ಮಾಲೂರು | ಬಿಜೆಪಿ ಅಭ್ಯರ್ಥಿ ಪರ ಮುನಿಸ್ವಾಮಿ ಮತಯಾಚನೆ; ‌ಸ್ಥಳೀಯರಿಂದ ತರಾಟೆ

Date:

Advertisements
  • ಬಿಜೆಪಿಗೆ ಮತ ಹಾಕುವುದಿಲ್ಲ ಎಂದ ಮಾಲೂರು ಗ್ರಾಮಸ್ಥರು
  • ಮಾಲೂರು ಕ್ಷೆತ್ರದಲ್ಲಿ ಪ್ರಬಲ ಪೈಪೋಟಿಗೆ ತಯಾರಾಗಿರುವ ವಿಜಯ ಕುಮಾರ

ಕರ್ನಾಟಕ ವಿಧಾನಸಭಾ ಚುನಾವಣೆ 2023 ಹತ್ತಿರ ಬರುತಿದ್ದಂತೆ ಎಲ್ಲ ಪಕ್ಷಗಳಿಂದ ಭರಾಟೆ ಪ್ರಚಾರ ನಡೆಯುತ್ತಿದೆ. ಮಾಲೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಸ್ ಮಂಜುನಾಥಗೌಡ ಪರವಾಗಿಕೋಲಾರ ಸಂಸದ ಮುನಿಸ್ವಾಮಿ ಗುರುವಾರ ರಾತ್ರಿ ಮತಯಾಚನೆ ನಡೆಸಿದ್ದಾರೆ. ಈ ವೇಳೆ, ಅವರನ್ನು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಅಸಂಡಳ್ಳಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಸಂಸದ ಮುನಿಸ್ವಾಮಿ ಮತಯಾಚನೆಗೆ ತೆರಳಿದ್ದರು. ಗ್ರಾಮದ ತಿಗಳ ಸಮುದಾಯದ ಯುವಕರು ಮತ್ತು ಗ್ರಾಮಸ್ಥರು ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

“ಹೂಡಿ ವಿಜಯ ಕುಮಾರ್ ಮೊದಲಿಂದಲೂ ಬಿಜೆಪಿ ಸಂಘಟನೆ ಮಾಡಿಕೊಂಡು ಬಂದಿದ್ದು, ಪಕ್ಷಕ್ಕಾಗಿ ಹಗಲಿರುಳು ದುಡಿದಿದ್ದರು. ಅಂಥವರಿಗೆ ಟಿಕೆಟ್‌ ತಪ್ಪಿಸಿ ಜೆಡಿಎಸ್‌ನಿಂದ ಬಿಜೆಪಿಗೆ ಬಂದವರಿಗೆ ಟಿಕೆಟ್‌ ಕೊಡಿಸಿದ್ದೀರಿ. ವಿಜಯ್‌ಗೆ ಟಿಕೆಟ್‌ ಕೈ ತಪ್ಪಲು ಮುಖ್ಯವಾಗಿ ನೀವೆ ಕಾರಣ. ಹಾಗಾಗಿ, ನೀವು ಇಲ್ಲಿ ಮತ ಕೇಳಲು ಬರಬೇಡಿ. ಬಿಜೆಪಿಗೆ ಮತ ಹಾಕುವುದಿಲ್ಲ” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisements

“ತಿಗಳ ಸಮುದಾಯದ ಮತ್ತು ಬಿಬಿಎಂಪಿ ಮಾಜಿ ಸದಸ್ಯರೂ ಆಗಿರುವ ಹೂಡಿ ವಿಜಯ್‌ ಕುಮಾರ್ ಅವರು ಬಿಜೆಪಿಯ ಪ್ರಬಲ ಅಕಾಂಕ್ಷಿಯಾಗಿದ್ದರು. ಕಳೆದ ನಾಲ್ಕು ವರ್ಷಗಳಿಂದ ಸಕ್ರಿಯವಾಗಿ ಸಾರ್ವಜನಿಕ ಕೆಲಸದಲ್ಲಿ ತೊಡಗಿದ್ದು, ಅಪಾರ ಜನಪರ ಕೆಲಸಗಳನ್ನು ಮಾಡಿದ್ದಾರೆ. ಜೊತೆಗೆ ಅಪಾರವಾದ ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿದ್ದರೂ ಕೂಡ ಅವರನ್ನು ಪರಿಗಣಿಸದೇ ಬಿಜೆಪಿ ಹೈಕಮಾಂಡ್‌ ಕೆ.ಎಸ್ ಮಂಜುನಾಥಗೌಡ ಅವರಿಗೆ ಟಿಕೆಟ್ ನೀಡಿದೆ” ಎಂದು ಕಿಡಿಕಾರಿದರು.

ಈ ಸುದ್ದಿ ಓದಿದ್ದೀರಾ? ಅರಕಲಗೂಡು | ಎ ಮಂಜು ಪರ ರೇವಣ್ಣ ಮತಯಾಚನೆ

ಪಕ್ಷೇತರವಾಗಿ ವಿಜಯ್ ಕುಮಾರ್ ಸ್ಪರ್ಧೆ

ಟಿಕೆಟ್‌ ಕೈ ತಪ್ಪಿದ ಬೆನ್ನಲ್ಲೆ ವಿಜಯ್‌ ಕುಮಾರ್ ಅವರು ಕ್ಷೇತ್ರದಲ್ಲಿ ಸಾವಿರಾರು ಅಭಿಮಾಗಳನ್ನು ಸೇರಿಸಿ ಸಭೆ ಮಾಡುವ ಮೂಲಕ ಪಕ್ಷೇತರವಾಗಿ ಸ್ಫರ್ಧಿಸಲು ತೀರ್ಮಾನಿಸಿದ್ದಾರೆ. ಇಪ್ಪತೈದು ಸಾವಿರ ಜನರೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಹೂಡಿ ವಿಜಯ್‌ ಕುಮಾರ್ ಅವರು ಈಗ ಮಾಲೂರು ಕ್ಷೆತ್ರದಲ್ಲಿ ಪ್ರಬಲ ಪೈಪೋಟಿ ಕೊಡಲು ತಯಾರಾಗಿದ್ದಾರೆ. ಕಾಂಗ್ರೆಸ್‌ ವರ್ಸಸ್‌ ಪಕ್ಷೇತರ ಎನ್ನುವಂತೆ ಕ್ಷೇತ್ರದಲ್ಲಿ ಸದ್ದು ಮಾಡುತಿದ್ದಾರೆ. ಒಟ್ಟಿನಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ-ಜೆಡಿಎಸ್‌-ಪಕ್ಷೇತರಗಳ ನಡುವೆ ಪೈಪೋಟಿ ಇದ್ದರೂ ಅದರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮೊದಲಿಗೆ ನಿಂತು ಪಕ್ಷೇತರ ಅಭ್ಯರ್ಥಿ ಎರಡನೆಯ ಸ್ಥಾನದಲ್ಲಿ ನಿಲ್ಲುವಷ್ಟು ಪ್ರಬಲವಾಗಿದ್ದಾರೆ ಎನ್ನಲಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

Download Eedina App Android / iOS

X