“ದೇವದುರ್ಗ ತಾಲ್ಲೂಕಿನ ಊಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೂಮಿ ಖರೀದಿಯ ವಿಷಯದಲ್ಲಿ ಹಣ ದುರುಪಯೋಗ ಭ್ರಷ್ಟಾಚಾರ ಆರೋಪದ ಮೇಲೆ ಬಿಇಒ ಸುಖದೇವ್ ಅಮಾನತು ಮಾಡಿರುವುದು ಸರಿಯಲ್ಲ” ಎಂದು ರೈತ ಸಿದ್ದಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಮಾಧ್ಯಮಗಳ ಜೊತೆ ಅವರು ಮಾತನಾಡಿ, ಶೈಕ್ಷಣಿಕ ಹಿತದೃಷ್ಟಿಯಿಂದ ಕೈಗಾರಿಕಾ ಪ್ರದೇಶ ಇದ್ದರೂ ಅತ್ಯಂತ ಕಡಿಮೆ ಬೆಲೆಗೆ ಭೂಮಿಯನ್ನು ಮಾರಾಟ ಮಾಡಿದ್ದೇನೆ. ಇದರಲ್ಲಿ ಯಾವುದೇ ಹಣ ದುರುಪಯೋಗ ಆಗಿಲ್ಲ ಎಂದು ಸ್ಪಷ್ಟನೆ ನೀಡಿದರು.15 ಲಕ್ಷದ ಎರಡು ಚೆಕಗಳ ಮೂಲಕ ನನ್ನ ಖಾತೆಗೆ ಹಣ ಸೇರಿದೆ. ನಾನು ಯಾವುದೇ ಅಧಿಕಾರಿಗಳಿಗೆ ಹಣ ನೀಡಿಲ್ಲ. ಊಟಿ ಗ್ರಾಮದ ಶಾಲೆಗಾಗಿ ಬಿಇಓ ಅವರು ನಿರಂತರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರು, ಹಲವು ಸಂಘಟನೆಯ ಮುಖಂಡರೊಂದಿಗೆ ಸಭೆ ಮಾಡಿದ್ದಾರೆ. ಯಾವುದೇ ನಿರೀಕ್ಷೆಗಳಿಲ್ಲದೆ ನಮ್ಮ ಗ್ರಾಮದ ಮಕ್ಕಳಿಗಾಗಿ ಶ್ರಮವಹಿಸಿದ್ದಾರೆ. ನನ್ನ ಹೆಸರಿನಲ್ಲಿದ್ದ ಎರಡು ಎಕರೆ ಜಮೀನನ್ನು ಆರ್ ಟಿ ಜಿ ಎಸ್ ಟಿ ಮೂಲಕ ರಾಜ್ಯಪಾಲರ ಹೆಸರಿಗೆ ನೋಂದಣಿ ಮಾಡಿದ್ದೇನೆ.ಬಿಇಓ ಸುಖದೇವ್ ಭ್ರಷ್ಟಾಚಾರ ಎಸಗಿಲ್ಲ. ಸರಿಯಾಗಿ ತನಿಖೆ ನಡೆಸದೆ ಹಣ ದುರುಪಯೋಗ ಎಂಬ ಕಾರಣಕ್ಕೆ ಅವರನ್ನು ಅಮಾನತ್ತು ಮಾಡಿರುವುದು ದುರಾದೃಷ್ಟಕರ ಎಂದರು.
ಕರ್ನಾಟಕ ಪ್ರಾಂತ ರೈತ ಸಂಘಟನೆ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ ಮಾತನಾಡಿ, “ಸರ್ಕಾರ ಭೂಸ್ವಾಧೀನ ಮಾಡುವಾಗ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಭೂ ಸ್ವಾಧೀನಕ್ಕೆ ಪ್ರತ್ಯೇಕ ದರ ನಿಗದಿ ಮಾಡಿ ಸರಕಾರ ಅದೇಶ ಮಾಡಿದೆ. ಜಿಲ್ಲಾಧಿಕಾರಿಗಳು ದೇವದುರ್ಗ ತಾಲೂಕಿನ ಊಟಿ ಚಿನ್ನದ ಗಣಿ ಕೈಗಾರಿಕಾ ಪ್ರದೇಶವಿದ್ದರೂ ಪ್ರತಿ ಎಕರೆಗೆ ಕೇವಲ 12 ಲಕ್ಷ ಬೆಲೆ ನಿಗದಿ ಮಾಡಿರುವುದು ರೈತರಿಗೆ ಮಾಡಿದ ಅನ್ಯಾಯವಾಗಿದೆ. ಹಟ್ಟಿ ಚಿನ್ನದ ಗಣಿ ಕಂಪನಿಯ ವ್ಯವಸ್ಥಾಪಕರು ಊಟಿ ಗ್ರಾಮದ ಶಾಲೆಗೆ ಎರಡು ಎಕರೆ ಭೂಮಿ ಖರೀದಿಗಾಗಿ 30 ಲಕ್ಷ ಹಣ ಜಿಲ್ಲಾಧಿಕಾರಿಗಳ ಖಾತೆಗೆ ಚೆಕ್ ಮೂಲಕ ಜಮಾ ಮಾಡಿದ್ದಾರೆ.
ದರ ನಿಗದಿಗಾಗಿ ಜಿಲ್ಲಾಧಿಕಾರಿಗಳು ದಿನಾಂಕ 4/09/ 2023 ರಂದು ಸಭೆ ಕರೆದಿದ್ದಾರೆ. ಸಭೆಯಲ್ಲಿ ಊಟಿ ಕೈಗಾರಿಕಾ ಪ್ರದೇಶವಿದ್ದರೂ ಪ್ರತಿ ಎಕರೆಗೆ 12 ಲಕ್ಷದಂತೆ ದರ ನಿಗದಿ ಮಾಡಿದ್ದರಿಂದ ಸಭೆಯಲ್ಲಿ ಅಧಿಕಾರಿಗಳು ಮತ್ತು ರೈತರ ಮಧ್ಯೆ ವಿವಾದ ಸೃಷ್ಠಿಯಾಗಿದೆ. ಭೂ ಸ್ವಾಧೀನ ಪ್ರಕ್ರಿಯೆಯಂತೆ ಭೂಮಿ ಖರೀದಿಸಬೇಕಾದ ಜಿಲ್ಲಾಧಿಕಾರಿಗಳು ಹಟ್ಟಿ ಚಿನ್ನದ ಗಣಿ ಕಂಪನಿ ನೀಡಿದ 30 ಲಕ್ಷ ಹಣ ವಾಪಸ್ ಕಂಪನಿ ಖಾತೆಗೆ ಜಮೆ ಮಾಡಿರುವ ಜಿಲ್ಲಾಧಿಕಾರಿಗಳ ನಡೆಗೆ ಕರ್ನಾಟಕ ಪ್ರಾಂತ ರೈತ ಸಂಘ ಬಲವಾಗಿ ಖಂಡಿಸುತ್ತದೆ.
ಊಟಿ ಶಾಲೆಯ ಜಮೀನ ಖರೀದಿಗಾಗಿ ಬಿಇಓ ಸುಖದೇವ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತೊಮ್ಮೆ ಕಂಪನಿ ವ್ಯವಸ್ಥಾಪಕರನ್ನ ಭೇಟಿ ಮಾಡಿ ಊಟಿ ಶಾಲೆಯ ಜಮೀನು ಖರೀದಿಗಾಗಿ ಮನವಿ ಮಾಡಿಕೊಂಡಿದ್ದಾರೆ. ಮನವಿಗೆ ಸ್ಪಂದಿಸಿದ ವ್ಯವಸ್ಥಾಪಕರು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಇಲಾಖೆ ಖಾತೆಗೆ 30 ಲಕ್ಷ ರೂ ಹಣ ಚೆಕ್ ಮೂಲಕ ಜಮಾ ಮಾಡಿದ್ದಾರೆ.
ಕಂಪನಿ ನೀಡಿದ 30 ಲಕ್ಷ ಹಣವನ್ನ ಎರಡು ಎಕರೆ ಭೂಮಿ ಮಾರಾಟ ಮಾಡಿದ ರೈತ ಸಿದ್ದಪ್ಪನಿಗೆ 15 ಲಕ್ಷದಂತೆ ಎರಡು ಚಕ್ ಮೂಲಕ 30 ಲಕ್ಷ ಹಣವನ್ನ ಶಾಲಾ ಮುಖ್ಯಗುರುಗಳು ಹಾಗೂ ಶಾಲಾ ಮೇಲುಸ್ತುವಾರಿ ಖಾತೆಯ ಮೂಲಕ ರೈತ ಸಿದ್ದಪ್ಪನ ಖಾತೆಗೆ ಜಮಾ ಮಾಡಿದ್ದಾರೆ. ಬಿಇಓ ಅವರು ಜಿಲ್ಲಾಧಿಕಾರಿ ಸೇರಿದಂತೆ ತಾಲೂಕ ಮಟ್ಟದ ಅಧಿಕಾರಿಗಳಿಗೆ ಪತ್ರದ ಮೂಲಕ ಮಾಹಿತಿ ನೀಡಿರುವ ದಾಖಲೆಗಳಿವೆ.ಇದನ್ನ ರೈತ ಕೂಡ ಯಾವುದೆ ಹಣ ದುರುಪಯೋಗ ಮಾಡದೆ ಸಂಪೂರ್ಣ ಹಣ ನನ್ನ ಖಾತೆಗೆ ಜಮೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಭೂ ಸ್ವಾಧೀನ ಪ್ರಕ್ರಿಯೆಗೆ ಸಂಭಂದಿಸಿದಂತೆ ಕೆಲವು ನಿಯಮಗಳನ್ನು ಜಿಲ್ಲಾಧಿಕಾರಿಗಳು ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳ ಕೂಡ ತಪ್ಪಾಗಿದೆ. ಆದರೆ ಸರಕಾರ ಮತ್ತು ಶಿಕ್ಷಣ ಇಲಾಖೆ ದೂರನ್ನ ಸರಿಯಾಗಿ ಪರಿಶೀಲನೆ ಮಾಡದೆ ರಾಜಕೀಯ ಪ್ರಭಾವ ಬಳಿಸಿ ಯಾವುದೆ ಭ್ರಷ್ಟಾಚಾರ ಮಾಡದೆ ಇದ್ದರು ಕೇವಲ ಬಿಇಓ ಸುಖದೇವ್ ಅವರನ್ನ ಹೊಣೆಗಾರರನ್ನಾಗಿ ಮಾಡಿ ಅಮಾನತ್ತು ಮಾಡಿರುವುದು ಅತ್ಯಂತ ಖಂಡನೀಯ” ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘಟನೆಯ ಹೋಬಳಿ ಘಟಕದ ಅಧ್ಯಕ್ಷ ದುರ್ಗಪ್ಪ ಹೊರಟಿ, ಕಾರ್ಯದರ್ಶಿ ರಂಗನಾಥ್ ಬುಂಕಲದೊಡ್ಡಿ ಮತ್ತು ಇತರರು ಇದ್ದರು.

ಕಾನೂನು ನೋಡಿ ಸರಿಯಾದ ಶಿಕ್ಷ ನೀಡುತ್ತದೆ ನೀವು ಮಾತು ಮಾತು ಹಾಡಿದ್ರೇ ಏನಿ ಪ್ರಯೋಜನ ಇಲ್ಲ ಕಾನೂನು ಮುಂದೆ ಯಾಕು