ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ ಖಂಡಿಸಿ ರಾಯಚೂರು ಸಕಲ ಜೈನ ಸಮಾಜದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
“ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆಯಾಗಿದ್ದು, ಈ ಶತಮಾನದಲ್ಲಿ ಜೈನಮುನಿಯ ಹತ್ಯೆ ಮೊದಲನೇಯದಾಗಿದೆ. ಜೈನಮುನಿಯ ಕೊಲೆ ಮಾಡಿ ಅಂಗಾಗಗಳನ್ನು ಕತ್ತರಿಸಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಜೈನಮುನಿ ಸಾವಿನ ಹಿಂದೆ ಇರುವ ಕಾಣದ ಕೈಗಳು ಈ ಹತ್ಯೆಗೆ ಪ್ರಮುಖರಾಗಿದ್ದಾರೆಂದು ತಿಳಿದು ಬಂದಿದ್ದು, ತಪ್ಪಿತಸ್ಥರ ವಿರುದ್ಧ ಹಾಗೂ ಹತ್ಯೆಗೆ ಪ್ರಮುಖ ಕಾರಣರಾಗಿರುವ ಎಲ್ಲರನ್ನೂ ಕೂಲಂಕುಶವಾಗಿ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದರು.
“ದೇಶ ಮತ್ತು ರಾಜ್ಯದಲ್ಲಿ ದಿಗಂಬರ ಮುನಿಗಳು ಇರುವುದೇ ಬಹಳ ವಿರಳ. ಅದರಲ್ಲೂ ಈ ರೀತಿ ಹತ್ಯೆಯಾಗುತ್ತೆಂದರೆ ಧರ್ಮಕ್ಕೆ, ಅನ್ಯ ಧರ್ಮದವರಿಗೂ, ಸ್ವಾಮೀಜಿಗಳ ಈ ಹತ್ಯೆಯು ನಾಡಿಗೆ ಮತ್ತು ದೇಶಕ್ಕೆ ದೊಡ್ಡ ಅಸಮಾನವಾಗಿದೆ. ರಾಜ್ಯದಲ್ಲಿ ದಿಗಂಬರ ಮುನಿಗಳು ಎಲ್ಲೆಲ್ಲಿ ಸಂಚರಿಸುತ್ತಾರೋ ಹಾಗೂ ಎಲ್ಲೆಲ್ಲಿ ವಾಸವಾಗಿರುತ್ತಾರೋ ಅಲ್ಲಿ ಸರ್ಕಾರ ಬಿಗಿ ಭದ್ರತೆ ನೀಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಬಿಜೆಪಿ ಪ್ರತಿಭಟನೆ
ಪ್ರತಿಭಟನೆಯಲ್ಲಿ ಜೈನ ಸಮಾಜದ ಮುಖಂಡರಾದ ಶಾಂತಿಲಾಲ್ ಮೂಥಾ, ಪ್ರಕಾಶ್‌ಮಲ್ ಚೋರಾಡಿಯಾ, ಮಾಣಕ್‌ಚಂದ್ ಮರೋಟ, ಮಹಾವೀರ ಹರದರ್, ಅಶೋಕ ಕುಮಾರ ಜೈನ್ ಸೇರಿದಂತೆ ಜೈನ್ ಸಮುದಾಯದ ಹಲವು ಸಂಘಟನೆಗಳ ಮುಖಂಡರು, ಮಹಿಳೆಯರು ಭಾಗವಹಿಸಿದ್ದರು.