ಚಿತ್ರಕೂಟ ಸಂಘಟನೆ ವತಿಯಿಂದ ಮಂಡ್ಯ ತಾಲೂಕಿನ ಚಿಕ್ಕಮಂಡ್ಯ ಸರ್ಕಾರಿ ಶಾಲೆಯಲ್ಲಿ ನ.9 ಮತ್ತು 10ರಂದು ಮಿಂಚಿನ ಓಟಗಾರ ಶಂಕರ್‌ನಾಗ್ ಜನ್ಮದಿನ ಮತ್ತು ನಿತ್ಯ ಸಚಿವ ಕೆವಿ ಶಂಕರಗೌಡರ ನೆನಪಿನಲ್ಲಿ ಸಂಗೀತ, ಶ್ರಮದಾನ, ಸರ್ಕಾರಿ ಶಾಲೆಗೆ ಸುಣ್ಣ ಬಣ್ಣ ಬಳಿಯುವ ‘ಶಂಕರ ನಿರಂತರ’ ಕಾರ್ಯಕ್ರಮ ನಡೆಯಲಿದೆ.
ಸದರಿ ದಿನಗಳಂದು ಪಿಇಎಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಶ್ರಮದಾನ ಕಾರ್ಯಕ್ರಮ ನಡೆಯಲಿದ್ದು, ಸಂಜೆ ವೇದಿಕೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಕ್ರೀಡಾ ಮತ್ತು ಯುವಜನ ಇಲಾಖೆ ಸಹಾಯಕ ನಿರ್ದೇಶಕ ಓಂ ಪ್ರಕಾಶ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಿವರಾಮೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವು, ಕೀಲು ಮತ್ತು ಮೂಳೆ ರೋಗ ತಜ್ಞ ಡಾ.ರವಿಕುಮಾರ್, ಕನ್ನಡ ಮನಸ್ಸುಗಳು ಪವನ್ ಧರೆಗುಂಡಿ, ಗಂಧದಗುಡಿ ಕನ್ನಡ ಬಳಗದ ನಿತಿನ್ ಭಾಗವಹಿಸಲಿದ್ದಾರೆ.
ಭರವಸೆ, ಸಮರ್ಪಣಾ ಸಂಸ್ಥೆ, ಆರ್ಟ್ 4ಯು, ನಮ್ಮ ನಾಡು ನಮ್ಮ ಅಳ್ವಿಕೆ ಬಳಗ ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಕರ್ನಾಟಕ ಜನಶಕ್ತಿ ಹೋರಾಟಗಾರ್ತಿ ಪೂರ್ಣಿಮ, ಕರುನಾಡ ಸೇವಕರು ಸಂಘಟನೆಯ ಎಂ.ಬಿ. ನಾಗಣ್ಣಗೌಡ, ರೈತರ ಶಾಲೆ ಮುಖ್ಯಸ್ಥ ಪ್ರೊ.ಸತ್ಯಮೂರ್ತಿ ಭಾಗವಹಿಸುವರು.
ನ.10ರಂದು ಸಂಜೆ 4 ಗಂಟೆಗೆ ಜಿ.ಪಂ.ಸಿಇಓ ಶೇಖ್ ತನ್ನೀರ್ ಅಸೀಫ್ ಸಮಾರಂಭ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಪಿಇಟಿ ಅಧ್ಯಕ್ಷ ಕೆ.ಎಸ್. ವಿಜಯಾನಂದ ಭಾಗವಹಿಸುವರು. ತಾ.ಪಂ.ಇಓ ವೀಣಾ ಆಶಯ ನುಡಿ ನುಡಿಯುವರು. ಕೆ.ವಿ. ಶಂಕರಗೌಡರು ಮತ್ತು ಆಧುನಿಕ ಮಂಡ್ಯ ಕುರಿತು ವಕೀಲ ಜೀರಹಳ್ಳಿ ರಮೇಶ್ ಗೌಡ, ಉತ್ತಮ ಸಮಾಜ ನಿರ್ಮಾಣಕ್ಕೆ ಯುವಜನರ ಪಾತ್ರ ಕುರಿತು ಕವಿ ಮತ್ತು ರಾಜೇಂದ್ರ ಪ್ರಸಾದ್, ಸಮಾಜಮುಖಿ ಶಂಕರ್ ನಾಗ್ ಒಂದು ಅವಲೋಕನ ಕುರಿತು ಸಾಮಾಜಿಕ ಚಿಂತಕ ವಿನಯ್ ಕುಮಾರ್ ವಿಶೇಷ ಉಪನ್ಯಾಸ ನೀಡುವರು.
ಇದನ್ನು ಓದಿದ್ದೀರಾ? ಕೋವಿಡ್ ಹಗರಣ | ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಕಾನೂನು ಕ್ರಮಕ್ಕೆ ನ್ಯಾ. ಡಿ’ಕುನ್ಹಾ ಆಯೋಗ ಶಿಫಾರಸು
ಚಿಕ್ಕಮಂಡ್ಯ ಗ್ರಾ.ಪಂ.ಅಧ್ಯಕ್ಷ ಆನಂದ್ ಪಿ, ಚಿಕ್ಕಮಂಡ್ಯ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಚ್.ಎನ್ ದೇವರಾಜು, ಎಡಿಎಂಸಿ ಅಧ್ಯಕ್ಷ ಮಹೇಶ್ ಸಿ.ಎಂ, ನುಡಿ ಕರ್ನಾಟಕ ಸಂಪಾದಕ ಸಂತೋಷ್ ಜಿ ಹಾಗೂ ಪರಿಚಯ ಪ್ರಕಾಶನ ಶಿವಕುಮಾರ್ ಆರಾಧ್ಯ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
