ಮಂಡ್ಯ| ಅಕ್ಕಿ ಹೆಬ್ಬಾಳಿನಲ್ಲಿ ‘ಚಾವುಂಡರಾಯ’ ನಾಟಕ ಪ್ರದರ್ಶನ

Date:

Advertisements

ಜಯರಾಮ ರಾಯಪುರ ಅವರ ರಚನೆಯ, ಸಮಾಜಮುಖಿ ರಂಗ ಬಳಗ ಅಭಿನಯಿಸಿರುವ ‘ಚಾವುಂಡರಾಯ’ ನಾಟಕ ಪ್ರದರ್ಶನವು ಕೆಆರ್‌ ಪೇಟೆ ತಾಲೂಕಿನ ಅಕ್ಕಿ ಹೆಬ್ಬಾಳಿನಲ್ಲಿ ನಡೆದಿದೆ.

ಲೋಕಾಯನ ಕಲ್ಚರಲ್‌ ಫೌಂಡೇಷನ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಾಟಕ ಪ್ರದರ್ಶನ ನಡೆಸಿದೆ.

ರಂಗಾಯಣದ ಹಿರಿಯ ಕಲಾವಿದ, ನಿರ್ದೇಶಕ ಹುಲುಗಪ್ಪ ಕಟ್ಟಿಮನಿ ಅವರು ನಾಟಕವನ್ನು ನಿರ್ದೇಶಿಸಿದ್ದಾರೆ. ತಲಕಾಡು ಗಂಗರಸನ ದಂಡನಾಯಕ ಚಾಮುಂಡರಾಯನ ಶೌರ್ಯ, ರಾಜನಿಷ್ಠೆ ಹಾಗೂ ಅವನ ಧಾರ್ಮಿಕ ಬದುಕನ್ನು ನಾಟಕವು ಅನಾವರಣಗೊಳಿಸಿದೆ,

Advertisements

ಚಾವುಂಡರಾಯ ಒಬ್ಬ ಸೇನಾ ದಂಡನಾಯಕನಾಗಿ ವೈರಿಗಳ ನಿಗ್ರಹ ಹಾಗೂ ಸಾಮ್ರಾಜ್ಯದ ರಕ್ಷಣೆಗೆ ಅನಿವಾರ್ಯವಾಗಿ ಹಿಂಸೆ ಮಾಡುತ್ತಾನೆ. ಹಿಂಸೆಯಿಂದ ಮನನೊಂದು ಅಹಿಂಸೆಯತ್ತ ಪಯಣಿಸುವ ಹಾಗೂ ಶ್ರವಣಬೆಳಗೊಳದಲ್ಲಿ ಬಾಹುಬಲಿ ಮೂರ್ತಿಯನ್ನು ಕೆತ್ತಿಸಲು ಪ್ರೇರಣೆ ಹಾಗೂ ಸಾಧನೆಯ ಎಲ್ಲ ವಿವರಗಳು ನಾಟಕದಲ್ಲಿ ಪ್ರತಿಬಿಂಬಿತವಾಗಿದೆ.

ಅನುಭವಿ ಯುವ ಕಲಾವಿದರ ಅಭಿನಯ, ಉತ್ತಮ ಸಂಗೀತ, ವಸ್ತ್ರಾಲಂಕಾರ, ಬೆಳಕು ಹಾಗೂ ರಂಗ ಸಜ್ಜಿಕೆಯ ಶ್ರೀಮಂತಿಕೆ ನಾಟಕವನ್ನು ಬಹಳ ಆಕರ್ಷಣೀಯವಾಗಿಸಿವೆ.

ಚಾವುಂಡರಾಯನಾಗಿ ಪವನ್, ಜನ್ನ ಕವಿಯಾಗಿ ಪ್ರವೀಣ್, ಮಾರಸಿಂಹನಾಗಿ ಆನಂದ್ ಸೇರಿದಂತೆ ಎಲ್ಲ ಕಲಾವಿದರು ನಟಿಸಿದರು.

ವರದಿ: ಮಹಮ್ಮದ್ ಅಜರುದ್ದೀನ್, ಸಿಟಿಜನ್ ಜರ್ನಲಿಸ್ಟ್, ಅಕ್ಕಿ ಹೆಬ್ಬಾಳು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ....

ಗದಗ | ಹಾಸ್ಟೆಲ್‌ ವಿದ್ಯಾರ್ಥಿನಿ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೆರ ಹಟ್ಟಿಯ ವರ್ಷಿತಾ ಎಂಬ ಪದವಿ...

ಬೆಳ್ತಂಗಡಿ | ಸೌಜನ್ಯ ಹೋರಾಟಗಾರರ ಮೇಲೆ ನಿರಂತರ ಎಫ್‌ಐಆರ್: ಗಿರೀಶ್ ಮಟ್ಟಣ್ಣನವರ್ ಆಕ್ರೋಶ

ಗುರುವಾರ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಪೊಲೀಸರ...

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

Download Eedina App Android / iOS

X