ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿರುವ ಅಂಗನವಾಡಿ ಕಂ ಕ್ರಷ್ ನ 6 ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಬಬ್ಬುಕಟ್ಟೆ (ಉಳ್ಳಾಲ), ನಾಗರಕಟ್ಟೆ(ಮೂಡಬಿದ್ರೆ), ಬಂಟ್ವಾಳದ ಕೈಕುಂಜೆ, ಪುತ್ತೂರಿನ ನೆಲ್ಲಿಕಟ್ಟೆ, ಬೆಳ್ತಂಗಡಿಯ ಉದಯನಗರ, ವಿಟ್ಲ ವ್ಯಾಪ್ತಿಯ ವಿಟ್ಲ ಮಹಿಳಾ ಮಂಡಲ ಅಂಗನವಾಡಿ ಕಂ ಕ್ರಷ್‌ಗೆ ಅರ್ಜಿ ಆಹ್ವಾನಿಸಿದ್ದು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕಾರ್ಯಕರ್ತೆಯರ ಮಾಸಿಕ ಗೌರವ ಧನ ರೂ.5500 ಹಾಗೂ ಸಹಾಯಕಿಯರ ಮಾಸಿಕ ಗೌರವಧನ ರೂ.3000 ನಿಗದಿಪಡಿಸಲಾಗಿದೆ.
ಇದನ್ನು ಓದಿದ್ದೀರಾ? ಮಂಗಳೂರು | ತುಳು ಕ್ಯಾಲೆಂಡರ್ ಬಿಡುಗಡೆ
ಕಾರ್ಯಕರ್ತೆ ಹುದ್ದೆಗೆ ದ್ವಿತೀಯ ಪಿ.ಯು.ಸಿ ಹಾಗೂ ಸಹಾಯಕಿ ಹುದ್ದೆಗೆ 10ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಹೆಚ್ಚಿನ ವಿದ್ಯಾರ್ಹತೆಯನ್ನು ಪರಿಗಣಿಸುವುದಿಲ್ಲ. ಅರ್ಜಿ ಸಲ್ಲಿಸಲು ಜನವರಿ 24 ಕೊನೆಯ ದಿನದಿನವಾಗಿದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಸರಾಯಿತು ಕರ್ನಾಟಕ
— eedina.com ಈ ದಿನ.ಕಾಮ್ (@eedinanews) December 28, 2024
ಕರ್ನಾಟಕವೆಂದು ಹೆಸರಾಗಿ, 50 ವರ್ಷ ತುಂಬಿರುವ ಈ ಹೊತ್ತಲ್ಲಿ – ಇದು ಈದಿನ.ಕಾಮ್ನ ಪ್ರಯತ್ನ..
ಡಿ. 29ರಂದು ರಾಜ್ಯದ ಹಲವು ಜಿಲ್ಲಾ ಕೇಂದ್ರಗಳಲ್ಲಿ ಬಿಡುಗಡೆ ನಿಗದಿಯಾಗಲಿವೆ.
ಇಂದೇ ನಿಮ್ಮ ಪ್ರತಿ ಕಾಯ್ದಿರಿಸಿ. ಮುಂಗಡ ಬುಕ್ಕಿಂಗ್ಗೆ ಶೇ.30ರಷ್ಟು ರಿಯಾಯಿತಿ.
ಸಂಪರ್ಕಿಸಿ: 90350 53818 pic.twitter.com/uFvdjSIuw8
