ಆರೋಗ್ಯ ಮತ್ತು ಕ್ಷೇಮ ಕೇಂದ್ರ, ಬಲ್ಲೇನಹಳ್ಳಿ, ತಾಲೂಕು ಆರೋಗ್ಯ ಕೇಂದ್ರ ಹಾಗೂ ಸಮರ್ಪಣ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಡೆಂಘೀ ವಿರೋಧಿ ಮಾಸಾಚರಣೆಯನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಡತನಾಳು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ವಕೀಲರಾದ ಸಿ.ಎಸ್.ವೆಂಕಟೇಶ್, “ಇಪ್ಪತ್ತು ವರ್ಷಗಳ ಹಿಂದೆ ನಮ್ಮ ಊರಿನ ವ್ಯಕ್ತಿಯೊಬ್ಬರಿಗೆ ಜ್ವರ ಬಂದಿತ್ತು. ಆಗ ಕಾಯಿಲೆ ಪರೀಕ್ಷೆ ಮಾಡುವ ವ್ಯವಸ್ಥೆ ಇಲ್ಲಿ ಸ್ಥಳೀಯವಾಗಿ ಇರಲಿಲ್ಲ. ರಕ್ತದ ಮಾದರಿ ತೆಗೆದು ಪುಣೆಗೆ ಕಳುಹಿಸಬೇಕಾಗಿತ್ತು, ಆ ರಕ್ತದ ಮಾದರಿಯ ಫಲಿತಾಂಶ ಡೆಂಘೀ ಅಂತ ಬರಲು ಇಪ್ಪತ್ತು ದಿನ ತೆಗೆದುಕೊಂಡಿತ್ತು. ಅಷ್ಟರಲ್ಲಿ ರೋಗ ಉಲ್ಬಣಗೊಂಡು ನಮ್ಮೂರಿನ ವ್ಯಕ್ತಿ ತೀರಿ ಹೋಗಿದ್ದರು. ಡೆಂಘೀ ಅನ್ನುವಂತ ಖಾಯಿಲೆ ಹೊಸದು, ಹೇಗೆ ನಿಭಾಯಿಸಬೇಕು, ಎಚ್ಚರ ವಹಿಸಬೇಕು ಅನ್ನುವ ತಿಳಿವಳಿಕೆ ಆ ಕಾಲಕ್ಕೆ ಇರಲಿಲ್ಲ. ಈಗ ಸ್ಥಳೀಯವಾಗಿ ವೈದ್ಯಕೀಯ ಸೌಲಭ್ಯ ಹೆಚ್ಚಿವೆ. ಶೀಘ್ರವಾಗಿ ರೋಗ ಪತ್ತೆ ಮಾಡಬಹುದು, ಚಿಕಿತ್ಸೆ ಕೊಡಬಹುದು ಎಲ್ಲ ಇದ್ದಾಗಲೂ ಕೂಡ ಮುನ್ನೆಚ್ಚರಿಕೆಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ ಮಾರ್ಗ” ಎಂದರು.
ಡಾ. ರಾಜು ಡೆಂಘೀಯ ಬಗ್ಗೆ ಯಾವ ರೀತಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಚಿಕೂನ್‌ಗುನ್ಯಾ ಜ್ವರ ರೋಗವಾಹಕ ಸೊಳ್ಳೆಗಳಿಂದ ಉಂಟಾಗಬಹುದಾದ ವೈರಸ್ ಜ್ವರಗಳನ್ನು ತಡೆಗಟ್ಟಲು ಸಾರ್ವಜನಿಕರಿಗೆ ಈ ಕೆಳಕಂಡ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ವಕೀಲ ಸಿ.ಎಸ್.ವೆಂಕಟೇಶ್, ದರಸಗುಪ್ಪೆ ಪಂಚಾಯಿತಿಯ ಮಾಜಿ ಅಧ್ಯಕ್ಷ ಕೆ.ಸಿ.ಮಾದೇಶ್, ಸಮರ್ಪಣ ಟ್ರಸ್ಟ್ ಅಧ್ಯಕ್ಷ ಕೆ.ಸಿ.ಜಯಶಂಕರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಡಾ. ರಾಜು, ಸಿಎಚ್ಓ ಡಾ. ಮಹೇಶ್, ಕಿರಿಯ ಆರೋಗ್ಯ ನಿರೀಕ್ಷಾಧಿಕಾರಿ ಡಾ. ಸುವರ್ಣ, ಪಿಎಚ್‌ಸಿಓ ಡಾ. ಪದ್ಮ ಈ ವೇಳೆ ಉಪಸ್ಥಿತರಿದ್ದರು.

E dina desk write a good article