ರಾಯಚೂರು ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಪಿಡಿಒಗಳನ್ನು ವರ್ಗಾವಣೆ ಮಾಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಡಳಿತ ವಿಭಾಗದ ನಿರ್ದೇಶಕರು ಆದೇಶ ಹೊರಡಿದ್ದಾರೆ.
ಮಾನ್ವಿ ತಾಲೂಕಿನ ನಕ್ಕುಂದಿ ಗ್ರಾಮ ಪಂಚಾಯತಿ ಪಿಡಿಒ ತಾರಕೇಶ್ವರಿ ಅವರನ್ನು ರಾಯಚೂರು ತಾಲೂಕಿನ ಕಮಲಾಪೂರ ಗ್ರಾಮ ಪಂಚಾಯತಿಗೆ ವರ್ಗಾವಣೆ ಮಾಡಲಾಗಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಗ್ನಿ ಗ್ರಾಮ ಪಂಚಾಯತಿಯ ಪಿಡಿಒ ಹನುಮಂತಪ್ಪ ಟಿ ಅವರನ್ನು ರಾಯಚೂರು ತಾಲೂಕಿನ ಪೂರ್ತಿಪ್ಲಿ ಗ್ರಾಮ ಪಂಚಾಯತಿಗೆ, ಲಿಂಗಸುಗೂರು ತಾಲೂಕಿನ ಕಾಳಾಪೂರ ಗ್ರಾಮ ಪಂಚಾಯತಿಯ ಪಿಡಿಒ ಅಮರಗುಂಡಮ್ಮ ಅವರನ್ನು ನೀರಲಕೇರಾ ಗ್ರಾಮ ಪಂಚಾಯತಿಗೆ ಹಾಗೂ ನೀರಲಕೇರಾ ಗ್ರಾಮ ಪಂಚಾಯತಿಯ ಪಿಡಿಒ ಮಹೇಶ ಅವರನ್ನು ಕಾಳಾಪೂರ ಗ್ರಾಮ ಪಂಚಾಯತಿಗೆ ವರ್ಗಾವಣೆ ಮಾಡಲಾಗಿದೆ.
ಸಿರವಾರ ತಾಲೂಕಿನ ಹರವಿ ಗ್ರಾಮ ಪಂಚಾಯತಿ ಪಿಡಿಒ ಅಕ್ತರ್ ಪಾಷಾ ಅವರನ್ನು ಮಾನ್ವಿ ತಾಲೂಕಿನ ಪೋತ್ನಾಳ ಗ್ರಾಮ ಪಂಚಾಯತಿಗೆ, ಮಸ್ಕಿ ತಾಲೂಕಿನ ತೋರಣದಿನ್ನಿ ಗ್ರಾಮ ಪಂಚಾಯತಿ ಪಿಡಿಒ ತಿಮ್ಮಣ್ಣ ಅವರನ್ನು ದೇವದುರ್ಗ ತಾಲೂಕಿನ ಮುಂಡರಗಿ ಗ್ರಾಮ ಪಂಚಾಯತಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಲಾಗಿದೆ.
ಸಿರವಾರ ತಾಲೂಕಿನ ಹಿರಾ ಗ್ರಾಮ ಪಂಚಾಯತಿ ಪಿಡಿಒ ಪ್ರಭು ಕುಮಾರ ಟಿ ಅವರನ್ನು ಮಾನವಿ ತಾಲೂಕಿನ ಸಾದಾಪೂರ ಗ್ರಾಮ ಪಂಚಾಯತಿಗೆ, ಗಿಲ್ಲೆಸೂಗುರು ಪಿಡಿಒ ರವಿ ಕುಮಾರ ಅವರನ್ನು ದೇವಸುಗೂರು ಗ್ರಾಮ ಪಂಚಾಯತಿಗೆ, ದೇವದುರ್ಗ ತಾಲೂಕಿನ ಗಲಗ ಗ್ರಾಮ ಪಂಚಾಯತಿ ಪಿಡಿಒ ಚನ್ನಪ್ಪ ವರನ್ನು ರಾಯಚೂರು ತಾಲೂಕಿನ ಹೀರಾಪೂರ ಗ್ರಾಮ ಪಂಚಾಯತಿಗೆ ವರ್ಗಾವಣೆ ಮಾಡಲಾಗಿದೆ.
ವರದಿ: ಹಫೀಜುಲ್ಲ, ಸಿಟಿಜನ್ ಜರ್ನಲಿಸ್ಟ್, ರಾಯಚೂರು