ಮನರೇಗಾ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪಾವಗಡ ತಾಲೂಕಿನ ಕೊತ್ತೂರಿನ ಮನರೇಗಾ ಕಾರ್ಮಿಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ತುಮಕೂರು ಜಿಲ್ಲೆ ಪಾವಗಡ ತಾಲೂಕಿನಲ್ಲಿ ಮಳೆ ಪ್ರಮಾಣ ಕಡಿಮೆ ಆಗಿದ್ದು ಬೆಳೆ ಒಣಗಿ ಹೋಗಿವೆ. ಹಾಗೂ ಕೂಲಿಯಿಂದಲೇ ಬದುಕು ಸಾಗಿಸುವಂತಹ ಪರಿಸ್ಥಿತಿಯಿದೆ. ಹಾಗಾಗಿ ಮನರೇಗಾ ನಮಗೆ ಬದುಕು ಕಟ್ಟಿಕೊಳ್ಳಲು ಸಹಕಾರಿ ಆಗಿದೆ. ಹಾಗಾಗಿ ಹಲವು ಹಾಕ್ಕೋತ್ತಯಗಳನ್ನು ಪತ್ರ ಚಳುವಳಿಯ ಮೂಲಕ ಸಾವಿರಾರು ಕಾರ್ಮಿಕರು ಮನರೇಗಾ ಕೆಲಸದ ಸ್ಥಳದಿಂದ ಹಾಗೂ ಕೆಲವು ಹಳ್ಳಿಗಳಿಂದ ಪ್ರಧಾನ ಮಂತ್ರಿಗಳಿಗೆ ಪತ್ರ ಕಳಿಸುತ್ತಿದ್ದೇವೆ ಎಂದು ಮನರೇಗಾ ಕಾರ್ಮಿಕರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ರಾಯಚೂರು | ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆಗೆ ಆಗ್ರಹಿಸಿ ಪ್ರತಿಭಟನೆ
” ಮನರೇಗಾ ದಡಿ ಪ್ರತಿ ಕುಟುಂಬಕ್ಕೆ 200 ದಿನ ಕೆಲಸಕ್ಕೆ ಕಾನೂನು ಮಾಡಿ ಜಾರಿಗೊಳಿಸಿ,ಮನರೇಗಾ ಕೂಲಿ ಹಣವನ್ನು 500 ರೂಪಾಯಿಗೆ ಹೆಚ್ಚಿಸಬೇಕು, ಮನರೇಗಾ ಬಜೆಟ್ ನ ಮೊತ್ತವನ್ನು 2 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿಸಿ, ಎಲ್ಲಾ ದುಡಿಯುವ ಕೈಗಳಿಗೆ ಕೆಲಸ ಕೊಡಿ ಕಾರ್ಮಿಕರ ಗೌರವಯುತ ಬದುಕಿಗೆ ಕೂಲಿ ಹೆಚ್ಚಿಸಬೇಕು ಎಂದು ಪತ್ರದಲ್ಲಿ ವಿವರಿಸಿದ್ದಾರೆ.
