ನಮ್ಮ ಹಿರಿಯರ ತ್ಯಾಗ ಬಲಿದಾನದ ಮುಂಖಾತರ ನಮಗೆ ಸ್ವತಂತ್ರ ದೊರೆತು 77 ವರ್ಷ ಕಳೆದು 78 ರ ಆಚರಣೆ ಅಂಗವಾಗಿ ‘ನಮ್ಮ ಸಮರ್ಪಣಾ ನಡೆ ಭಾರತದ ಕಡೆ’ ಎಂಬ ಘೋಷಣೆಯೊಂದಿಗೆ ನಾವೊಂದು ಸದೃಢ, ಸಮೃದ್ದ ಭಾರತ ಕಟ್ಟಲು ಶ್ರೀರಂಗಪಟ್ಟಣದ ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ್ ವೃತ್ತದಿಂದ ಯುವಜನ ಕೇಂದ್ರದೆಡೆಗೆ ಮೆರವಣಿಗೆ ಮಾಡಲಾಯಿತು.
ವಂದೇ ಮಾತರಂ, ಭಾರತ್ ಮಾತಾಕೀ ಜೈ, ಗಾಂಧಿಜೀಕಿ ಜೈ, ಅಂಬೇಡ್ಕರಜೀ ಕಿ ಜೈ, ಸುಭಾಸ್ ಚಂದ್ರ ಬೋಸ್ ಕಿ ಜೈ ಹೀಗೆ ಸ್ವಾತಂತ್ರ ಹೋರಾಟ ಮಹಾ ನಾಯಕರನ್ನ ನೆನೆಯುತ್ತಾ ಜೈ ಘೋಷ ಹಾಕಿ ಗಾಂಧಿ, ಅಂಬೇಡ್ಕರ್ ಭಾವಚಿತ್ರವಿಡಿದು ಪಟ್ಟಣದ ಮುಖ್ಯ ರಸ್ತೆಯಲ್ಲಿ ಶ್ರೀರಂಗಪಟ್ಟಣದಲ್ಲಿ ಹೆಜ್ಜೆ ಹಾಕಿದರು.
ಬ್ರಿಟೀಷರ ಎದುರು ಸ್ವತಂತ್ರ ಸಮರ ಸಾರಿ, ಭಾರತದಿಂದಲೇ ಹೊರ ಹಾಕಬೇಕೆಂದು ಯುದ್ಧದಲ್ಲೇ ಸಾವನ್ನಪ್ಪಿದ ಟಿಪ್ಪು ಸ್ವತಂತ್ರ ಹೋರಾಟಗಾರ. ಇಂತಹ ಭೂಮಿಯಲ್ಲಿ ಮಧ್ಯರಾತ್ರಿ ಧ್ವಜಾರೋಹಣ ಸಂತಸದ ಕ್ಷಣ ಎಂದು ಮೆರವಣಿಗೆಗೆ ಚಾಲನೆ ನೀಡಿದ ವಕೀಲ ಸಿ ಎಸ್ ವೆಂಕಟೇಶ್ ಹೇಳಿದರು.

ನಂತರ ಯುವಜನ ಕೇಂದ್ರದಲ್ಲಿ ಮಧ್ಯರಾತ್ರಿ 12ಕ್ಕೆ ಡಾಕ್ಟರ್ ಕೆ ವೈ ಶ್ರೀನಿವಾಸ್ ಧ್ವಜಾರೋಹಣ ನೆರವೇರಿಸಿ ರಾಷ್ಟ್ರ ಗೀತೆ ಹಾಡಿದರು. ಡಾಕ್ಟರ್ ಬಿ ಸುಜಯ್ ಕುಮಾರ್, ಪ್ರೊಫೆಸರ್ ಇಲ್ಯಾಸ್ ಅಹಮದ್ ಖಾನ್ ಮಾತನಾಡಿದರು.
ಕಾರ್ಯಕ್ರಮಕ್ಕೆ ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್ ಸ್ವಾಗತ ಕೋರಿದರು. ಕೆ ಶೆಟ್ಟಹಳ್ಳಿ ಅಪ್ಪಾಜಿ ವಂದನಾರ್ಪಣೆ ಸಲ್ಲಿಸಿದರು. ರಂಗನಾಯಕಿ ಸಮಾಜದ ಸರಸ್ವತಿ, ವೆಂಕಟಮ್ಮ, ಸುಜಾತ, ಮುಸ್ಲಿಂ ಸೌಹಾರ್ದ ವೇದಿಕೆಯು ಅಧ್ಯಕ್ಷ ಅಫ್ಸರ್ ಖಾನ್, ಗಂಜಾಂ ಅಯೂಬ್, ಸಾಹಿತಿ ಶಿವಕುಮಾರ್, ಚಿಕ್ಕ ತಮ್ಮೇಗೌಡ, ರಂಗನಾಥ್, ಸೋಮು ಮತ್ತಿತರರು ಹಾಜರಿದ್ದರು.
