ರಾಯಚೂರು | ಜೈನ ದಿಗಂಬರ ಮುನಿಗಳಿಗೆ ಸರ್ಕಾರ ಭದ್ರತೆ ನೀಡುವಂತೆ ಆಗ್ರಹ

Date:

ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ ಖಂಡಿಸಿ ರಾಯಚೂರು ಸಕಲ ಜೈನ ಸಮಾಜದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

“ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆಯಾಗಿದ್ದು, ಈ ಶತಮಾನದಲ್ಲಿ ಜೈನಮುನಿಯ ಹತ್ಯೆ ಮೊದಲನೇಯದಾಗಿದೆ. ಜೈನಮುನಿಯ ಕೊಲೆ ಮಾಡಿ ಅಂಗಾಗಗಳನ್ನು ಕತ್ತರಿಸಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಜೈನಮುನಿ ಸಾವಿನ ಹಿಂದೆ ಇರುವ ಕಾಣದ ಕೈಗಳು ಈ ಹತ್ಯೆಗೆ ಪ್ರಮುಖರಾಗಿದ್ದಾರೆಂದು ತಿಳಿದು ಬಂದಿದ್ದು, ತಪ್ಪಿತಸ್ಥರ ವಿರುದ್ಧ ಹಾಗೂ ಹತ್ಯೆಗೆ ಪ್ರಮುಖ ಕಾರಣರಾಗಿರುವ ಎಲ್ಲರನ್ನೂ ಕೂಲಂಕುಶವಾಗಿ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ದೇಶ ಮತ್ತು ರಾಜ್ಯದಲ್ಲಿ ದಿಗಂಬರ ಮುನಿಗಳು ಇರುವುದೇ ಬಹಳ ವಿರಳ. ಅದರಲ್ಲೂ ಈ ರೀತಿ ಹತ್ಯೆಯಾಗುತ್ತೆಂದರೆ ಧರ್ಮಕ್ಕೆ, ಅನ್ಯ ಧರ್ಮದವರಿಗೂ, ಸ್ವಾಮೀಜಿಗಳ ಈ ಹತ್ಯೆಯು ನಾಡಿಗೆ ಮತ್ತು ದೇಶಕ್ಕೆ ದೊಡ್ಡ ಅಸಮಾನವಾಗಿದೆ. ರಾಜ್ಯದಲ್ಲಿ ದಿಗಂಬರ ಮುನಿಗಳು ಎಲ್ಲೆಲ್ಲಿ ಸಂಚರಿಸುತ್ತಾರೋ ಹಾಗೂ ಎಲ್ಲೆಲ್ಲಿ ವಾಸವಾಗಿರುತ್ತಾರೋ ಅಲ್ಲಿ ಸರ್ಕಾರ ಬಿಗಿ ಭದ್ರತೆ ನೀಡಬೇಕು” ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಬಿಜೆಪಿ ಪ್ರತಿಭಟನೆ

ಪ್ರತಿಭಟನೆಯಲ್ಲಿ ಜೈನ ಸಮಾಜದ ಮುಖಂಡರಾದ ಶಾಂತಿಲಾಲ್ ಮೂಥಾ, ಪ್ರಕಾಶ್‌ಮಲ್ ಚೋರಾಡಿಯಾ, ಮಾಣಕ್‌ಚಂದ್ ಮರೋಟ, ಮಹಾವೀರ ಹರದರ್, ಅಶೋಕ ಕುಮಾರ ಜೈನ್ ಸೇರಿದಂತೆ ಜೈನ್ ಸಮುದಾಯದ ಹಲವು ಸಂಘಟನೆಗಳ ಮುಖಂಡರು, ಮಹಿಳೆಯರು ಭಾಗವಹಿಸಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಕ್ಷಿಣ ಕನ್ನಡ | ಬಿಜೆಪಿ ವಿಜಯೋತ್ಸವದ ವೇಳೆ ಇಬ್ಬರಿಗೆ ಚೂರಿ ಇರಿತ ಪ್ರಕರಣ; ಮತ್ತೆ 7 ಮಂದಿ ಬಂಧನ

ಪ್ರಧಾನಿ ಮೋದಿ 3ನೇ ಬಾರಿಗೆ ಪ್ರಧಾನಿಯಾದ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ...

ಬೀದರ್‌ | ಗ್ರಾ.ಪಂ. ನಲ್ಲಿ ಅವ್ಯವಹಾರ; ತನಿಖೆಗೆ ಆಗ್ರಹ

ಬೀದರ್‌ ತಾಲೂಕಿ ಮಾಳೆಗಾಂವ ಗ್ರಾಮ ಪಂಚಾಯತ್‌ನಲ್ಲಿ ವಿವಿಧ ಯೋಜನೆಯಡಿ ನಡೆಸಿರುವ ಅವ್ಯವಹಾರದ...

ನೀಟ್ ಅಕ್ರಮ | ಹಣಕ್ಕಾಗಿ ಬದ್ಧತೆ ಮರೆತವಾ ಮಾಧ್ಯಮಗಳು?

ಸದ್ಯ ದೇಶಾದ್ಯಂತ ನೀಟ್-ಯುಜಿ ವೈದ್ಯಕೀಯ ಪ್ರವೇಶ ಪರೀಕ್ಷೆ ದೊಡ್ಡ ಚರ್ಚೆಯಾಗಿದೆ. ವೈದ್ಯಕೀಯ...

ತುಮಕೂರಿನ ವಸಂತನರಸಾಪುರದ ಬಳಿ ಇಂಟಿಗ್ರೇಟೆಡ್ ಟೌನ್‌ಶಿಪ್‌ ನಿರ್ಮಾಣ; ಯೋಜನೆ ಕೈಗೊಳ್ಳುವಂತೆ ಸಚಿವ ಬೈರತಿ ಸುರೇಶ್ ಸೂಚನೆ

ತುಮಕೂರು ಜಿಲ್ಲೆಯ ವಸಂತನರಸಾಪುರದ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತೆ ನಗರಾಭಿವೃದ್ಧಿ ಇಲಾಖೆಯಿಂದ Integrated...