ಮಂಗಳೂರು | ಸೀರತ್ ಅಭಿಯಾನ ಪ್ರಯುಕ್ತ ಕುಪ್ಪೆಪದವಿನಲ್ಲಿ ಸಾರ್ವಜನಿಕ ಸಭೆ

Date:

Advertisements

ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ರಾಜ್ಯ ಅಭಿಯಾನ ಪ್ರವಾದಿ ಮುಹಮ್ಮದ್ (ಸ) ಮಹಾನ್ ಚಾರಿತ್ರ್ಯವಂತ ರಾಜ್ಯ ಸೀರತ್ ಅಭಿಯಾನ ಹಾಗೂ ಮಹಿಳಾ ವಿಭಾಗದ ವತಿಯಿಂದ ನೈತಿಕತೆಯೇ ಸ್ವಾತಂತ್ರ್ಯ ರಾಷ್ಟ್ರ ಅಭಿಯಾನದ ಅಂಗವಾಗಿ ಜಮಾಅತೆ ಇಸ್ಲಾಮೀ ಹಿಂದ್ ಎಡಪದವು ವರ್ತುಲದ ವತಿಯಿಂದ ಕುಪ್ಪೆಪದವು ಜಂಕ್ಷನ್‌ನಲ್ಲಿ ಸಾರ್ವಜನಿಕ ಸಭೆ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಪ್ರಾಧ್ಯಾಪಕರಾದ ಡಾ. ಸುರೇಶ್ ವೈ. ಮಾತನಾಡಿ, “ಸಮಾಜದಲ್ಲಿ ಸೌಹಾರ್ದತೆಗೆ ಒತ್ತು ನೀಡುವ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಬೇಕು. ದೈಹಿಕ ಆರೋಗವನ್ನು ರಕ್ಷಿಸುವ ವೈದ್ಯರು ಸಮಾಜದ ಆರೋಗ್ಯವನ್ನು ಕೂಡಾ ಕಾಪಾಡುವ ಹೊಣೆ ಉಳ್ಳವರಾಗಿದ್ದಾರೆ” ಎಂದರು.

ನೈತಿಕತೆಯೇ ಸ್ವಾತಂತ್ರ್ಯ ವಿಚಾರವಾಗಿ ಅನುಪಮ ಮಹಿಳಾ ಮಾಸಿಕದ ಉಪ ಸಂಪಾದಕಿ ಸಬೀಹಾ ಫಾತಿಮಾ ಮಾತನಾಡಿ, “ನಮ್ಮ ಹುಟ್ಟು ಹೇಗಿರಬೇಕೆಂಬ ಸ್ವಾತಂತ್ರ್ಯ ನಮಗಿರಲಿಲ್ಲ. ಆದರೆ, ಹುಟ್ಟಿದ ನಂತರ ಹೇಗೆ ಜೀವಿಸಬೇಕೆಂಬ ಸ್ವಾತಂತ್ರ್ಯ ಇದೆ. ಈ ಸ್ವಾತಂತ್ರ್ಯ ಕೆಡುಕನ್ನು ಪಸರಿಸಲಿಕ್ಕಾಗಿ ಅಲ್ಲ, ಅನೈತಿಕತೆಯನ್ನು ಬೆಳೆಸಲಿಕ್ಕಾಗಿಯೂ ಅಲ್ಲ. ಈ ಸ್ವಾತಂತ್ರ್ಯ ನೈತಿಕ ಮೌಲ್ಯಗಳೊಂದಿಗೆ ಬದುಕಲಿಕ್ಕಾಗಿ, ಪರಸ್ಪರ ಗೌರವವನ್ನು ಬೆಳೆಸಲಿಕ್ಕಾಗಿ ಆಗಿದೆ” ಎಂದರು.

Advertisements
ಸೀರತ್ ಅಭಿಯಾನ

ಪಾದುವ ಪ್ರೌಢಶಾಲೆಯ ನಿವೃತ್ತ ಶಿಕ್ಷಕರಾದ ಗ್ರೆಗರಿ ರೊಸಾರಿಯೋ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸನ್ಮಾರ್ಗ ವಾರಪತ್ರಿಕೆಯ ಸಂಪಾದಕರೂ, ಲೇಖಕರೂ ಆದ ಎ.ಕೆ ಕುಕ್ಕಿಲ ಮಾತನಾಡಿ, “ಯುವಕರಲ್ಲಿ ಆವೇಶವನ್ನು ತುಂಬುವ ಸಲುವಾಗಿ ವೇದಿಕೆಗಳನ್ನು ಸಜ್ಜುಗೊಳಿಸಲಾಗುತ್ತಿರುವ ಈ ಸನ್ನಿವೇಶದಲ್ಲಿ ನೈತಿಕತೆಯ ವಿಚಾರವನ್ನಿಟ್ಟು ಕಾರ್ಯಕ್ರಮ ರೂಪಿಸಿರುವುದು ಶ್ಲಾಘನೀಯ. ನಂಬಿಕೆ ಕಳೆದುಕೊಂಡಿರುವ, ಸುಳ್ಳು ವ್ಯಾಪಕವಾಗಿರುವ ಸಮಾಜದಲ್ಲಿ ಸತ್ಯವನ್ನು ಪಸರಿಸುವುದು ಮತ್ತು ನೈತಿಕತೆಯನ್ನು ಬೆಳೆಸುವುದು ಅನಿವಾರ್ಯವಾಗಿದೆ. ವ್ಯಕ್ತಿಗಳ ಚಾರಿತ್ರ್ಯ ನಾಶವಾಗುತ್ತಿದೆ. ಮೌಲ್ಯಗಳು ಅಧಪತನವಾಗುತ್ತೆದೆ. ಇದನ್ನಉ ಬದಲಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ” ಎಂದರು.

ಕಾರ್ಯಕ್ರಮದಲ್ಲಿ ಯುವ ಲೇಖಕ ಅಬೂ ಝೀಶಾನ್ ಬರೆದಿರುವ “ಸ್ನೇಹದ ಪ್ರತೀಕ ಪ್ರವಾದಿ ಮುಹಮ್ಮದ್ (ಸ)” ಪುಸ್ತಕ ಬಿಡುಗಡೆ ನಡೆಯಿತು. ವೇದಿಕೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಎಡಪದವು ವರ್ತುಲದ ಸಂಚಾಲಕರಾದ ಝಾಕಿರ್ ಹಸನ್, ಹಮ್ದ್ ಎಜುಕೇಶನಲ್-ಚಾರಿಟೇಬಲ್ ಟ್ರಸ್ಟ್ ಕುಪ್ಪೆಪದವು ಅಧ್ಯಕ್ಷರಾದ ಇಸ್ಮಾಯಿಲ್ ಶರೀಫ್ ಉಪಸ್ಥಿತರಿದ್ದರು.

ಇದನ್ನು ಓದಿದ್ದೀರಾ? ಬೆಂಗಳೂರು | ಯುವತಿ ಮಹಾಲಕ್ಷ್ಮೀ ಕೊಲೆ ಪ್ರಕರಣ: ಆರೋಪಿಯ ಮಾಹಿತಿ ಲಭ್ಯ ಎಂದ ಕಮಿಷನರ್

ಕಾರ್ಯಕ್ರಮದಲ್ಲಿ ಮಾ. ಮುಬಾರಿಝ್ ಕಿರಾಅತ್ ಪಠಿಸಿದರು, ಹೈದರ್ ಎಡಪದವು ಸ್ವಾಗತಿಸಿದರು, ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಝೇಶನ್ ಕುಪ್ಪೆಪದವು ಸಂಚಾಲಕ ಅರ್ಫಾಝ್ ಕಲಾಯಿ ಪ್ರಾಸ್ತಾವಿಕ ಭಾಷಣ ಮಾಡಿದರು. ಮುನೀರ್ ಪದ್ರೆಂಗಿ ಕಾರ್ಯಕ್ರಮ ನಿರೂಪಿಸಿದರು, ರಮೀಝ್ ಕಲಾಯಿ ಧನ್ಯವಾದವಿತ್ತರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಗಳೂರು | ನ್ಯಾಯಬೆಲೆ ಅಂಗಡಿಯಲ್ಲಿ ‘ಗೋಣಿಚೀಲ’ಕ್ಕಾಗಿ ಜಗಳ: ಮಹಿಳೆಯ ವಿಡಿಯೋ ಮಾಡಿ ತೇಜೋವಧೆಗೆ ಯತ್ನ!

ನ್ಯಾಯಬೆಲೆ ಅಂಗಡಿಯಲ್ಲಿ 'ಗೋಣಿಚೀಲ' ನೀಡುವಂತೆ ಪಟ್ಟು ಹಿಡಿದದ್ದಲ್ಲದೇ, ಗ್ರಾಹಕನೋರ್ವ ನ್ಯಾಯಬೆಲೆ ಅಂಗಡಿಯವರ...

ಮೈಸೂರು | ಜಿ ಟಿ ದೇವೇಗೌಡರ ದಲಿತ ವಿರೋಧಿ ಹೇಳಿಕೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ವಿದ್ಯಾರ್ಥಿಗಳು...

ಹಾವೇರಿ | ಗಣೇಶ ಚತುರ್ಥಿ ಪ್ರಯುಕ್ತ 265 ಹೆಚ್ಚುವರಿ ಸಾರಿಗೆ ಸೌಲಭ್ಯ

ಚತುರ್ಥಿಯ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ವಾಯವ್ಯ...

ಗದಗ | ಆಗಸ್ಟ್ 25ಕ್ಕೆ ಲೋಕಾಯುಕ್ತ ಜನ ಸಂಪರ್ಕ ಸಭೆ

ಸಾರ್ವಜನಿಕ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಲು ಆಗಸ್ಟ್ 25 ಸೋಮವಾರದಂದು  ಗದಗ ಶಿರಹಟ್ಟಿ...

Download Eedina App Android / iOS

X