ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದೆ ನಿರ್ಲಕ್ಷ್ಯ ವಹಿಸುತ್ತಿರುವ ಆಡಳಿತ ನಡೆ ವಿರೋಧಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್(ಡಿವೈಎಫ್ಐ) ಮತ್ತು ಕರ್ನಾಟಕ ಪ್ರಾಂತ ರೈತ ಸಂಘಟನೆ (ಕೆಪಿಆರ್‌ಎಸ್) ನೇತೃತ್ವದಲ್ಲಿ ಗೆಜ್ಜಲಗಟ್ಟಾ ಗ್ರಾಮ ಪಂಚಾಯಿತಿ ಪಿಡಿಒ ಗುರುಸಿದ್ದಪ್ಪ ಅವರಿಗೆ ಮನವಿ ಸಲ್ಲಿಸಿದರು.
ರಾಯಚೂರು ಜಿಲ್ಲೆ ಹಟ್ಟಿ ಪಟ್ಟಣ ಸಮೀಪದ ಗೆಜ್ಜಲಗಟ್ಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಲೋಗಲ್ ಗ್ರಾಮದ 2ನೇ ವಾರ್ಡಿನ ನಿವಾಸಿಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾಗಿದ್ದು, ನಿತ್ಯವೂ ಪರದಾಡುವಂತಾಗಿದೆ. ಈ ಬಗ್ಗೆ ಹಲವು ಬಾರಿ ಆಡಳಿತದ ಗಮಕ್ಕೆ ತಂದರೂ ನಿರ್ಲಕ್ಷ್ಯ ವಹಿಸಿದ್ದಾರೆಯೇ ಹೊರತು ಯಾವುದೇ ಪ್ರಯೋಜನವಾಗಿಲ್ಲ” ಎಂದು ಸಂಘಟನಾಕಾರರು ಆರೋಪಿಸಿದರು.
“ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಸ್ಥಳೀಯರು ಪಂಚಾಯಿತಿಯಲ್ಲಿ ಕೇಳಿದರೆ ʼನಿಮ್ಮದು ಭಾರೀ ಕಿರಿಕಿರಿ ಆಗಿದೆಯೆಂದು ಪಂಚಾಯತ್ ಸಿಬ್ಬಂದಿ ವೆಂಕಟೇಶ ಚಿಕ್ಕನಗನೂರು ಉಡಾಫೆಯಾಗಿ ಮಾತನಾಡುತ್ತಾರೆ. ಆಡಳಿತದ ಬೇಜವಾಬ್ಧಾರಿಯನ್ನು ಎತ್ತಿ ತೋರಿಸುತ್ತದೆ. ಇಂತಹ ನಡೆ ಖಂಡನೀಯ ಎಂದರು.
“ವಾರ್ಡಿನ ನೀರಿನ ಮೋಟಾರ್ ಕೆಟ್ಟು ಹೋಗಿದ್ದು, ಕೂಡಲೇ ದುರಸ್ಥಿಗೊಳೀಸಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ವಾರ್ಡ್‌ಗಳ ಸಮಸ್ಯೆಗಳನ್ನು ಇತ್ಯರ್ಥ ಮಾಡಬೇಕು. ನಿರ್ಲಕ್ಷ್ಯ ವಹಿಸಿದರೆ ಪಂಚಾಯಿತಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಡಿವೈಎಫ್ಐ ಮತ್ತು ಕೆಪಿಆರ್‌ಎಸ್ ಜಂಟಿ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಆರು ವರ್ಷ ಕಳೆದರೂ ವಿದ್ಯುತ್ ಕಾಮಗಾರಿ ಅಪೂರ್ಣ: ರೈತರಿಗೆ ಅನ್ಯಾಯ; ಆರೋಪ
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ರಮೇಶ್ ವೀರಾಪೂರ, ಕೆಪಿಆರ್‌ಎಸ್ ಮುಖಂಡರುಗಳಾದ ನಿಂಗಪ್ಪ ಎಂ, ಹನುಮಂತ ಉಪ್ಪಾರ, ಶಂಕರ್ ಗೌಡ, ಡಿವೈಎಫ್ಐ ಮುಖಂಡರುಗಳಾದ ಸಿದ್ದು ಪೂಜಾರಿ, ನಾಗರಾಜ್ ಅಂಗಡಿ, ಅಭಿಷೇಕ್, ಹುಸೇನ್ ಪಾಷಾ, ಶಿವಲಿಂಗ, ರವಿಕುಮಾರ, ವಿಶಾದ, ಶ್ರೀನಿವಾಸ್ ಇದ್ದರು.