ಮೈಸೂರಿನಲ್ಲಿ ಅಕ್ಟೋಬರ್ 7ರಿಂದ 13ನೇ ತಾರೀಖಿನವರೆಗೆ ಮೈಸೂರು ಟೆನಿಸ್ ಕ್ಲಬ್ ಕ್ರೀಡಾಂಗಣದಲ್ಲಿ, ಇಂಟರ್ ನ್ಯಾಷನಲ್ ಟೆನಿಸ್ ಫೆಡರೇಷನ್ ವತಿಯಿಂದ ‘ಐಟಿಎಫ್ ಹಬ್ಬ’ ಟೆನಿಸ್ ಪಂದ್ಯಾವಳಿಗಳು ನಡೆದವು.
ಮಹಿಳಾ ವಿಭಾಗದಲ್ಲಿ ನಡೆದ ಪಂದ್ಯಗಳಲ್ಲಿಅಮೇರಿಕ, ಜಪಾನ್, ಚೀನಾ, ಭಾರತ ದೇಶಗಳ ಆಟಗಾರ್ತಿಯರು ಐಟಿಎಫ್ ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದರು. ಟೆನಿಸ್ ಕ್ರೀಡಾ ಪ್ರೇಮಿಗಳು ಪಂದ್ಯಾವಳಿಯಲ್ಲಿ ನೆರೆದು ಆಟಗಾರರಿಗೆ ಸ್ಪೂರ್ತಿ ತುಂಬಿದರು.
ಫೈನಲ್ ಪಂದ್ಯವು ಅತ್ಯಂತ ರೋಚಕವಾಗಿದ್ದು ಒಂದೂವರೆ ಗಂಟೆಗಳ ಕಾಲ ನಡೆದು, ಅಮೇರಿಕಾದ ಜೆಸ್ಸಿ ಅನೈ ಗೆಲವು ಸಾಧಿಸಿದರು.
ಇದನ್ನು ಓದಿದ್ದೀರಾ? ಬಂಟ್ವಾಳ | ಚಾಲಕನ ನಿಯಂತ್ರಣ ತಪ್ಪಿ ಅಡಿಕೆ ತೋಟಕ್ಕೆ ನುಗ್ಗಿದ ಕಾರು: ಮಹಿಳೆ ಸಾವು
ಪಂದ್ಯಾವಳಿಯಲ್ಲಿ ಜಿಲ್ಲಾಧಿಕಾರಿ ಡಾ ಜಿ ಲಕ್ಷ್ಮಿಕಾಂತ ರೆಡ್ಡಿ, ಮಹೇಶ್ವರ, ರಂಗರಾವ್ ಸನ್ಸ್ ಸಮೂಹ ಸಂಸ್ಥೆಯ ಪಾಲುದಾರ ಪವನ್ ಶ್ರೀರಂಗ, ಟೆನಿಸ್ ಕ್ಲಬ್ ಅಧ್ಯಕ್ಷ ಅಳಗಪ್ಪನ್, ಕಾರ್ಯದರ್ಶಿ ಎಲ್ ಎಂ ಮನೋಜ್ ಕುಮಾರ್ ,ಆರ್ ಜಿ ಶಂಕರ್ ಮೊದಲಾದವರು ಇದ್ದರು.

