ಈ ದಿನ ಡಾಟ್ ಕಾಮ್‌ನ ತುಮಕೂರು ಜಿಲ್ಲೆಯ ಹೆಲ್ಪ್‌ಲೈನ್ ಪೋಸ್ಟರ್ ಅನ್ನು ಸಹಕಾರ ಸಚಿವ ಕೆ. ಎನ್. ರಾಜಣ್ಣ ತಮ್ಮ ಗೃಹ ಕಚೇರಿಯಲ್ಲಿ ಸೋಮವಾರ ಬಿಡುಗಡೆ ಮಾಡಿದರು.
ಓದುಗರೇ ಕಟ್ಟಿಕೊಳ್ಳುತ್ತಿರುವ ಈ ದಿನ ಡಾಟ್ ಕಾಮ್ ಜನರ ಸಮಸ್ಯೆಗಳಿಗೆ ಧ್ವನಿಯಾಗಲು ಜಿಲ್ಲೆಗೊಂದು ಹೆಲ್ಪ್‌ಲೈನ್ ಆರಂಭಿಸಿದೆ. ನಗರ, ಸ್ಥಳೀಯ ಸಾರ್ವಜನಿಕ ಸಮಸ್ಯೆಗಳನ್ನು ಹೆಲ್ಪ್‌ಲೈನ್ ಸಂಖ್ಯೆ 9035053814 ಕರೆ ಮಾಡುವ ಮೂಲಕ, ಫೋಟೋ, ವಿಡಿಯೋ, ಅದಕ್ಕೆ ಸಂಬಂಧಿಸಿದ ಕಿರು ವಿವರ ಕಳಿಸಿದರೆ ಈ ದಿನ ಡಾಟ್ ಕಾಮ್‌ನಲ್ಲಿ ಪ್ರಕಟವಾಗಲಿದೆ.
ಸಹಾಯವಾಣಿಯ ಪೋಸ್ಟರ್ ಅನ್ನು ಸಹಕಾರ ಸಚಿವ ರಾಜಣ್ಣ ಬಿಡುಗಡೆ ಮಾಡಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಈದಿನ ಡಾಟ್ ಕಾಮ್ ತುಮಕೂರು ಜಿಲ್ಲಾ ಸಂಯೋಜಕ ಚಂದನ್ ಡಿ. ಎನ್, ಪತ್ರಕರ್ತ ಹರೀಶ್ ಕಮ್ಮನಕೋಟೆ ಇದ್ದರು.

