ಯಾವುದೇ ಸರ್ಕಾರ ಬರಲಿ ರೈತರನ್ನು, ಕಾರ್ಮಿಕರನ್ನು ಶೋಷಣೆ ಮಾಡುವವರೇ. ಸಂಯುಕ್ತ ಹೋರಾಟ – ಕರ್ನಾಟಕದ ಬ್ಯಾನರಿನ ಅಡಿಯಲ್ಲಿ ಎಲ್ಲಾ ಸಂಘಟನೆಗಳು ಸೇರಿ ಹೋರಾಟ ಮಾಡುತ್ತಿದ್ದೇವೆ. ಇವತ್ತಿನ ಸ್ಥಿತಿಯಲ್ಲಿ ನಾವು ಒಟ್ಟಾಗುವುದು ಅನಿವಾರ್ಯವಾಗಿದೆ. ಎಲ್ಲ ಸೇರಿ ಹೋರಾಟ ಮಾಡಿದರೆ ಬೆಲೆ ಇದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಕೆಂಪೂಗೌಡ ಹೇಳಿದರು.
ಅವರು ರೈತ, ಕಾರ್ಮಿಕ, ದಲಿತ ಸಂಘಟನೆಗಳ ಒಕ್ಕೂಟದ ಸಂಯುಕ್ತ ಕಿಸಾನ್ ಮೋರ್ಚಾದ ಕರೆಯ ಮೇರೆಗೆ ದೇಶದ್ಯಾಂತ ಜಿಲ್ಲಾಧಿಕಾರಿ ಕಛೇರಿಗಳ ಬಳಿ ಪ್ರತಿಭಟನೆ ನಡೆಯಿತು. ಮಂಡ್ಯದ ಜಿಲ್ಲಾಧಿಕಾರಿ ಕಛೇರಿ ಬಳಿ ರೈತರ ವಿವಿಧ ಸಮಸ್ಯೆಗಳ ಬಗೆ ನಡರದ ಪ್ರತಿಭಟನೆ ನಡೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಮಂಡ್ಯ ಜಿಲ್ಲಾ ರೈತ ಸಂಘವು ಕೂಡ ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಹೋರಾಟದಲ್ಲಿ ಭಾಗಿಯಾಯಿತು.

ನಾವು ಮಾಡಿದ್ದೇ ಕಾನೂನು ಎಂಬ ಧೋರಣೆ ಒಕ್ಕೂಟ ಸರ್ಕಾರಕ್ಕೆ ಇತ್ತು. ಎಲ್ಲಾ ಸಂಘಟನೆಗಳ ಪ್ರಜ್ಣೆಯಿಂದ ಅದನ್ನು ಪ್ರಶ್ನೆ ಮಾಡುವ ವಿರೋಧ ಪಕ್ಷವನ್ನು ಆಯ್ಕೆ ಮಾಡಿದ್ದೇವೆ. ವಿರೋಧ ಪಕ್ಷ ಸಕ್ರಿಯವಾಗಿ ಕೆಲಸ ಮಾಡಿದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ಬೆಲೆ ಬರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆಗಳು ನಿರಂತರವಾಗಿ ಚಳುವಳಿಗಳನ್ನು ಮಾಡೋಣ ಎಂದರು.
ಕರ್ನಾಟಕ ಸಿದ್ದರಾಜು ಮಾತನಾಡಿ, ಸರ್ಕಾರಗಳ ನೀತಿಯೇ ರೈತ, ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿ ಮಾಡುವುದಾಗಿದೆ. ನಾವೆಲ್ಲ ಒಟ್ಟಾಗಿ ಹೋರಾಟದ ನಿರಂತರತೆಯನ್ನು ಕಾಪಾಡಿಕೊಳ್ಳಬೇಕಿದೆ. ಜನ ವಿರೋಧಿ ಸರ್ಕಾರಗಳನ್ನು ಕಿತ್ತೊಗೆಯಬೇಕು. ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳ ಕಿವಿ ಹಿಂಡಿ ಬಡಿದೆಬ್ಬಿಸಬೇಕಿದೆ. ನಮ್ಮ ನಡೆ ಮುಂಬರುವ ಸರಕಾರಗಳಿಗೆ ಎಚ್ಚರಿಕೆಯಾಗಬೇಕು. ಅವು ಎಚ್ಚೆತ್ತುಕೊಂಡು ನೀಡಬೇಕಿದೆ ಎಂದು ಕರೆ ನೀಡಿದರು.
ಇದನ್ನು ಓದಿದ್ದೀರಾ? ಮಂಡ್ಯ | ಶಾಲೆಯಲ್ಲಿ ಗಿಡ ಬೆಳೆಸಿದರೆ 6 ಸಾವಿರ ಸ್ಕಾಲರ್‌ಷಿಪ್!
ಕರ್ನಾಟಕ ಶ್ರಮಿಕ ಶಕ್ತಿಯ ವರದರಾಜೇಂದ್ರ ಮಾತನಾಡಿ, ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಕೊಡದಿರುವುದರಿಂದ ರೈತರಿಗೆ ನಷ್ಟ ಉಂಟಾಗಿದೆ. ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಕೂಡ ಕೊಡುತ್ತಿಲ್ಲ. ಈ ನಡೆಗಳಿಂದ ಕಾರ್ಮಿಕರ ಬದುಕು ದುರ್ಬಲವಾಗಿದೆ. ಈ ಕೂಡಲೇ ಒಕ್ಕೂಟ ಹಾಗೂ ರಾಜ್ಯ ಸರ್ಕಾರಗಳು ರೈತ-ಕಾರ್ಮಿಕ ವಿರೋಧಿ ಕಾನೂನುಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಎಲ್ಲಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆಯನ್ನು ಕಾನೂನು ಬದ್ಧಗೊಳಿಸಿ. 4 ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಿ. ಯಾವುದೇ ರೂಪದಲ್ಲಿ ಕಾರ್ಮಿಕರಿಗೆ ಗುತ್ತಿಗೆ ಇಲ್ಲವೇ ಹೊರಗುತ್ತಿಗೆ ಇರಬಾರದು. ರಾಷ್ಟ್ರೀಯ ಕನಿಷ್ಠ ವೇತನ ತಿಂಗಳಿಗ 26 ಸಾವಿರದ ಜಾರಿಗೊಳಿಸಿ. ಪಿಂಚಣಿ ತಿಂಗಳಿಗೆ 10 ಸಾವಿರ ಮತ್ತು ಅಸಂಘಟಿತ ಕಾರ್ಮಿಕರು, ಕೃಷಿ ವಲಯ ಎಲ್ಲಾ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಯನ್ನು ಒದಗಿಸಿ. ಸಾಲ ಭಾದೆ ಮತ್ತು ಆತ್ಮಹತ್ಯೆಗಳನ್ನು ಕೊನೆಗೊಳಿಸಲು ರೈತ ಮತ್ತು ಕೃಷಿ ಕಾರ್ಮಿಕರ ಸಮಗ್ರ ಸಾಲ ಮನ್ನಾ ಮಾಡಿ. ರೈತರಿಗೆ ಮತ್ತು ಕಾರ್ಮಿಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳನ್ನು ಖಚಿತಪಡಿಸಿ ಮುಂತಾದ ಹಕ್ಕೊತ್ತಾಯಗಳನ್ನು ಮಂಡಿಸಿದರು.

ಈ ಹೋರಾಟದಲ್ಲಿ ಮಹಿಳಾ ಮುನ್ನಡೆಯ ಪೂರ್ಣಿಮಾ, ಪ್ರಾಂತ ಕೂಲಿಕಾರ ಸಂಘಟನೆಯ ಶಿವಕುಮಾರ್, ಭರತ್‌ರಾಜ್, ರಾಜ್ಯ ರೈತ ಸಂಘದ ಎಣ್ಣೆಹೊಳೆ ಮಂಜು, ರಘು, ಕರ್ನಾಟಕ ಶ್ರಮಿಕ ಶಕ್ತಿ, ಸಿಐಟಿಯು, ಕನ್ನಡ ಪರ ಸಂಘಟನೆ, ಜನವಾದಿ ಸಂಘಟನೆ ಇನ್ನೂ ಮುಂತಾದ ಸಂಘಟನೆಯ ಸದಸ್ಯರು ಭಾಗವಹಿಸಿದ್ದರು.