ರಾಯಚೂರು ಐಐಐಟಿಗೆ ಗುರುತಿಸಿರುವ ಜಾಗ ಈ ಹಿಂದೆ ದಲಿತರಿಗೆ ನೀಡಿದ ಭೂಮಿಯಾಗಿದೆ. ಈ ಭೂಮಿಯನ್ನೆ ನಂಬಿಕೊಂಡು ಜೀವನ ಸಾಗಿಸುತ್ತಿರುವ ಕುಟುಂಬಗಳಿಗೆ ಫಲವತ್ತವಲ್ಲದ ಭೂಮಿ ನೀಡಿದ್ದು, ಇತ್ತ ಪರಿಹಾರವಿಲ್ಲದೆ ಭೂಮಿ ಇಲ್ಲದೆ ಭೂಮಿ ಕಳೆದುಕೊಂಡು ರೈತರನ್ನು ಒಕ್ಕಲೆಬ್ಬಿಸಿದ್ದರಿಂದ ಕಳೆದ ಎರಡು ದಿನಗಳಿಂದ ರೈತರು ರಾಯಚೂರಿನ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಯಚೂರಿಗೆ ಐಐಟಿ ಬದಲಿಗೆ ತ್ರಿಬಲ್ ಐಟಿ ಮಂಜೂರು ಮಾಡಿದ್ದು, ತಾಲೂಕಿನ ವಡವಾಟಿ ಸೀಮಾಂತರದ ಸರ್ವೆ ನಂಬರ್ 99/1/3ರಲ್ಲಿ ಒಟ್ಟು 65 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಈ 65 ಎಕರೆಯಲ್ಲಿ ಈ ಹಿಂದೆ 1978ರಲ್ಲಿ ಭೂ ರಹಿತ ದಲಿತರಿಗೆ 35 ಎಕರೆ ಭೂಮಿಯನ್ನು 12 ಕುಟುಂಬಗಳಿಗೆ ನೀಡಲಾಗಿದೆ. ಈಗ ಗುರುತಿಸಿರುವ ಭೂಮಿಯಲ್ಲಿಯೇ ಈ ರೈತರು ಸಾಗುವಳಿ ಮಾಡುತ್ತಿದ್ದಾರೆ. ಸರಕಾರ ನೀಡಿದ್ದ ಭೂಮಿಯಲ್ಲಿ ಕೃಷಿಯನ್ನು ಮಾಡುತ್ತಿದ್ದಾರೆ. ಜಿಲ್ಲಾಡಳಿತವು ಇದೇ ಭೂಮಿಯನ್ನು ಕಾಲೇಜಿಗೆ ನೀಡಲು ಮುಂದಾಗಿದ್ದರಿಂದ, ದಲಿತ ಕುಟುಂಬಗಳು ಭೂಮಿ ಕಳೆದುಕೊಂಡಿದ್ದಾರೆ.
ತ್ರಿಬಲ್ ಐಟಿಗಾಗಿ ಗುರುತಿಸಿದ ಭೂಮಿಗೆ ರೈತರಿಗೆ ಪರ್ಯಾಯ ಭೂಮಿ ನೀಡಿದೆ. ಆದರೆ ಆ ಭೂಮಿಯು ಫಲವತ್ತಾಗಿಲ್ಲವೆಂಬುದು ರೈತರ ಆರೋಪವಾಗಿದೆ. ಜೊತೆಗೆ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಪಹಣಿ , ಸರ್ವೆ ನಡೆಸಿ ರೈತರಿಗೆ ನೀಡುವ ಭರವಸೆ ನೀಡಿದ್ದು, ಇದುವರೆಗೂ ನೀಡಿಲ್ಲವೆಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು 40 ವರ್ಷದಿಂದ ಸಾಗುವಳಿ ಮಾಡಿಕೊಂಡು ಬಂದು, ಭೂಮಿಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಭೂಮಿ ಕಸಿದುಕೊಂಡು ಬದಲಿ ಭೂಮಿ ನೀಡಿದ್ದು, ಆದರೆ ಯಾವುದೇ ಕೆಲಸಕ್ಕೆ ಬಾರದಂತಾಗಿದೆ. ರೈತರಿಗೆ ಮೋಸ ಮಾಡಿದ್ದಾರೆ ಎಂದು ಪ್ರತಿಭಟನಾನಿರತ ಆರೋಪಿಸಿದ್ದಾರೆ.
ತ್ರಿಬಲ್‌ಐಟಿ ಕಟ್ಟಡ ಆರಂಭವಾಗಬೇಕಾದರೆ ದಲಿತರು ಈಗಾಗಲೇ ನೀಡಿರುವ ಭೂಮಿ ವಾಪಸ್ಸು ನೀಡಬೇಕು ಅಥವಾ ಬೇರೆಡೆ ಫಲವತ್ತಾದ ಭೂಮಿ ನೀಡಿ ಎಂದು ಸುಮಾರು 50ಕ್ಕೂ ಅಧಿಕ ರೈತರು, ಮುಖಂಡರಾದ ಸುದರ್ಶನರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ವರದಿ : ಹಫೀಜುಲ್ಲ
