’ಈ ದಿನ’ ಎಕ್ಸ್‌ಕ್ಲೂಸಿವ್‌: ಬಜರಂಗದಳದ ರೋಹನ್ ಕಲ್ಲೆಸೆತವೇ ಶಿವಮೊಗ್ಗ ಗಲಭೆಯ ಆರಂಭ ಬಿಂದುವೇ?

Date:

ಈದ್ ಮಿಲಾದ್ ಮೆರವಣಿಗೆ ವೇಳೆ ಗಲಭೆಗೆ ಪ್ರಚೋದನೆ ನೀಡಲು ಯತ್ನಿಸುತ್ತಿರುವ ಬಜರಂಗದಳ ಮುಖಂಡನ ವಿಡಿಯೊ ’ಈದಿನ.ಕಾಂ’ಗೆ ಲಭ್ಯವಾಗಿದೆ

ಶಿವಮೊಗ್ಗದ ರಾಗಿಗುಡ್ಡದಲ್ಲಿ ಉಂಟಾದ ಕೋಮು ಗಲಭೆ ಪ್ರಕರಣಕ್ಕೆ ಪ್ರಚೋದನೆ ನೀಡಿದ್ದು ಬಜರಂಗದಳದ ಮುಖಂಡ ‘ರೋಹನ್ ಅಲಿಯಾಸ್ ರೋಯಾ’ ಎಂಬ ಸಂಗತಿ ಬೆಳಕಿಗೆ ಬಂದಿದೆ.

- Advertisement -

ಕಾರ್ಯಕ್ರಮದ ಆಯೋಜನೆಯಲ್ಲಿ ಎಸ್.ಡಿ.ಪಿ.ಐ.ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿದ್ದರು. ಮೆರವಣಿಗೆ ಮೇಲೆ ಕಲ್ಲು ಬಿದ್ದ ಬಳಿಕ ಉದ್ರಿಕ್ತರಾದ ಮುಸ್ಲಿಂ ಯುವಕರು ತಾವು ಕೂಡ ಕಲ್ಲೆಸೆದು ಪ್ರತಿಕ್ರಿಯಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಶಿವಮೊಗ್ಗ ನಗರದ ಅಂಚಿನಲ್ಲಿರುವ ಶಾಂತಿನಗರ (ರಾಗಿಗುಡ್ಡ) ಬಡಾವಣೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ತೂರಿ ಬಂದ ಕಲ್ಲೊಂದು ಉಭಯ ಸಮುದಾಯಗಳ ನಡುವೆ ಗಲಭೆಗೆ ಕಾರಣವಾಗಿತ್ತು. ಈದ್ ಮಿಲಾದ್ ಹಬ್ಬದ ಸಂಭ್ರಮ ಕೆಡಿಸಿ ಪ್ರಚೋದಿಸಲೆಂದು ಕಲ್ಲು ಎಸೆಯಲಾಗಿತ್ತು. ಆದರೆ ಕಲ್ಲು ಎಸೆದದ್ದು ಯಾರೆಂಬುದು ಆರಂಭದಲ್ಲಿ ಪತ್ತೆಯಾಗಿರಲಿಲ್ಲ.

‘ಈ ದಿನ.ಕಾಂ’ಗೆ ಇದೀಗ ಲಭ್ಯವಾಗಿರುವ ಬಲ್ಲಮೂಲಗಳ ಪ್ರಕಾರ ಬಜರಂಗದಳದ ಮುಖಂಡ, ಶಾಂತಿನಗರದ ನಿವಾಸಿ ’ರೋಹನ್ ಅಲಿಯಾಸ್ ರೋಯಾ’ ಎಂಬಾತನೇ ಮೊದಲು ಕಲ್ಲು ಎಸೆದಿದ್ದು ಎಂಬುದು ಖಚಿತವಾಗಿದೆ.

ಪರಿಸ್ಥಿತಿ ಹತೋಟಿಗೆ ಬಂದಿದೆ. ರಾಗಿಗುಡ್ಡ ಶಾಂತವಾಗಿದೆ. ಸೆಕ್ಷನ್ 144 ಜಾರಿಗೊಳಿಸಿ ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರು ಈವರೆಗೆ 60 ಜನರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಬಜರಂಗದಳದವರೂ ಇದ್ದಾರೆ. ಎಸ್ಡಿಪಿಐನ ಕೆಲವು ಮಂದಿ ಬಂಧಿತರಾಗಿದ್ದಾರೆ. ಈವರೆಗೆ 25 ಎಫ್.ಐ.ಆರ್.ಗಳನ್ನು ದಾಖಲಿಸಿದ್ದಾರೆ.

ರೋಹನ್ ಕಲ್ಲು ಎಸೆದ ಬಳಿಕ ಗಲಭೆ ಶುರುವಾಯಿತು. ಉದ್ರಿಕ್ತ ಯುವಕರ ಗುಂಪು ಪ್ರತಿಕ್ರಿಯಿಸಿ ಮತ್ತೊಂದು ಕೋಮಿನ ಮನೆಗಳತ್ತ ಕಲ್ಲು ಎಸೆಯಿತು. ಗಲಭೆಯಲ್ಲಿ ಮೂರೂ ಧರ್ಮಗಳವರ ಮನೆಗಳಿಗೂ ಹಾನಿಯಾಗಿದೆ ಎಂದು ಮೂಲಗಳು ಹೇಳಿವೆ.

ಹಿಂದೂ ಮಹಾಗಣಪತಿ ಮೆರವಣಿಗೆಯ ವೇಳೆ ವಾರಾಣಸಿಯ ‘ವಿವಾದಿತ’ ಗ್ಯಾನವಾಪಿ ಮಸೀದಿ ಶಿವನ ಮಹಾದ್ವಾರ, ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಇಲ್ಯಾಸ್ ನಗರದತ್ತ ಶ್ರೀರಾಮನು ಬಾಣ ಬಿಡುತ್ತಿದ್ದಾನೆ ಎಂಬಂತೆ ನಿರ್ಮಿಸಲಾದ ದ್ವಾರ, ಮುಸಲ್ಮಾನರಂತೆ ಗಡ್ಡಧಾರಿ ಹಾಗೂ ಹಸಿರು ಬಣ್ಣದ ಪಂಚೆ ತೊಟ್ಟ ಹಿರಣ್ಯಕಶ್ಯಪುವಿನ ಕರುಳು ಬಗೆಯುತ್ತಿರುವಂತೆ ನಿರ್ಮಿಸಲಾದ ನರಸಿಂಹನ ಕಲಾಕೃತಿ – ಇತ್ಯಾದಿಗಳನ್ನು ಪ್ರದರ್ಶಿಸಲಾಗಿತ್ತು. ಆದರೆ ಅಲ್ಪಸಂಖ್ಯಾತರು ಶಾಂತಿ ರೀತಿಯಲ್ಲಿ ವರ್ತಿಸಿ ಗಣೇಶ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು. ತಾವು ಕೂಡ ಹಬ್ಬದಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದರು. ಅದೇ ರೀತಿಯಲ್ಲಿ ಭಾನುವಾರ ನಗರಾದ್ಯಂತ ಆಯೋಜನೆಯಾಗಿದ್ದ ಈದ್ ಸಂಭ್ರಮದ ವೇಳೆ ಹಿಂದೂಗಳೂ ಸಹಕರಿಸಿ ಸಂಭ್ರಮಿಸಿದ್ದರು. ಕಲ್ಲು ತೂರಿ ಪ್ರಚೋದಿಸುವ ಪ್ರಯತ್ನ ಶಾಂತಿನಗರಕ್ಕೆ ಮಾತ್ರ ಸೀಮಿತವಾಗಿತ್ತು. ಕಲ್ಲು ತೂರಾಟದ ಹಿಂದೆ ಯಾರಿದ್ದಾರೆಂಬುದು ತಿಳಿದಿರಲಿಲ್ಲ.

ಈ ನಡುವೆ ಔರಂಗಜೇಬ್ ಕಟೌಟ್ ಹೇಗೆ ಬಂತು, ಶಿವಮೊಗ್ಗದಲ್ಲಿ ಇದನ್ನು ಹಾಕಲು ಪ್ರಚೋದಿಸಿದವರು ಯಾರು ಎಂಬ ಕುರಿತು ಪೊಲೀಸ್ ತನಿಖೆ ಆರಂಭವಾಗಿದೆ. ಒಂದು ವೇಳೆ ಯಾರೇ ಹಾಕಿದ್ದರೂ, ಶಾಂತಿ ಕಾಪಾಡಲು ಕಳೆದ ಕೆಲವು ವರ್ಷಗಳಿಂದ ಇಡೀ ಸಮುದಾಯವನ್ನು ಪ್ರಭಾವಿಸುತ್ತಿದ್ದ ಮುಸ್ಲಿಂ ಮುಖಂಡರು ಈ ಕಟೌಟನ್ನು ಏಕೆ ಗಮನಿಸಲಿಲ್ಲ ಎಂಬ ಹಲವು ಪ್ರಶ್ನೆಗಳು ಎದ್ದಿವೆ. ಈ ಮಧ್ಯೆ ಮೊದಲ ಕಲ್ಲು ಎಲ್ಲಿಂದ ಬಂದಿತು ಎಂಬುದಕ್ಕೆ ಈಗ ಸದ್ಯ ರೋಹನ್‌ ಕಡೆಗೆ ಬೆರಳು ಮಾಡಿ ತೋರಿಸಿದೆ. ಉಳಿದ ಪ್ರಶ್ನೆಗಳಿಗೂ ಉತ್ತರ ಆದಷ್ಟು ಬೇಗ ಸಿಗಬೇಕಷ್ಟೇ.

ಕಲ್ಲು ತೂರಿದ ಬಳಿಕ ಭಾನುವಾರ ಸಂಜೆ 5.45ರ ವೇಳೆಯಲ್ಲಿ ಬಜರಂಗದಳದ ಒಂದು ಗುಂಪು ಮರದ ದೊಣ್ಣೆಗಳನ್ನು ಹಿಡಿದು ಓಡಾಡುತ್ತಾ ಗಲಭೆಗೆ ಪ್ರಚೋದಿಸುತ್ತಿರುವುದು ವಿಡಿಯೋವೊಂದರಲ್ಲಿ ಸೆರೆಯಾಗಿದೆ. ಪ್ರಚೋದನೆಯ ಕೃತ್ಯವನ್ನು ತಡೆಯಲು ಪೊಲೀಸ್ ಅಧಿಕಾರಿಗಳು ನಡೆಸಿರುವ ಪ್ರಯತ್ನವನ್ನೂ ವಿಡಿಯೋದಲ್ಲಿ ಕಾಣಬಹುದು. ಈ ಮಧ್ಯೆ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್‌ ಆಗಿದೆ.

ಇದನ್ನೂ ಓದಿರಿ: ಶಿವಮೊಗ್ಗ ಗಲಾಟೆ | ಜನಸಾಮಾನ್ಯರು ಏನಂತಾರೆ? ಇಲ್ಲಿದೆ ʼಈ ದಿನ.ಕಾಮ್‌ʼನ ಪ್ರತ್ಯಕ್ಷ ವರದಿ

ರೋಹನ್ ಜೊತೆಗೆ ಇತರರೂ ಮರದ ತಡಿಕೆಯೊಂದನ್ನು ಮುರಿದು, ಕೋಲುಗಳನ್ನು ಹಿಡಿದುಕೊಂಡು ಓಡಾಡುತ್ತಿರುವುದನ್ನು ಇಲ್ಲಿ ಕಾಣಬಹುದು. ಅದರಲ್ಲಿ ಸಿ.ಆರ್. ಎಂಬ ಅಕ್ಷರಗಳನ್ನು ಬರೆದಿರುವ ಟೀ ಶರ್ಟ್ ಧರಿಸಿರುವಾತನೇ ರೋಹನ್ ಅಲಿಯಾಸ್ ರೋಯಾ. ಈತ ಬಜರಂಗದಳದಲ್ಲಿ ಸಕ್ರಿಯನಾಗಿದ್ದಾನೆ ಎಂದು ಬಲ್ಲಮೂಲಗಳು ‘ಈ ದಿನ.ಕಾಂ’ ಗೆ ತಿಳಿಸಿವೆ.

ರಾಗಿಗುಡ್ಡದಲ್ಲಿ ಆಯೋಜಿಸಿದ್ದ ಈದ್ ಮಿಲಾದ್ ಮೆರವಣಿಗೆಯು ದೊಡ್ಡ ಪ್ರಮಾಣದಲ್ಲಿ ಶುರುವಾಗಿತ್ತು. ರೋಹನ್ ಮತ್ತು ಆತನ ಗುಂಪು ಮೆರವಣಿಗೆಯ ಮೇಲೆ ಕಲ್ಲು ಎಸೆಯುವ ಮೂಲಕ ಕೋಮು ವೈಮನಸ್ಯಕ್ಕೆ ಕಾರಣವಾಗಿದೆ
“ನಗರದಲ್ಲಿ ಹಿಂದೂ ಗಣಪತಿ ಆಚರಣೆಯ ವೇಳೆ ವಿವಾದಾತ್ಮಕ ಮಹಾದ್ವಾರಗಳನ್ನು ನಗರಸಭೆ ತೆಗೆಸಬೇಕು. ಪೊಲೀಸರು ಈ ಕುರಿತು ಹೆಚ್ಚಿನ ಕ್ರಮ ಜರುಗಿಸಲು ಅಸಾಧ್ಯವಾಗಿದೆ” ಎಂದೂ ಕೆಲವು ಪೊಲೀಸರು ’ಈ ದಿನ’ದೊಂದಿಗೆ ಅಸಹಾಯಕತೆ ತೋಡಿಕೊಂಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಚ್-1ಬಿ ವೀಸಾ ಶುಲ್ಕ 1 ಲಕ್ಷ ಡಾಲರ್‌ಗೆ ಏರಿಕೆ ಪ್ರಸ್ತಾವನೆ: ಅಮೆರಿಕ ತೆರಳುವ ಭಾರತೀಯರಿಗೆ ಬಿಗ್ ಶಾಕ್

ಅಮೆರಿಕದ ಎಚ್‌-1ಬಿ ವೀಸಾ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲು ಮುಂದಾಗಿರುವ ಅಲ್ಲಿನ ಆಂತರಿಕ...

ಕಳಸ | ಕಲ್ಲುಗೋಡು ತೂಗು ಸೇತುವೆ ಶಿಥಿಲ; ಪ್ರವಾಸಿಗರ ಸಂಚಾರ ತಡೆದ ಗ್ರಾಮಸ್ಥರು

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಲ್ಲುಗೋಡು ಗ್ರಾಮದ ತೂಗುಸೇತುವೆ ಶಿಥಿಲವಾಗಿದ್ದು, ಇಲ್ಲಿನ...

ರಾಜೀನಾಮೆ ಕೇಳುವ ಮುನ್ನ 25 ದಿನ ಉಪವಾಸ ಸತ್ಯಾಗ್ರಹ ಮಾಡಲಿ: ವಿಪಕ್ಷಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು

ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ತಮ್ಮ...

ಭವಾನಿಪುರ ಚುನಾವಣೆ: ಮಮತಾ ಅರ್ಜಿಗೆ ಪ್ರತಿಕ್ರಿಯಿಸಲು ಸಿಎಂ ಸುವೇಂದುಗೆ ಹೈಕೋರ್ಟ್ ಸೂಚನೆ

ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿ ಮಾಜಿ...