ಭಾನುವಾರ ಮುಂಜಾನೆ ಚಿರತೆಯು ಮೂವರ ಮೇಲೆ ದಾಳಿ ನಡೆಸಿದ್ದು, ಚಿರತೆ ದಾಳಿಯಿಂದ ಮೂವರಿಗೆ ಗಾಯಗಳಾಗಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕಮದಾಳ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಮಲ್ಲಣ್ಣ , ರಮೇಶ್ ಹಾಗೂ ರಂಗಣ್ಣ ಕಮದಾಳ ಚಿರತೆ ದಾಳಿಗೆ ಒಳಗಾಗಿ ಗಾಯಗೊಂಡ ವ್ಯಕ್ತಿಗಳು. ಕಾಮದಾಳ ಗ್ರಾಮದ ಹೊರವಲಯದಲ್ಲಿ ಬಾಲಕನೊಬ್ಬ ಬಹಿರ್ದೆಸೆಗೆ ಹೋದಾಗ ಅಲ್ಲಿ ಚಿರತೆ ಇದ್ದುದನ್ನು ಕಂಡು ಮನೆಯವರಿಗೆ ತಿಳಿಸಿದ್ದಾನೆ. ಬಳಿಕ ಚಿರತೆ ಓಡಿಸಲು ಹೋದ ಮೂವರ ಮೇಲೆ ದಾಳಿ ಮಾಡಿದೆ ಎಂದು ತಿಳಿದುಬಂದಿದೆ.
ದೇಹದ ಹಲವು ಭಾಗಗಳಿಗೆ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಾಹಿತಿ ತಿಳಿದು ಅರಣ್ಯಾಧಿಕಾರಿ ಭೇಟಿ ನೀಡಿದ್ದು, ಚಿರತೆ ಸೆರೆ ಹಿಡಿಯಲು ಸಿದ್ಧತೆ ನಡೆಸುತ್ತಿದ್ದಾರೆ ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಹಾಸನ | ಅರ್ಜುನನ ಸ್ಮಾರಕ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆ; ₹50 ಲಕ್ಷ ವೆಚ್ಚದಲ್ಲಿ ಸ್ಮಾರಕ ನಿರ್ಮಾಣ
ಸುಮಾರು ಎರಡು ತಿಂಗಳಿಂದ ಚಿರತೆಯು ಸುತ್ತಮುತ್ತ ವಾಸವಾಗಿದ್ದು, ಜನರು ಜಾನುವಾರುಗಳನ್ನು ಮೇಯಿಸಲು ಭಯಭೀತರಾಗಿದ್ದಾರೆ.
