ಸಿ.ಆರ್.ಜೆಡ್ ನ ನಿಯಮಾವಳಿಗಳನ್ನು ಬದಲಾಯಿಸಲು ಮನವಿ ಮಾಡಿದೆ. ಇದಕ್ಕೆ ಎಲ್ಲರೂ ಸ್ಪಂದಿಸಬೇಕು ಇದರಿಂದ ಮೀನುಗಾರಿಕೆ ಚಟುವಟಿಕೆ ಹಾಗೂ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

WhatsApp Image 2025 10 08 at 8.51.12 AM

ಮಲ್ಪೆಯು ಸರ್ವಋತು ಬಂದರಾಗಿದ್ದು ಹೆಚ್ಚು ಮೀನುಗಾರರು ಮೀನುಗಾರಿಕಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮೀನುಗಾರಿಕಾ ದೋಣಿಗಳು ಹೆಚ್ಚಾದ ಕಾರಣ ಮೀನುಗಾರಿಕಾ ಬೋಟ್‌ಗಳ ನಿಲುಗಡೆಗೆ ವಿಸ್ತರಣೆ ಅಗತ್ಯವಿದೆ. ಇದರ ಜೊತೆಗೆ ಬಂದರಿನ ಸ್ವಚ್ಚತೆಗೆ ಆದ್ಯತೆ ನೀಡಬೇಕು, ಮಾನ್ಯ ಮೀನುಗಾರಿಕಾ ಮಂತ್ರಿಗಳು ಸ್ಥಳೀಯ ಮೀನುಗಾರರ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸಲು ಅನುಕೂಲವಾಗುವ ರೀತಿ ಸಭೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಹೇಳಿದ್ದಾರೆ.

WhatsApp Image 2025 10 08 at 8.52.06 AM

ಮತ್ಸ್ಯ ಸಂಪದಾ ಯೋಜನೆಯು ಮೀನುಗಾರರಿಗೆ ಶಕ್ತಿ ತುಂಬಿದೆ. ಈ ಯೋಜನೆಯ ಅನುದಾನವು ಸಮರ್ಪಕವಾಗಿ ಬಳಕೆಯಾಗಬೇಕು. ಹೆಜಮಾಡಿ ಮೀನುಗಾರಿಕಾ ಬಂದರಿನ ಕಾಮಗಾರಿಯನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿದಲ್ಲಿ ಮೀನುಗಾರಿಕಾ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಲಿದೆ ಎಂದ ಅವರು, ಜಿಲ್ಲೆಯಲ್ಲಿ ಜಟ್ಟಿಗಳ ನಿರ್ಮಾಣ ಹಾಗೂ ಹೂಳೆತ್ತುವುದಕ್ಕೂ ಹೆಚ್ಚು ಗಮನ ನೀಡಬೇಕು ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಪ್ರಸ್ತುತ ಕೊರತೆಯಿರುವ ಅಗತ್ಯ ಸೌಲಭ್ಯವನ್ನು ನಿರ್ವಹಿಸಲು ಈ ಕೆಳಗಿನಂತೆ ಅವಕಾಶ ಕಲ್ಪಿಸಲಾಗಿದೆ.
ಬಂದರಿನಲ್ಲಿರುವ ಹಳೆಯ ಮೂಲಸೌಕರ್ಯ ಸೌಲಭ್ಯಗಳನ್ನು ನವೀಕರಿಸಿ ಬಂದರಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಸೇರ್ಪಡೆಗೊಳಿಸುವುದು.
ಮೀನುಗಾರರ ಜೀವನೊಪಾಯದ ಸ್ಥಿತಿಯನ್ನು ಸುಧಾರಿಸುವುದು
ಬಂದರನ್ನು ಪರಿಸರ ಸ್ನೇಹಿಯಾಗಿ ಹಾಗೂ ಪ್ರವಾಸೋದ್ಯಮ ಬೆಂಬಲಿಸುವ ರೀತಿಯಲ್ಲಿ ಆಧುನೀಕರಣಗೊಳಿಸುವುದು
ಮೀನಿನ ಗುಣಮಟ್ಟ ಮತ್ತು ಮೌಲ್ಯವನ್ನು ಹೆಚ್ಚಿಸಿ ಬಂದರಿನ ಆದಾಯವನ್ನು ವೃದ್ಧಿಸುವುದು.
ಮಲ್ಪೆ ಮೀನುಗಾರಿಕೆ ಬಂದರಿನ ಆಧುನೀಕರಣಗೊಳಿಸಲು ಪ್ರಧಾನಮಂತ್ರಿ ಮತ್ತ್ವಸಂಪದ ಯೋಜನೆಯಡಿ ನಿಗದಿಪಡಿಸಿದ 12.52 ಕೋಟಿ

WhatsApp Image 2025 10 08 at 8.38.33 AM 1 1

ಮಲ್ಪೆ ಮೀನುಗಾರಿಕೆ ಬಂದರನ್ನು ಆಧುನೀಕರಣಗೊಳಿಸಲು ಈ ಕೆಳಗಿನ ಸೌಲಭ್ಯಗಳನ್ನು ಅಂದಾಜುಪಟ್ಟಿಯಲ್ಲಿ ಅಳವಡಿಸಿಕೊಳ್ಳಲಾಗಿರುತ್ತದೆ.
60,000 ಲೀ. ಸಾಮರ್ಥ್ಯದ ಸಂಪ್‌ ಟ್ಯಾಂಕ್
1,25,000 ಲೀ ಸಾಮರ್ಥ್ಯ ಓವರ್ ಹೆಡ್ ಟ್ಯಾಂಕ್
ಪ್ರವೇಶ ದ್ವಾರದೊಂದಿಗೆ ಭದ್ರತಾ ಗಾರ್ಡ್ ಹೌಸ್ (75.00 ಚ.ಮೀ)
ಸಿ.ಸಿ ಟಿವಿ ಅಳವಡಿಸುವುದು
ಕಾಂಕ್ರೀಟ್‌ ಸರ್ಫೇಸ್ (190.00×25.00=4750.00 sqm)
600 KLD ETP ಹಾಗೂ ಕಾಂಕ್ರೀಟ್ ಚರಂಡಿಯನ್ನು ನಿರ್ಮಿಸುವುದು (2450.00 ಮೀ.ಉದ್ದ)
RO ಪ್ಲಾಂಟ್ ನೊಂದಿಗೆ ಫಿಶ್ ಹ್ಯಾಂಡ್ಲಿಂಗ್ ವ್ಯವಸ್ಥೆ
2.5MT /ಗಂಟೆ ಸಾಮರ್ಥ್ಯದ ಕನ್ವೇಯರ್‌ ವ್ಯವಸ್ಥೆ

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ನಡೆಯುತ್ತಿರುವ ಆಧುನೀಕರಣ ಕಾರ್ಯಗಳು ಬಂದರಿನ ಸಾಮರ್ಥ್ಯವನ್ನು ವೃದ್ಧಿಸಿ, ಮೀನುಗಾರರ ಜೀವನೋಪಾಯದಲ್ಲಿ ಹೊಸ ಚೈತನ್ಯ ತುಂಬಲಿವೆ. ಆಧುನಿಕ ಸೌಲಭ್ಯಗಳು, ಶುದ್ಧತೆ, ತಂತ್ರಜ್ಞಾನ ಹಾಗೂ ಸುರಕ್ಷತೆಗಳ ಸಂಯೋಜನೆಯಿಂದ ಮಲ್ಪೆ ಬಂದರು ರಾಜ್ಯದ ಇತರೆ ಬಂದರುಗಳಿಗೆ ಮಾದರಿಯಾಗುವ ಸಾಧ್ಯತೆ ಇದೆ. ಈ ಯೋಜನೆಯಿಂದ ಉಡುಪಿ ಜಿಲ್ಲೆಯ ಮೀನುಗಾರಿಕೆ ಕ್ಷೇತ್ರವು ಆರ್ಥಿಕವಾಗಿ ಮತ್ತಷ್ಟು ಬಲ ಪಡೆದು, ಕರಾವಳಿ ಅಭಿವೃದ್ಧಿಯ ಹೊಸ ಅಧ್ಯಾಯವನ್ನು ಆರಂಭಿಸಲಿದೆ ಎಂಬುದು ಮೀನುಗಾರರ ಆಶೆಯಾಗಿದೆ.

WhatsApp Image 2023 08 22 at 3.23.15 PM
ಶಾರೂಕ್ ತೀರ್ಥಹಳ್ಳಿ
+ posts

ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಶಾರೂಕ್ ತೀರ್ಥಹಳ್ಳಿ
ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಾರ್ಮಿಕರು ಹಕ್ಕು ಮತ್ತು ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ. ಶಾಹಿದ್ ತೆಕ್ಕಿಲ್

ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವುದರೊಂದಿಗೆ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ...

ಬಾಗೇಪಲ್ಲಿಯಲ್ಲಿ ರಸ್ತೆ ಅಪಘಾತ:ರೈತ ನಂಜಪ್ಪ ಸಾವು

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದಲ್ಲಿ ಹೊಲಕ್ಕೆ ತೆರಳುತ್ತಿದ್ದ ನಡಂಪಲ್ಲಿ...

ಮಂಗಳೂರು | ಕೊಳ್ತಮಜಲು ರಹ್ಮಾನ್ ಹತ್ಯೆ ಪ್ರಕರಣ: ಆರೋಪಿಗಳ ಜಾಮೀನು ರದ್ದುಪಡಿಸಿದ ಸುಪ್ರೀಂ ಕೋರ್ಟ್

ಕೊಳ್ತಮಜಲು ರಹ್ಮಾನ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ಇತ್ತೀಚೆಗೆ ನ್ಯಾಯಾಲಯ ಜಾಮೀನು ನೀಡಿತ್ತು....

ಕೋಲಾರ | ಚೈನಾ ಶಾಂಘೈನಲ್ಲಿ ಕನ್ನಡದ ಮೊದಲ ಜಾನಪದ ಕಾರ್ಯಕ್ರಮ: ಗೋ.ನಾ. ಸ್ವಾಮಿ ಭಾಗಿ

ಚೈನಾ ದೇಶದ ಶಾಂಘೈನಲ್ಲಿ ಕನ್ನಡಿಗರ ಸಂಘದ ವತಿಯಿಂದ ಆಯೋಜಿಸಿದ್ದ ಕನ್ನಡದ ಮೊದಲ...