ಮೈಸೂರು | ಕೈಕೊಟ್ಟ ಮುಂಗಾರು; ಆಗಸದತ್ತ ಮುಖ ಮಾಡುತ್ತಿರುವ ರೈತರು

Date:

ಮೈಸೂರು ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿದ್ದರಿಂದ ರೈತರು ಕೃಷಿ ಭೂಮಿ ಹದ ಮಾಡಿ, ತಂಬಾಕು, ಹತ್ತಿ, ಜೋಳ, ಸೂರ್ಯಕಾಂತಿ ಹಾಗೂ ದ್ವಿದಳ ದಾನ್ಯಗಳನ್ನು ಬಿತ್ತಿದ್ದರು. ಆದರೆ ಮೇ ಕೊನೆಯಿಂದ ಮಳೆ ಬೀಳದ ಹಿನ್ನೆಲೆಯಲ್ಲಿ ಬೆಳೆ ಒಣಗುತ್ತಿದ್ದು, ರೈತರು ಮಳೆ ಯಾವಾಗ ಬೀಳುತ್ತದೆಯೋ ಎಂದು ಆಗಸದತ್ತ ಮುಖ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಸ್ತುತ ವರ್ಷದಲ್ಲಿ ಮುಂಗಾರು ಆರಂಭ ದುರ್ಬಲವಾಗಿರುವ ಕಾರಣ ಮಳೆ ವಿಳಂಬವಾಗುತ್ತಿದೆ. ಕೇರಳಕ್ಕೆ ಮೊದಲ ವಾರದಲ್ಲಿ ಮಳೆ ಆಗಮಿಸಿದ್ದರೂ, ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಗಾಳಿಯ ತೀವ್ರತೆ ಇಲ್ಲದೇ ರಾಜ್ಯಕ್ಕೆ ಮುಂಗಾರು ಪ್ರವೇಶ ತಡವಾಗಿದೆ. ಹೀಗಾಗಿ ಜೂ. 10 ರಿಂದ 12ರ ಒಳಗಾಗಿ ಮಳೆ ಆಗಮಿಸುವ ನಿರೀಕ್ಷೆ ಇದೆ ಎಂದು ಹವಮಾನ ಇಲಾಖೆ ಹೇಳಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ಕಳೆದ ಏಪ್ರಿಲ್‌ನಲ್ಲಿ ಜಮೀನು ಉಳುಮೆ ಮಾಡಿ ಬಿತ್ತನೆ ಮಾಡಿದ್ದ ರೈತರು ಎರಡು ಬಾರಿ ಉಳುಮೆ ಮಾಡಿ, ರಸಗೊಬ್ಬರ ನೀಡಿದ್ದರು. ಮೇ ಅಂತ್ಯ ಮತ್ತು ಜೂನ್ ಮೊದಲ ವಾರದಲ್ಲಿ ಬೆಳೆ ಮೊಳಕೆಯೊಡೆದು, ಭೂಮಿಯಿಂದ ಮೇಲ್ಬರುವ ವೇಳೆಗೆ ಮುಂಗಾರು ಕೈಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಬೆಳೆ ಒಣಗುವಂತಾಗಿದೆ. ಪರಿಣಾಮ ಈ ಬಾರಿ ಹಲಸಂದೆ, ಎಸರು, ಉದ್ದು, ಸೂರ್ಯಕಾಂತಿ, ಹತ್ತಿ, ಜೋಳ ಹಾಗೂ ತಂಬಾಕು ಬೆಳೆಯಲ್ಲಿ ಇಳುವರಿ ಕುಂಠಿತಗೊಳ್ಳುವ ಭೀತಿ ಎದುರಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬಿಸಿಲಿನ ತೀವ್ರತೆ ಹೆಚ್ಚು

“ಜಿಲ್ಲೆಯಲ್ಲಿ ಬೇಸಿಗೆ ಕಳೆದು ಮಳೆಗಾಲ ಆರಂಭವಾದರೂ ಬೇಸಿಗೆಯ ವಾತಾವರಣ ಮುಂದುವರೆದಿದೆ. ಸಾಮಾನ್ಯವಾಗಿ 33 ಸೆಲ್ಸಿಯಸ್ ಉಷ್ಣಾಂಶವಿದ್ದರೆ, 36ರಿಂದ 38 ಉಷ್ಣಾಂಶದಷ್ಟು ತಾಪಮಾನದ ಅನುಭವ ಕಂಡುಬರುತ್ತಿದೆ. ಪರಿಣಾಮ ಮಳೆಗಾಲದಲ್ಲೂ ಬೇಸಿಗೆ ವಾತಾವರಣವಿದ್ದು, ಬಿಸಿಲಿನ ತೀವ್ರತೆ ಹೆಚ್ಚಿದೆ. ಪರಿಣಾಮ ನೀರಿಲ್ಲದೆ ಬೆಳೆ ಬಾಡುವಂತಾಗಿದೆ. ಒಂದು ವೇಳೆ ಜೂನ್ ಮಧ್ಯದಲ್ಲಿ ಮಳೆಯಾಗದೇ ಇದ್ದರೆ ಬೆಳೆ ಸಂಪೂರ್ಣವಾಗಿ ಒಣಗುವ ಸಾಧ್ಯಯತೆಗಳಿವೆ” ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬಿಪರ್‌ಜಾಯ್‌ ಚಂಡಮಾರುತ; ಕೆಲವೆಡೆ ಸೃಷ್ಟಿಯಾದ ಅವಾಂತರ

ವಾಡಿಕೆಯಂತೆ ಈ ಬಾರಿ ಮಳೆ ಕಡಿಮೆಯಾಗಿದ್ದು, ಇದು ಜೂನ್ ತಿಂಗಳಿಗೂ ಮುಂದುವರೆಯುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 2022 ಮಾರ್ಚ್‌ನಲ್ಲಿ 30.1 ಮಿಮೀ ಮಳೆಯಾಗಿದ್ದರೆ ಈ ಬಾರಿಯ ಮಾರ್ಚ್‌ನಲ್ಲಿ 15.7 ರಷ್ಟು ಮಳೆಯಾಗಿದೆ. ಹಾಗೆಯೇ ಕಳೆದ ವರ್ಷದ ಏಪ್ರಿಲ್‌ನಲ್ಲಿ 71.6 ರಷ್ಟು ಮಳೆಯಾಗಿದ್ದರೆ, ಈ ಬಾರಿ 33.7 ರಷ್ಟು ಹಾಗೂ ಕಳೆದ ವರ್ಷದ ಮೇ ತಿಂಗಳಿನಲ್ಲಿ 251.6 ಮಿಮೀ ಮಳೆಯಾಗಿದ್ದು, ಈ ಬಾರಿ 155.7 ಮಿಮೀ ಮಳೆಗೆ ಕುಸಿತ ಕಂಡಿದೆ. ಒಟ್ಟಾರೆ ಕಳೆದ ವರ್ಷ 383.5ರಷ್ಟು ಮಳೆಯಾಗಿದ್ದರೆ, ಈ ಬಾರಿ 220 ಮಿಮೀ ನಷ್ಟು ಕಡಿಮೆ ಮಳೆಯಾಗಿದೆ.

ಹಿಂಗಾರಿನಲ್ಲೂ ಮಳೆ ಕೊರತೆ
2022ರ ಹಿಂಗಾರಿನಲ್ಲೂ ಜಿಲ್ಲೆಯಲ್ಲಿ ರೈತರು ಉತ್ತಮ ಮಳೆ ಬಾರದೆ ನಷ್ಟ ಅನುಭವಿಸಿದ್ದರು. ಸೆಪ್ಟಂಬರ್, ನವೆಂಬರ್‌ನಲ್ಲಿ ಉತ್ತಮ ಮಳೆ ಬೀಳದ ಪರಿಣಾಮ ರಾಗಿ, ಜೋಳ, ಹತ್ತಿ, ಹುರುಳಿ, ಅವರೆ ಸೇರಿದಂತೆ ಇತರೆ ಬೆಳೆಗಳಲ್ಲಿ ವಾಡಿಕೆಗಿಂತ ಕಡಿಮೆ ಇಳುವರಿ ಬಂದಿದ್ದರಿಂದ ರೈತರು ನಷ್ಟಕ್ಕೀಡಾಗಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚೊಂಬು, ಗ್ಯಾಸ್ ಹೊರತುಪಡಿಸಿ ಶಾಂತಿಯುತ ಮತದಾನಕ್ಕೆ ಸಾಕ್ಷಿಯಾದ ಬೆಂಗಳೂರು

ಲೋಕಸಭಾ ಚುನಾವಣೆ ಹಿನ್ನೆಲೆ, ರಾಜ್ಯದ 14 ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮೊದಲ...

ಕಸ ಸುರಿಯುವ ಜಾಗವಾಗಿ ಮಾರ್ಪಟ್ಟ ಬೆಂಗಳೂರಿನ ಮೇಲ್ಸೇತುವೆಗಳು!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ವಾಹನ ಸವಾರರಿಗೆ ಸಂಚಾರ ದಟ್ಟಣೆ ತಲೆನೋವಾಗಿ ಪರಿಣಮಿಸಿದೆ....

ರಾಯಚೂರು | ಅಬಕಾರಿ ಇಲಾಖೆ ದಾಳಿ; ₹500 ಮುಖಬೆಲೆಯ ನೋಟಿನ 62 ಬಂಡಲ್ ಪತ್ತೆ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೌಳಿಗಲ್ಲಿಯ ಗೌಳಿಯೊಬ್ಬರ ಮನೆಯಲ್ಲಿ ಗೋಣಿ ಚೀಲದ...