ಕಡಲ ಅಲೆಗಳ ನಡುವೆ ಜೀವ ಉಳಿಸುವ ಕಾವಲುಗಾರರು: ಕಾಪು ಬೀಚ್‌ನ ರಿಯಲ್ ಹೀರೋಗಳು!

Date:

ಸಮಾಜದ ಕಣ್ಣಿಗೆ ಸದಾ ಕಾಣಿಸಿಕೊಳ್ಳದಿದ್ದರೂ, ಅಪಾಯದ ಅಲೆಗಳ ನಡುವೆ ಸಿಲುಕಿದವರ ಪಾಲಿಗೆ ಆಪತ್ಬಾಂಧವರಾಗಿ ಧಾವಿಸಿ ಜೀವ ಉಳಿಸುವ ಕಡಲ ಕಾವಲುಗಾರರ ಸೇವೆ ನಿಜಕ್ಕೂ ಶ್ಲಾಘನೀಯ. ತಮ್ಮ ಪ್ರಾಣದ ಹಂಗು ತೊರೆದು ಪ್ರವಾಸಿಗರ ಜೀವ ರಕ್ಷಣೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಕಾಪು ಬೀಚ್‌ನ ಲೈಫ್‌ಗಾರ್ಡ್‌ಗಳು ಕಡಲ ತೀರದ ನಿಜವಾದ ಹೀರೋಗಳಾಗಿ ಗುರುತಿಸಿಕೊಂಡಿದ್ದಾರೆ.

- Advertisement -

ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಕಾಪು ಬೀಚ್‌ಗೆ ಪ್ರತಿದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಕಡಲ ತೀರದ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುವುದರ ಜೊತೆಗೆ ಸಮುದ್ರದ ಅಲೆಗಳೊಂದಿಗೆ ಆಟವಾಡುತ್ತಾ ಸಂಭ್ರಮಿಸುತ್ತಾರೆ. ಆದರೆ, ಸಮುದ್ರದ ಆಳ, ಅಲೆಗಳ ಸೆಳೆತ ಹಾಗೂ ಸುಳಿಗಳ ಅಪಾಯದ ಅರಿವಿಲ್ಲದೆ ಕೆಲವರು ನೀರಿನಲ್ಲಿ ಸಿಲುಕಿ ಜೀವಾಪಾಯ ಎದುರಿಸುವ ಘಟನೆಗಳು ನಡೆಯುತ್ತಿರುತ್ತವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಧಿಕೃತ ಕೆಲಸಕ್ಕೆ WHATSAPP ವೆಬ್ ಅಪಾಯಕಾರಿ ಏಕೆ? ಗೃಹ...

ಕಚೇರಿ, ಸಾರ್ವಜನಿಕ ಅಥವಾ ಹಲವರು ಹಂಚಿಕೊಂಡು ಬಳಸುವ ಕಂಪ್ಯೂಟರ್‌ಗಳಲ್ಲಿ WHATSAPP ವೆಬ್ ಬಳಸುವವರಿಗೆ ಕೇಂದ್ರ ಗೃಹ ಸಚಿವಾಲಯ ಮಹತ್ವದ ಭದ್ರತಾ ಎಚ್ಚರಿಕೆ ನೀಡಿದೆ. ಸಚಿವಾಲಯದ ಅಧೀನದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ...

ಆನೆ ಓಡಿಸಲು ಜೇನುನೊಣ ಸಾಕು! ಏನಿದು ತಂತ್ರ?

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೃಷಿಕರು ಆನೆ ಹಾವಳಿ ತಡೆಗೆ ಸರಳ ಮತ್ತು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಆನೆ ಬರುವ ದಾರಿಯಲ್ಲಿ ಜೇನು ಪೆಟ್ಟಿಗೆಗಳನ್ನಿಟ್ಟು ಗಜಪಡೆಯನ್ನು ಹಿಮ್ಮೆಟ್ಟಿಸುವ ಮಾರ್ಗವಿದು. ಆನೆಗಳ ಸೊಂಡಿಲಿನ ಒಳಭಾಗ...

ವೈದ್ಯರಿಲ್ಲ, ಔಷಧವೂ ಇಲ್ಲ! ದಶಕ ಕಳೆದರೂ ಚೇತರಿಸದ ಗಜೇಂದ್ರಗಡ...

ಗಜೇಂದ್ರಗಡ ತಾಲೂಕು ಘೋಷಣೆಯಾಗಿ ದಶಕ ಕಳೆದರೂ ಇಂದಿಗೂ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿಲ್ಲ. ವೈದ್ಯರ ಕೊರತೆ, ಅಗತ್ಯ ಔಷಧಿಗಳ ಕೊರತೆ, ಸಿಬ್ಬಂದಿಗಳ ಕೊರತೆ ಇರುವುದರಿಂದ, ಇಲ್ಲಿಗೆ ಬರುವ ರೋಗಿಗಳಿಗೆ ಸರಿಯಾದ ಚಿಕತ್ಸೆ,...

ಇಂತಹ ಅಪಾಯಕಾರಿ ಸಂದರ್ಭಗಳಲ್ಲಿ ಕ್ಷಣಮಾತ್ರವೂ ತಡಮಾಡದೆ ರಕ್ಷಣೆಗೆ ಧಾವಿಸುವವರು ಕಾಪು ಬೀಚ್‌ನ ಲೈಫ್‌ಗಾರ್ಡ್‌ಗಳು. ಪ್ರವಾಸಿಗರ ಸುರಕ್ಷತೆಯನ್ನೇ ತಮ್ಮ ಪ್ರಮುಖ ಕರ್ತವ್ಯವೆಂದು ಪರಿಗಣಿಸಿರುವ ಇವರು, ಬಿಸಿಲು, ಮಳೆ ಎನ್ನದೆ ಕಡಲ ತೀರದಲ್ಲಿ ನಿರಂತರವಾಗಿ ಕಾವಲು ಕಾಯುತ್ತಾರೆ. ಈಗಾಗಲೇ ನೂರಾರು ಪ್ರವಾಸಿಗರ ಜೀವ ಉಳಿಸಿ, ಅನೇಕ ಕುಟುಂಬಗಳ ಪಾಲಿಗೆ ಆಶಾಕಿರಣವಾಗಿದ್ದಾರೆ.

ಇತ್ತೀಚೆಗೆ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿದ ಐವರು ಪ್ರವಾಸಿಗರ ಪೈಕಿ ಮೂವರನ್ನು ಲೈಫ್‌ಗಾರ್ಡ್‌ಗಳು ತಮ್ಮ ಪ್ರಾಣದ ಹಂಗು ತೊರೆದು ರಕ್ಷಿಸಿದ ಘಟನೆ ಅವರ ಸಾಹಸ ಮತ್ತು ಕರ್ತವ್ಯನಿಷ್ಠೆಗೆ ಸಾಕ್ಷಿಯಾಗಿದೆ. ಅಪಾಯದ ಅರಿವಿದ್ದರೂ ಜೀವ ಉಳಿಸುವುದೇ ಮೊದಲ ಆದ್ಯತೆ ಎಂಬ ಮಾನವೀಯ ಕಾಳಜಿಯೊಂದಿಗೆ ಅಲೆಗಳ ನಡುವೆ ಧಾವಿಸುವ ಇವರ ಧೈರ್ಯಕ್ಕೆ ಎಷ್ಟು ಪ್ರಶಂಸೆ ವ್ಯಕ್ತಪಡಿಸಿದರೂ ಸಾಲದು.

ಕಾಪು ಬೀಚ್‌ನಲ್ಲಿ ಪ್ರವಾಸಿಗರ, ಅದರಲ್ಲೂ ಮಕ್ಕಳ ಜೀವ ರಕ್ಷಣೆಗೆ ವಿಶೇಷ ಕಾಳಜಿ ವಹಿಸುತ್ತಿರುವ ಚಂದ್ರಶೇಖರ್ ಮೆಂಡನ್, ನಿತಿನ್ ಚೌಟ, ಸಂದೇಶ್ ಕರ್ಕೇರ, ಕಾರ್ತಿಕ್ ಸುವರ್ಣ, ರಾಮಣ್ಣ, ಗಣೇಶ್, ಮುಸ್ತಾಕ್, ಸಲೀಂ, ಸಾದಿಕ್, ಬಸವ, ಕಾಂಚಾ, ಆಜಾದ್, ಇಮ್ರಾನ್, ಶರಣ್ ಹಾಗೂ ಸಮೀರ್ ಸೇರಿದಂತೆ ಎಲ್ಲಾ ಜೀವ ರಕ್ಷಕರ ಸೇವೆ ಅಭಿನಂದನಾರ್ಹವಾಗಿದೆ.

ಸ್ಥಳೀಯರಾಗಿರುವ ಈ ಜೀವ ರಕ್ಷಕರಿಗೆ ಸಮುದ್ರದ ಸ್ವಭಾವ, ಅಲೆಗಳ ಏರಿಳಿತ, ಸುಳಿಗಳು ಹಾಗೂ ಅಪಾಯಕಾರಿ ಪ್ರದೇಶಗಳ ಬಗ್ಗೆ ಉತ್ತಮ ಅರಿವಿದೆ. ಅವರ ಅನುಭವ, ಸಮಯಪ್ರಜ್ಞೆ ಮತ್ತು ಸಾಹಸ ರಕ್ಷಣಾ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಅಪಾಯದ ಮುನ್ಸೂಚನೆಯನ್ನು ಗುರುತಿಸಿ ಪ್ರವಾಸಿಗರಿಗೆ ಎಚ್ಚರಿಕೆ ನೀಡುವುದರಿಂದ ಹಿಡಿದು, ನೀರಿನಲ್ಲಿ ಸಿಲುಕಿದವರನ್ನು ಸುರಕ್ಷಿತವಾಗಿ ದಡಕ್ಕೆ ತಲುಪಿಸುವವರೆಗೆ ಇವರು ನಿರ್ವಹಿಸುವ ಜವಾಬ್ದಾರಿ ಅಪಾರವಾಗಿದೆ.

ಆದರೆ, ಇಷ್ಟೆಲ್ಲಾ ಮಹತ್ವದ ಸೇವೆ ಸಲ್ಲಿಸುತ್ತಿದ್ದರೂ ಈ ಜೀವ ರಕ್ಷಕರ ಶ್ರಮ ಬಹುತೇಕ ಸಂದರ್ಭಗಳಲ್ಲಿ ಮಾಧ್ಯಮಗಳ ಬೆಳಕಿಗೆ ಬರುವುದಿಲ್ಲ. ಅಪಘಾತ ಸಂಭವಿಸಿದಾಗ ಮಾತ್ರ ಇವರ ಸಾಹಸ ಮುನ್ನೆಲೆಗೆ ಬರುತ್ತದೆ. ಉಳಿದ ದಿನಗಳಲ್ಲಿ ಯಾವುದೇ ಪ್ರಚಾರದ ನಿರೀಕ್ಷೆಯಿಲ್ಲದೆ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಾರೆ.

ಕಡಲ ತೀರಕ್ಕೆ ಆಗಮಿಸುವ ಪ್ರವಾಸಿಗರು ಕೂಡ ಜೀವ ರಕ್ಷಕರ ಸೂಚನೆಗಳನ್ನು ಪಾಲಿಸುವುದು ಅತ್ಯಗತ್ಯ. ಸಮುದ್ರದ ಅಪಾಯದ ವಲಯಗಳಲ್ಲಿ ಈಜುವುದನ್ನು ತಪ್ಪಿಸುವುದು, ಮಕ್ಕಳನ್ನು ಒಬ್ಬರೇ ನೀರಿನ ಬಳಿ ಬಿಡದಿರುವುದು ಹಾಗೂ ಲೈಫ್‌ಗಾರ್ಡ್‌ಗಳ ಎಚ್ಚರಿಕೆಗಳನ್ನು ನಿರ್ಲಕ್ಷಿಸದಿರುವುದು ಪ್ರತಿಯೊಬ್ಬ ಪ್ರವಾಸಿಗನ ಜವಾಬ್ದಾರಿಯಾಗಿದೆ.

ಇಂತಹ ಅಮೂಲ್ಯ ಸೇವೆ ಸಲ್ಲಿಸುತ್ತಿರುವ ಜೀವ ರಕ್ಷಕರನ್ನು ಗುರುತಿಸಿ ಗೌರವಿಸುವುದು ಸಮಾಜದ ಕರ್ತವ್ಯ. ಸರ್ಕಾರವೂ ಇವರಿಗೆ ಸೂಕ್ತ ಭದ್ರತೆ, ಆಧುನಿಕ ರಕ್ಷಣಾ ಉಪಕರಣಗಳು, ಅಗತ್ಯ ಸೌಲಭ್ಯಗಳು, ತರಬೇತಿ ಹಾಗೂ ಪ್ರೋತ್ಸಾಹ ನೀಡುವ ಮೂಲಕ ಅವರ ಸೇವೆಗೆ ಬೆಂಬಲ ನೀಡಬೇಕು.

ಕಡಲ ಅಲೆಗಳ ಅಬ್ಬರದ ನಡುವೆ ಅಪಾಯಕ್ಕೆ ಸಿಲುಕಿದವರ ಪಾಲಿಗೆ ದೇವರಂತೆ ಧಾವಿಸಿ ಜೀವ ಉಳಿಸುವ ಈ ಲೈಫ್‌ಗಾರ್ಡ್‌ಗಳು ಕೇವಲ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯಲ್ಲ; ಅನೇಕ ಕುಟುಂಬಗಳ ನೆಮ್ಮದಿ ಮತ್ತು ಬದುಕಿನ ಆಶಾಕಿರಣ. ಪ್ರಚಾರದ ಹಂಗಿಲ್ಲದೆ, ಪ್ರಶಂಸೆಯ ನಿರೀಕ್ಷೆಯಿಲ್ಲದೆ ಜೀವ ಉಳಿಸುವ ಕಾಯಕದಲ್ಲಿ ತೊಡಗಿರುವ ಕಾಪು ಬೀಚ್‌ನ ಈ ಕಡಲ ಕಾವಲುಗಾರರೇ ನಿಜವಾದ ಹೀರೋಗಳು. ಅವರ ನಿಸ್ವಾರ್ಥ ಸೇವೆಗೆ ಹೃದಯಪೂರ್ವಕ ನಮನ ಮತ್ತು ಸಲಾಂ!

WhatsApp Image 2023 08 22 at 3.23.15 PM
ಶಾರೂಕ್ ತೀರ್ಥಹಳ್ಳಿ
+ posts

ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಶಾರೂಕ್ ತೀರ್ಥಹಳ್ಳಿ
ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಬಸವಣ್ಣನವರ ಅವಹೇಳನ ಖಂಡಿಸಿ ರವಿ ಹಂಜ್ ವಿರುದ್ಧ ದಸಂಸ ಕ್ರಾಂತಿಕಾರಿ ಬಣ ಪ್ರತಿಭಟನೆ

ಬಸವಣ್ಣನವರು ಹಾಗೂ ಶರಣ ಪರಂಪರೆಯ ಕುರಿತು ಅವಹೇಳನಕಾರಿ ಅಂಶಗಳನ್ನು ಒಳಗೊಂಡಿದೆ ಎನ್ನಲಾದ...

ಯಾದಗಿರಿ | ರೈತರ ಹೋರಾಟಕ್ಕೆ ಸ್ಪಂದನೆ; ಬಸವಸಾಗರದಿಂದ 1.5 ಟಿಎಂಸಿ ನೀರು ಬಿಡುಗಡೆಗೆ ಆದೇಶ

ಬರಗಾಲದ ಸಂಕಷ್ಟದಿಂದ ಕಂಗಾಲಾಗಿದ್ದ ಕಾಲುವೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ಕೊನೆಗೂ ಕೊಂಚ...

ಯಾದಗಿರಿ | ಎಂಬಿಬಿಎಸ್‌ ವಿದ್ಯಾರ್ಥಿಗಳ ಬಾಕಿ ವಿದ್ಯಾರ್ಥಿವೇತನ ಬಿಡುಗಡೆಗೆ ಸದ್ದಮ್ ಹುಸೇನ್ ಆಗ್ರಹ

ಕೋವಿಡ್ ಸಾಂಕ್ರಾಮಿಕ ಹಾಗೂ ಪ್ರವೇಶ ಪ್ರಕ್ರಿಯೆಯಲ್ಲಿನ ವಿಳಂಬದಿಂದಾಗಿ 2021ನೇ ಸಾಲಿನ ಎಂಬಿಬಿಎಸ್...

ಯಾದಗಿರಿ | ಕೆಂಭಾವಿಯಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯಿಂದ ಮನವಿ

ಕೆಂಭಾವಿ ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸಿ, ಅಗ್ನಿಶಾಮಕ ವಾಹನ ಹಾಗೂ ಅಗತ್ಯ...