ಮೈಸೂರು | ವೈದ್ಯರ ಸಂಗೀತ ಸೌರಭ: ಗಾನ ವೈದ್ಯಲೋಕದ 5ನೇ ವಾರ್ಷಿಕೋತ್ಸವ ಸಂಭ್ರಮ

Date:

ವೈದ್ಯರು ಸೇರಿ ರಚಿಸಿರುವ ಗಾನ ವೈದ್ಯಲೋಕ ತಂಡವು ತನ್ನ 5ನೇ ವಾರ್ಷಿಕೋತ್ಸವದ ಅಂಗವಾಗಿ ಮೈಸೂರಿನ ರಾಮಕೃಷ್ಣನಗರದಲ್ಲಿರುವ ರಮಾ ಗೋವಿಂದ ರಂಗಮಂದಿರದಲ್ಲಿ ಭಾನುವಾರ ‘ಎಂದೂ ಮರೆಯದ ಹಾಡು -14ನೇ’ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತು.

- Advertisement -

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗಾನ ವೈದ್ಯಲೋಕ ಸಂಸ್ಥೆಯ ಗೌರವಾಧ್ಯಕ್ಷ ಡಾ. ವೈ.ಡಿ. ರಾಜಣ್ಣ ಮಾತನಾಡಿ, “ತಂಡದ ಎಲ್ಲಾ ಸದಸ್ಯರೂ ವೈದ್ಯರಾಗಿದ್ದು, ಸದಾ ತುರ್ತು ಸೇವೆಯಲ್ಲಿ ನಿರತರಾಗಿರುವುದರಿಂದ ಅವರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ತಾಲೀಮು ನಡೆಸುವುದು ದೊಡ್ಡ ಸವಾಲು ಎಂದು ಹೇಳಿದರು. ಇಂತಹ ಸವಾಲುಗಳ ನಡುವೆಯೇ ಸಂಸ್ಥೆ ನಾಲ್ಕು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ, ಐದನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವುದು ಗಮನಾರ್ಹ ಸಾಧನೆ” ಎಂದು ಅವರು ಅಭಿಪ್ರಾಯಪಟ್ಟರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

“ಇದುವರೆಗೆ 14 ಕಾರ್ಯಕ್ರಮಗಳನ್ನು ಆಯೋಜಿಸಿರುವ ಗಾನ ವೈದ್ಯಲೋಕ ತಂಡವು ಸಂಗೀತದ ಮೂಲಕ ಉತ್ತಮ ಬಾಂಧವ್ಯವನ್ನು ಬೆಸೆಯುವ ಕಾರ್ಯವನ್ನೂ ಮಾಡುತ್ತಿದೆ. ಯಾವುದೇ ವೃತ್ತಿಯಲ್ಲಿಯೂ ಕಲಿಕೆಯ ಮೇಲೆ ಶ್ರದ್ಧೆ ಮುಖ್ಯ ಎಂಬುದನ್ನು ವೈದ್ಯರ ಈ ತಂಡ ಸಾಬೀತುಪಡಿಸಿದೆ ಎಂದು ಅವರು ಹೇಳಿದರು. ಇತರ ಗಾಯನ ತಂಡಗಳ ಸಹಕಾರದಿಂದ ಗಾನ ವೈದ್ಯಲೋಕ ಈ ಮಟ್ಟಿಗೆ ಬೆಳವಣಿಗೆ ಕಂಡಿದೆ” ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಉದ್ಘಾಟಿಸಿದರು. ಗಾನ ವೈದ್ಯಲೋಕ ಸಂಸ್ಥೆಯ ಅಧ್ಯಕ್ಷ ಡಾ. ಟಿ. ರವಿಕುಮಾರ್ ಅವರು ಮಾತನಾಡಿದರು.

ಈ ಸುದ್ದಿ ಓದಿದ್ದೀರಾ? ಮೈಸೂರು | ಯುವಜನತೆ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು: ಡಾ. ಹೆಚ್.ವಿ. ವಾಸು

ಡಾ. ವೈ.ಡಿ. ರಾಜಣ್ಣ, ಡಾ. ಟಿ. ರವಿಕುಮಾರ್, ಡಾ. ಶಾಮ್ ಪ್ರಸಾದ್, ಡಾ. ಸುರೇಂದ್ರ, ಡಾ. ಚಿನ್ನ ನಾಗಪ್ಪ, ಡಾ. ಸುಮಾ, ಡಾ. ವಾಣಿ, ಡಾ. ಮಂಜುನಾಥ್ ಹಾಗೂ ಸಿ.ಎಸ್. ವಾಣಿ ಅವರು ಗಾಯನವನ್ನು ಪ್ರಸ್ತುತಪಡಿಸಿ ಪ್ರೇಕ್ಷಕರ ಮನ ಗೆದ್ದರು. ಕಾರ್ಯಕ್ರಮವನ್ನು ಉಪನ್ಯಾಸಕ ಯಡಿಯೂರು ಸಮಿಉಲ್ಲಾ ನಿರೂಪಿಸಿದರು.

ಪಶುಸಂಗೋಪನೆ, ವೈದ್ಯಕೀಯ, ಕೃಷಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಅವರ ಕುಟುಂಬ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಬಿಜೆಪಿ ಮತ್ತೆ ಕರೆದರೆ ಸೇರ್ಪಡೆ, ಇಲ್ಲದಿದ್ದರೆ ಕಾಂಗ್ರೆಸ್ ಅಥವಾ ಪಕ್ಷೇತರ ಆಯ್ಕೆ: ರಘುಪತಿ ಭಟ್

ಮುಂದಿನ 2028ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಆದರೆ ಯಾವ...

ಹುಬ್ಬಳ್ಳಿ | ಮಾಂಜಾ ದಾರಕ್ಕೆ ಮಹಿಳೆ ಬಲಿ

ಗಾಳಿಪಟದ ಮಾಂಜಾ ದಾರ ಮತ್ತೊಂದು ಜೀವವನ್ನು ಬಲಿ ಪಡೆದಿರುವ ಹೃದಯವಿರ್ಧಾವಕ  ಘಟನೆ...

ವಿಜಯಪುರ | ವಿಜಯಪುರಕ್ಕೆ 371(ಜೆ) ಮೀಸಲಾತಿ ನೀಡಲು ಆಗ್ರಹ; ಎಸ್.ಕೆ. ಬೆಳ್ಳುಬ್ಬಿ

ವಿಜಯಪುರ ಜಿಲ್ಲೆಯನ್ನು 371(ಜೆ) ಮೀಸಲಾತಿಯಿಂದ ಹೊರಗಿಟ್ಟಿರುವುದು ದೊಡ್ಡ ಅನ್ಯಾಯವಾಗಿದ್ದು, ರಾಜ್ಯ ಸರ್ಕಾರ...

ಹಾವೇರಿ | ಪಶ್ಚಿಮ ಪದವೀಧರರ ಕ್ಷೇತ್ರ ಚುನಾವಣೆ: ಕಾಂಗ್ರೆಸ್ ಬೆಂಬಲಿಸಲು ಡಿವೈಎಫ್ಐ-ಎಸ್ಎಫ್ಐ ಕರೆ

"ಅಕ್ಟೋಬರ್ 23 ರಂದು ನಡೆಯಲಿರುವ ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ...