ಅಂಬೇಡ್ಕರ್ ಬಗ್ಗೆ ನಿಂದನಾತ್ಮಕ ಹೇಳಿಕೆ ನೀಡಿ ಅವರನ್ನು ಅವಮಾನಿಸಿದ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರನ್ನು ವಜಾಗೊಳಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದಾವಣಗೆರೆ ಜಿಲ್ಲೆಯ ಪ್ರಜಾ ಪರಿವರ್ತನಾ ವೇದಿಕೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ರಾಷ್ಟ್ರಪತಿಯವರಿಗೆ ಪತ್ರ ಬರೆಯುವುದರ ಮೂಲಕ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
“ಸಂಸತ್ ಕಲಾಪದ ವೇಳೆ ಅಂಬೇಡ್ಕರ್ ರವರು ವ್ಯಸನ ಎಂಬುವ ರೀತಿ ಅಕ್ಷಮ್ಯದ ಮಾತುಗಳನ್ನು ಆಡಿರುವ ಅಮಿತ್ ಶಾ ಅವರು ವೈರುಧ್ಯಾತ್ಮಕ ಪದಗಳನ್ನು ಬಳಸಿದ್ದು, ಅವರು ಈ ಕೂಡಲೇ ರಾಷ್ಟ್ರದ ಕ್ಷಮೆ ಕೇಳಿ ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
ಬಿಜೆಪಿ ಮುಖಂಡರು ಈ ರೀತಿಯ ಅಂಬೇಡ್ಕರ್ ವಿರೋಧಿ ಭಾವನೆಯನ್ನು ಬಿಡಬೇಕು. ಈ ರೀತಿಯ ಅಂಬೇಡ್ಕರ್ ವಿರೋಧಿ ಹೇಳಿಕೆಗಳನ್ನು ನಾವು ಸಹಿಸುವುದಿಲ್ಲ. ನಮ್ಮ ಸಮುದಾಯಕ್ಕೆ ಅಂಬೇಡ್ಕರ್ ಅವರು ಭಗವಂತನಿಗಿಂತಲೂ ಕಡಿಮೆ ಏನಲ್ಲ. ಶತಮಾನಗಳಿಂದಲೂ ತುಳಿಯಲ್ಪಟ್ಟ ದಲಿತರ, ಶೋಷಿತರ, ಮಹಿಳೆಯರ, ಬಡವರ್ಗದ ಜನರಿಗೆ ಸಂವಿಧಾನ ನೀಡಿ, ಸಮಾನತೆಯನ್ನು ಕಲ್ಪಿಸಿದ ದೇವರಾಗಿದ್ದಾರೆ. ಅವರು ರಚಿಸಿದ ಸಂವಿಧಾನವನ್ನು ಧರ್ಮ ಗ್ರಂಥ ಎಂದುಕೊಂಡು ದೇವರಂತೆ ಆರಾಧಿಸುತ್ತೇವೆ” ಎಂದು ರಾಷ್ಟ್ರಪತಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ: ಸಿಎಂ ಸಿದ್ದರಾಮಯ್ಯ
“ಅವಮಾನಕರ ಹೇಳಿಕೆ ನೀಡಿದ ಅಮಿತ್ ಶಾ ಅವರಿಗೆ ನಾಚಿಕೆಯಾಗಬೇಕು. ಈ ಕೂಡಲೇ ಅವರು ರಾಜೀನಾಮೆ ನೀಡಿ ಮನೆಗೆ ಹೋಗಬೇಕು. ಅವರ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಬೇಕು” ಎಂದು ಜಿಲ್ಲಾ ಉಪಾಧ್ಯಕ್ಷ ಲಿಂಗರಾಜು ಗಾಂಧಿನಗರ,
ರಾಕೇಶ್, ಅಯಾಜ್, ಸಾದಿಕ್ ಮತ್ತು ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಪತ್ರ ರವಾನಿಸಿ ಒತ್ತಾಯಿಸಿದ್ದಾರೆ.
